ಈ ರೀತಿಯ ಘಟನೆ ನಡೆದಿರೋದು ಅಮೆರಿಕದ ಟೆಕ್ಸಾಸ್ʻನಲ್ಲಿ. ನಿಕಾ ದಿವಾ ಅನ್ನೋವ್ರ ಮುದ್ದಿನ ಮಗುವಾಗಿ ಹುಟ್ಟಿರುವ ಈ ಕಂದನಿಗೆ ಹುಟ್ಟುವಾಗಲೇ 32 ಹಲ್ಲು ಇವೆಯಂತೆ. ಆ ಎಲ್ಲ 32 ಹಲ್ಲುಗಳೂ ಅಚ್ಚುಕಟ್ಟಾಗಿ ಬೆಳೆದಿವೆ.
ಮಗು ಹುಟ್ಟುವಾಗ ಹಲ್ಲು ಇರುವುದಿಲ್ಲ. 6 ರಿಂದ 12 ತಿಂಗಳಲ್ಲಿ ಮಕ್ಕಳಿಗೆ ಹಲ್ಲು ಬರಲು ಆರಂಭಿಸುತ್ತದೆ. ಇನ್ನು ಬುದ್ಧಿವಂತಿಕೆಯ ಹಲ್ಲು ಸೇರಿದಂತೆ 32 ಹಲ್ಲು ಬರಲು ಸರಿಸುಮಾರು 21 ವರ್ಷವಾಗಬೇಕು. ಒಂದೆರಡು ವರ್ಷ ಹೆಚ್ಚು ಕಡಿಮೆ ಆದರೂ ಅಚ್ಚರಿ ಇಲ್ಲ. ಆದರೆ ಇಲ್ಲೊಂದು ಮಗು ಹುಟ್ಟುವಾಗಲೇ 32 ಹಲ್ಲಿನೊಂದಿಗೆ ಜನಿಸಿದೆ. ಇದು ಅಚ್ಚರಿಯಾದರೂ ಸತ್ಯ. ಅಮೆರಿಕದ ಟೆಕ್ಸಾಸ್‌ನ ಮಹಿಳೆ ನಿಕಾ ದಿವಾ, ತಮ್ಮ ಮಗುವಿನ ವಿಡಿಯೋ ಹಂಚಿಕೊಂಡು ಅಚ್ಚರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಇದು ಪವಾಡವೇ.. ಖಂಡಿತಾ ಅಲ್ಲ. ಅದ್ಭುತವೇ.. ಅಪರೂಪವೇನೋ ಹೌದು, ಅದ್ಭುತವಂತೂ ಅಲ್ಲ. ಹಾಗಾದರೆ.. ಇದು ಕಾಯಿಲೆಯೇ.. ಖಂಡಿತಾ ಹೌದು. ಆದರೆ.. ಗಂಭೀರ ಸಮಸ್ಯೆಗಳಿಲ್ಲ.
ಹುಟ್ಟುವಾಗಲೇ ಈ ರೀತಿ ಹಲ್ಲಿನೊಂದಿಗೆ ಹುಟ್ಟುವ ಮಕ್ಕಳ ಸಮಸ್ಯೆಗೆ ʻನ್ಯಾಟಲ್ ಟೀಥ್ ಡಿಸೀಸ್ʼ ಎಂದು ಕರೆಯುತ್ತಾರೆ. ಇಷ್ಟು ದಿನ ಈ ನ್ಯಾಟಲ್ ಟೀಥ್ ಸಮಸ್ಯೆಯಲ್ಲಿ ಹುಟ್ಟುವ ಮಗ ಮುಂಭಾಗದ ನಾಲ್ಕು ಹಲ್ಲು, ದವಡೆ ಬಾಗದಲ್ಲಿ ನಾಲ್ಕರಿಂದ 6 ಹಲ್ಲು ಹೀಗೆ, ಅಲ್ಲೊಂದು ಇಲ್ಲೊಂದು ಹಲ್ಲುಗಳಿದ್ದ ರೀತಿ ಹುಟ್ಟುತ್ತಿದ್ದವು. ಆದರೆ ವಯಸ್ಕರಂತೆ 32 ಹಲ್ಲುಗಳನ್ನು ಪಡೆದು ಹುಟ್ಟಿದ ಉದಾಹರಣೆಗಳಿರಲಿಲ್ಲ.
ಈ ಕಾಯಿಲೆಯಿಂದ ಮಗುವಿಗೆ ಗಂಭೀರ ಸಮಸ್ಯೆಗಳಿಲ್ಲ. ಆದರೆ ಚಿಕ್ಕ ವಯಸ್ಸಿನಲ್ಲೇ ಎರಡನೇ ಬಾರಿಗೆ ಹುಟ್ಟುವ ಹಲ್ಲುಗಳು ಉದುರಿ ಹೋಗುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿದರೆ ಮಗುವಿನ ಹೆಚ್ಚಿನ ಸಮಸ್ಯೆಗಳಿಲ್ಲ. ಇತ್ತ ಪುಟ್ಟ ಮಗುವಿಗೆ ಹಾಲುಣಿಸುವಾಗ ತಾಯಿಗೆ ಸಮಸ್ಯೆಗಾವು ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಸದ್ಯ ಮಗುವಿನ ಆರೋಗ್ಯ ಉತ್ತಮವಾಗಿದೆ. ಆದರೆ ಪೋಷಕರ ಆತಂಕ ಮಾತ್ರ ಹೆಚ್ಚಾಗಿದೆ. ಗರ್ಭಾವಸ್ಥೆಯಲ್ಲಿ ಕೆಲ ಹಾರ್ಮೋನ್ ಸಮಸ್ಯೆಗಳು, ಹಾರ್ಮೋನ್ ಉತ್ಪಾದನೆಯಲ್ಲಿ ಆಗುವ ವ್ಯತ್ಯಾಸಗಳಿಂದ ಈ ರೀತಿ ಆಗುವ ಸಾಧ್ಯತೆ ಇದೆ.ಹೀಗಾಗಿ ಗರ್ಭಾವಸ್ಥೆಯಲ್ಲಿ ವೈದ್ಯರ ಸೂಚನೆ, ಮಾರ್ಗದರ್ಶನವನ್ನು ಚಾಚುತಪ್ಪದೆ ಪಾಲನೆ ಮಾಡಬೇಕು. ಪ್ರೊಟಿನ್ ಪ್ರಮಾಣಗಳು ಸರಿಯಾದ ಪ್ರಮಾಣದಲ್ಲಿರಬೇಕು. ಉತ್ತಮ ಎಂದು ಪೋಷಾಕಾಂಶಗಳ ಆಹಾರವನ್ನು ವಿಪರೀತ ಸೇವಿಸುವುದು ಉತ್ತಮವಲ್ಲ. ಸಮತೋಲನ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.



