ಕೊಪ್ಪಳದಲ್ಲಿ ಸ್ಟಾಪ್ ನೀಡದೇ ಇದ್ದ ಬಸ್ಸಿಗೆ ಕಲ್ಲಿನಲ್ಲಿ ಹೊಡೆದ ಮಹಿಳೆ 5 ಸಾವಿರ ರೂ. ದಂಡ ಕಟ್ಟಿದ್ದಾರೆ. ಬಸ್ ಗಳು ಫುಲ್ ರಷ್ ಆಗುವ ಹಿನ್ನಲೆ ಕಾದು ಕಾದು ಸುಸ್ತಾಗಿ ಮಹಿಳೆಯೊಬ್ಬಳು ಬಸ್ಗೆ ಕಲ್ಲು ಹೊಡೆದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. . ಪಾಪಿನಾಯಕಹಳ್ಳಿಯ ಲಕ್ಷ್ಮಿ ಹಾಗು ಆಕಿಯೊಂದಿಗೆ ಇನ್ನೋರ್ವ ಮಹಿಳೆ ಭಾನುವಾರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ನಂತರ ಲಕ್ಷ್ಮಿ ತನ್ನ ತವರು ಮನೆ ಇಲಕಲ್ಗೆ ಹೋಗಬೇಕಾಗಿತ್ತು. ಇದರಿಂದಾಗಿ ಹೊಸಲಿಂಗಾಪುರ ಬಳಿ ಬಸ್ಸಿಗೆ ಕಾಯ್ದಿದ್ದಾರೆ. ಬಸ್ಸುಗಳು ಬರುತ್ತಿವೆ.. ಹೋಗುತ್ತಿವೆ. ಒಂದೇ ಒಂದು ಬಸ್ ನಿಲ್ಲುತ್ತಿಲ್ಲ. ಸುರಿಯುತ್ತಿರುವ ಮಳೆ.. ತಾಳ್ಮೆಯಿಂದ ಒಂದು ಗಂಟೆ..ಎರಡು ಗಂಟೆ..ಮೂರು ಗಂಟೆ.. ನಾಲ್ಕು ಗಂಟೆ.. ಐದು ಗಂಟೆ ಕಾದ ಬಳಿಕವೂ ಬಸ್ ಬಂದವು, ನಿಲ್ಲುತ್ತಿಲ್ಲ. ಬೇಸತ್ತು ಹೋದ ಮಹಿಳೆ ಬಸ್ಸಿಗೆ ಕೈಗೆ ಸಿಕ್ಕ ಕಲ್ಲನ್ನು ರಪ್ಪಂತ ಬೀಸಿದ್ದಾರೆ.
ಕೈ ಹಾಕಿ ನಿಲ್ಲಿಸುವಂತೆ ಮನವಿ ಮಾಡಿದಾಗ ನಿಲ್ಲದ ಬಸ್ಸು, ಕಲ್ಲು ಬಿದ್ದ ಮೇಲೆ ನಿಂತಿದೆ. ಬಸ್ ಚಾಲಕ ಪ್ಯಾಸೆಂಜರ್ ಸಮೇತ ಪೊಲೀಸ್ ಸ್ಟೇಷನ್ನಿಗೆ ಬಂದು 6 ಸಾವಿರ ದಂಡ ಕಟ್ಟಿಸಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವ ಸಮಯ ರಾತ್ರಿ 8 ಗಂಟೆ. ಬೆಳಗ್ಗೆ ದಂಡ ಕಟ್ಟಿಸಿಕೊಂಡಿದ್ದಾರೆ.
ಸುಮಾರು ಹೊತ್ತು ಕಾಯ್ದಿದೆವು. ಒಂದೂ ಬಸ್ ನಿಲ್ಲುತ್ತಿರಲಿಲ್ಲ. ಮಳೆ ಬೇರೆ ಹನಿಯುತ್ತಲೇ ಇತ್ತು. 5 ಗಂಟೆಯಷ್ಟು ಸಮಯ ಕಾದ ಮೇಲೆ ತಾಳ್ಮೆ ಕಳೆದುಕೊಂಡೆ. ಕೊನೆಗೆ ಕಲ್ಲು ತೆಗೆದುಕೊಂಡು ಹೊಡೆದೆ ಎನ್ನುತ್ತಿದ್ದಾರೆ ಲಕ್ಷ್ಮಿ. ಹಾಗಾದರೆ ತಪ್ಪು ಮಾಡಿದ್ದು ಯಾರು..? ಲಕ್ಷ್ಮಿಗೆ ಸತತ 5 ಗಂಟೆ ಕಾದರೂ ಒಂದೂ ಬಸ್ ನಿಲ್ಲಿಸದೆ ಹೋಗಿದ್ದೇಕೆ..? ಸರ್ಕಾರಿ ವಾಹನದ ಮೇಲೆ ಕಲ್ಲು ತೂರುವುದು ಅಪರಾಧ ನಿಜ. ಹಾಗೆ ಮಾಡುವುದು ತಪ್ಪು. ಆದರೆ, ಬಸ್ಸು ನಿಲ್ಲಿಸದೆ ಹೋದವರು ತಪ್ಪು ಮಾಡಿಲ್ಲವೇ.. ಆ ರೂಟಿನಲ್ಲಿ ಲಕ್ಷ್ಮಿ ಹೇಳಿದ ಆ ಸಮಯದಲ್ಲಿ ಸಂಚರಿಸಿದ ಬೇರೆ ಸರ್ಕಾರಿ ಬಸ್ಸುಗಳ ಚಾಲಕ/ಕಂಡಕ್ಟರ್ ವಿವರ ಇರುತ್ತದೆಯಲ್ಲವೇ. ಅವರಿಗೇಕೆ ನೋಟಿಸ್ ಕೊಡಬಾರದು..? ವಿಚಾರಣೆ ಮಾಡಬಾರದು..? ಈಗಾಗಲೇ ಬಸ್ ನಿಲ್ಲಿಸದೇ ಹೋಗುವಂತಿಲ್ಲ ಎಂಬ ಸುತ್ತೋಲೆಯನ್ನೂ ಕೆಎಸ್‍ಆರ್‍ಟಿಸಿ ಹೊರಡಿದೆಯಲ್ಲವೇ.. ತಪ್ಪು ಯಾರದು?



