ಆತನ ಹೆಸರು ಸಿಲ್ವಿಯೋ ಬೆರ್ಲುಸ್ಕೋನಿ (Silvio Berlusconi) . ಇಟಲಿಯ ಮಾಜಿ ಪ್ರಧಾನಿ(Former Italian Prime Minister) . ಉದ್ಯಮಿ. ಮಾಧ್ಯಮ ಲೋಕದಲ್ಲಿ ದಿಗ್ಗಜ. ಆತನಿಗೆ ಒಟ್ಟಾರೆ 54 ಸಾವಿರ ಕೋಟಿ ಆಸ್ತಿಯಿತ್ತು. ಇಬ್ಬರು ಹೆಂಡತಿಯರಿದ್ದರೂ, ಇಬ್ಬರೂ ಮೃತಪಟ್ಟಿದ್ದರು. ಇಬ್ಬರು ಪತ್ನಿಯರಿಂದ ಐವರು ಮಕ್ಕಳಿದ್ದರು. ಮೊಮ್ಮಕ್ಕಳೂ ಇದ್ದರು. ಆದರೆ ಸಿಲ್ವಿಯೋ ಬೆರ್ಲುಸ್ಕೋನಿ ಕೊನೆಗಾಲದಲ್ಲಿ ಜೊತೆಯಾಗಿದ್ದದ್ದು 33 ವಯಸ್ಸಿನ ಪ್ರೇಯಸಿ ಮಾರ್ಟಾ ಫ್ಯಾಸಿನಾ ( Marta Fascina) ಮಾತ್ರ. ಆಕೆಗಾಗಿ ಸಿಲ್ವಿಯೋ ಬೆರ್ಲುಸ್ಕೋನಿ ಆಸ್ತಿಯ ಒಂದು ಭಾಗವನ್ನು ಕೊಟ್ಟು ಹೋಗಿದ್ದಾರೆ. ಆಸ್ತಿಯ (over Rs 900 crore) ಮೌಲ್ಯ 906 ಕೋಟಿ.
906 ಕೋಟಿ ರೂಪಾಯಿ ಆಸ್ತಿಯನ್ನು (over Rs 900 crore) ಕೊನೆಗಾಲದಲ್ಲಿ ತಮ್ಮ ಗೆಳತಿಯಾಗಿದ್ದ 33 ವರ್ಷದ ಮಾರ್ಟಾ ಫ್ಯಾಸಿನಾಗೆ ನೀಡಬೇಕು ಎಂದು ವಿಲ್ ಬರೆದಿಟ್ಟು ಹೋಗಿದ್ದಾರೆ. ಇದೇ ಉಯಿಲಿನಲ್ಲಿ ತಮ್ಮ ಆಸ್ತಿ ಬಹುಶಃ 54 ಸಾವಿರ ಕೋಟಿ ಎಂದೂ ಅವರು ತಿಳಿಸಿದ್ದಾರೆ. 2020ರ ಮಾರ್ಚ್ನಲ್ಲಿ ಬೆರ್ಲುಸ್ಕೋನಿ (Silvio Berlusconi)ಹಾಗೂ ಫ್ಯಾಸಿನಾ ( Marta Fascina) ರಿಲೇಷನ್ಷಿಪ್ನಲ್ಲಿ ಇದ್ದಾರೆ ಎನ್ನುವುದು ಗೊತ್ತಾಗಿತ್ತು. ಆದರೆ, ಇಬ್ಬರೂ ಎಂದೂ ವಿವಾಹವಾಗಬೇಕು ಎಂದು ನಿರ್ಧಾರ ಮಾಡಿರಲಿಲ್ಲ. ಮೂಲಗಳ ಪ್ರಕಾರ ಸಾಯುವ ಕೊನೆಗಳಿಗೆಯಲ್ಲಿ ಮಾರ್ಟಾ ಫ್ಯಾಸಿನಾರನ್ನು ತನ್ನ ಹೆಂಡತಿ ಎಂದು ಹೇಳಿ ಬೆರ್ಲುಸ್ಕೋನಿ ವಿಧಿವಶರಾದರು ಎನ್ನಲಾಗಿದೆ.
ಇನ್ನು ಮಾರ್ಟಾ ಫ್ಯಾಸಿನಾ ಇಟಲಿಯ ಕೆಳಮನೆಯ ಸದಸ್ಯರು. 2018ರ ಇಟಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರು. ಬೆರ್ಲುಸ್ಕೋನಿ ಸಾವಿನ ಬಳಿಕ ಅವರ ವ್ಯವಹಾರವನ್ನು ಐವರು ಮಕ್ಕಳ ಪೈಕಿ ಇಬ್ಬರು ಹಿರಿಯರಾದ ಮಾರಿಕಾ ಹಾಗೂ ಪಿಯರ್ ಸಿಲ್ವಿಯೋ ನೋಡಿಕೊಳ್ಳಲಿದ್ದಾರೆ. ಇಬ್ಬರೂ ಕೂಡ ಈಗಾಗಲೇ ಬೆರ್ಲುಸ್ಕೋನಿ ವ್ಯವಹಾರದಲ್ಲಿ ವ್ಯವಸ್ಥಾಪಕ ಅಧಿಕಾರಿಯ ಸ್ಥಾನವನ್ನು ಹೊಂದಿದ್ದರು. ತಮ್ಮ ಕುಟುಂಬ ವ್ಯವಹಾರದಲ್ಲಿ ಬೆರ್ಲುಸ್ಕೋನಿ ಅವರ ಪಾಲಿ ಶೇ. 53ರಷ್ಟಿದೆ. ಇದನ್ನು ತಮ್ಮ ಐವರು ಮಕ್ಕಳಿಗೂ ಹಂಚಿರುವುದಾಗಿ ವಿಲ್ನಲ್ಲಿ ತಿಳಿಸಿದ್ದಾರೆ.
ಸೆಕ್ಸ್ ಸ್ಕ್ಯಾಂಡಲ್ಸ್, ಭ್ರಷ್ಟಾಚಾರ, ತೆರಿಗೆ ವಂಚನೆ ಸೇರಿದಂತೆ ಸಾಲು ಸಾಲು ಆರೋಪಗಳನ್ನು ಇವರು ಎದುರಿಸಿದ್ದ ಬೆರ್ಲುಸ್ಕೋನಿ, 2011ರಲ್ಲಿಯೇ ಜನಪ್ರಿಯತೆ ಕಳೆದುಕೊಂಡಿದ್ದರು. ಅದಾದ ನಂತರ ಒಂಟಿಯಾಗಿದ್ದ ಬೆರ್ಲುಸ್ಕೋನಿ ಏಕಾಂಗಿಯಾಗಿದ್ದರು. ಆಗ ಅವರಿಗೆ ಜೊತೆಯಾಗಿದ್ದವರು ಆಸರೆಯಾಗಿದ್ದವರು ಮಾರ್ಟಾ ಫ್ಯಾಸಿನಾ. ಕೊನೆಗಾಲದವರೆಗೂ ಜೊತೆಗಿದ್ದರೂ, ಇಬ್ಬರೂ ಮದುವೆಯಾಗಿರಲಿಲ್ಲ. ಆದರೆ ವಿಲ್ ಬರೆಯುವಾಗ ಮಕ್ಕಳಿಗೆ ಈಕೆ ನನ್ನ ಹೆಂಡತಿ ಎಂದು ಘೋಷಿಸಿ ವಿಲ್ ಬರೆದಿದ್ದಾರೆ ಎನ್ನಲಾಗಿದೆ.



