ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. 8 ಷರತ್ತುಗಳನ್ನೂ ವಿಧಿಸಿದೆ ಹೈಕೋರ್ಟ್.
6 ವಾರಗಳ ಕಾಲ ಚಿಕಿತ್ಸೆ ಗಾಗಿ ಮಧ್ಯಂತರ ಜಾಮೀನು ದೊರೆತಿದ್ದು, ಷರತ್ತುಗಳನ್ನೂ ವಿಧಿಸಲಾಗಿದೆ.
ದರ್ಶನ್ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಸಿಕ್ಕಿದೆ. ಒಂದು ವಾರದಲ್ಲಿ ಚಿಕಿತ್ಸೆ ವಿವರ ನೀಡುವಂತೆ ಹೈಕೋರ್ಟ್ ಷರತ್ತು ವಿಧಿಸಿದೆ. ಅಲ್ಲದೆ ದರ್ಶನ್ ಪಾಸ್ ಪೋರ್ಟ್ ಸೆರಂಡರ್ ಮಾಡುವಂತೆ ಷರತ್ತು ಹಾಕಿದೆ.
ಅಲ್ಲದೆ ಇನ್ನೂ ಕೆಲವು ಷರತ್ತುಗಳನ್ನು ವಿಧಿಸಿದೆ.
ದರ್ಶನ್ ಮಧ್ಯಂತರ ಜಾಮೀನಿಗೆ ನೀಡಿರುವ ಷರತ್ತುಗಳೇನೆಂದರೆ
1. ಪಾಸ್ ಪೋರ್ಟ್ ಸರಂಡರ್
2. 2 ಲಕ್ಷ ರೂಪಾಯಿ ಬಾಂಡ್ ನೀಡಬೇಕು.
3. ಇಬ್ಬರ ಶ್ಯೂರಿಟಿ ಕೊಡಬೇಕು
4. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸ ಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು.
ಈ ಎಲ್ಲ ಷರತ್ತುಗಳಲ್ಲಿ ಯಾವುದೇ ಷರತ್ತು ಉಲ್ಲಂಘನೆ ಮಾಡಿದರೂ ಜಾಮೀನು ರದ್ದಾಗಲಿದೆ.
ಇವುಗಳಲ್ಲಿ ಶ್ಯೂರಿಟಿ, 2 ಲಕ್ಷ ಬಾಂಡ್ ಹಾಗೂ ಇಬ್ಬರ ಶೂರಿಟಿ ಪೂರೈಸಿದ ಕೂಡಲೇ ದರ್ಶನ್ ಜೈಲಿನಿಂದ ಬಿಡುಗಡೆಯಾಗಳಿದ್ದಾರೆ. ಇದರೊಂದಿಗೆ ದರ್ಶನ್ ಅವರ 130ಕ್ಕೂ ಹೆಚ್ಚು ದಿನಗಳ ಜೈಲು ವಾಸ ಅಂತ್ಯವಾಗಲಿದೆ. ಅಂದಹಾಗೆ ಇದು ಮಧ್ಯನ್ತರ ಜಾಮೀನು ಮಾತ್ರ.



