ಗಣೇಶ್ ಸಿನಿಮಾಗಳಲ್ಲಿ ಇಬ್ಬರು ಹೀರೋಯಿನ್ಸ್ ಇರೋದು ಕಾಮನ್. ಅದರಲ್ಲೂ ಇತ್ತೀಚೆಗೆ ಬಂದ ಚಿತ್ರಗಳಲ್ಲಿ ಅದು ಇನ್ನೂ ಹೆಚ್ಚಾಗಿದೆ. ಗಣೇಶ್ ಅಂದ್ರೇನೇ ರೊಮ್ಯಾಂಟಿಕ್ ಕಾಮಿಡಿ.
ಇನ್ನು ಡೈರೆಕ್ಟರ್ ಶ್ರೀನಿವಾಸ ರಾಜು ಅಂದ್ರೆ ರಕ್ತ ರಕ್ತ ಚಿತ್ರಹಿಂಸೆ. ನೋ ರೊಮ್ಯಾನ್ಸ್. ಓನ್ಲಿ ರೇಪ್. ಅಂತಹ ದಾಖಲೆ ಅವರದ್ದು.
ಇಬ್ಬರ ಟ್ರ್ಯಾಕ್ ರೆಕಾರ್ಡ್ ಹೀಗಿದ್ದರೂ.. ಇವರಿಬ್ಬರೂ ಜೊತೆಯಾಗಿ ಕೃಷ್ಣಂ ಪ್ರಣಯ ಸಖಿ ಸೃಷ್ಟಿಸಿದ್ದಾರೆ. ವಿಶೇಷ ಏನಂದ್ರೆ, ಈ ಚಿತ್ರದಲ್ಲಿ ಗಣೇಶ್ ೮ ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡ್ತಾರಂತೆ. ಒಬ್ಬ ನಾಯಕನ ಜೊತೆ ಒಬ್ಬರು, ಇಬ್ಬರು ಅಥವಾ ಮೂವರು ರೊಮ್ಯಾನ್ಸ್ ಮಾಡುವ ಕಥೆ ನೋಡಿದ್ದವರಿಗೆ ಶ್ರೀನಿವಾಸ ರಾಜು ಹೊಸದೇ ರೀತಿಯ ಕಥೆ ಹೇಳ್ತಿದಾರೆ.
ನನಗೆ ಕಥೆ ಹೇಳುವುದಕ್ಕೆ ‘ದಂಡುಪಾಳ್ಯ’ ಡೈರೆಕ್ಟರ್ ಶ್ರೀನಿವಾಸರಾಜು ಬರ್ತಾ ಇದ್ದಾರೆ ಎಂದಾಗ ಅಚ್ಚರಿ ಆಗಿತ್ತು. ಬಹುಶಃ ಇವರು ನನಗೆ ಹೊಸ ಇಮೇಜ್ ಕೊಡ್ತಾರೆ ಎಂದುಕೊಂಡಿದ್ದೆ. ಆದರೆ ಶುರುವಿನಲ್ಲೇ ಎಂಟು ನಾಯಕಿಯರು ಬರ್ತಾರೆ ಎಂದಾಗ, ಪಕ್ಕಾ ಇದು ನನ್ನ ಶೈಲಿಯ ಸಿನಿಮಾ ಅಂತ ಅನ್ನಿಸಿತು. ನಿರ್ಮಾಪಕರು ಧಾರಾಳವಾಗಿ ಹಣ ಖರ್ಚು ಮಾಡಿದ್ದಾರೆ. ನನ್ನ ವೃತ್ತಿ ಬದುಕಿನ ಬಿಗ್ ಬಜೆಟ್ ಸಿನಿಮಾ ಇದು ಎಂದು ಹೇಳ್ಕೊಂಡಿದ್ದಾರೆ ಗಣೇಶ್.
ಒಂದು ಫ್ಯಾಮಿಲಿ ಸ್ಟೋರಿಯನ್ನು ಹೀಗೂ ಹೇಳಬಹುದಾ ಅನ್ನೋದೇ ಥ್ರಿಲ್ ಕೊಡುತ್ತೆ. ನಿರ್ದೇಶಕರು ನನ್ನನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ ಎಂದು ಹೇಳಿರೋ ಗಣೇಶ್ ಚಿತ್ರದ ರಿಲೀಸ್ʻಗೆ ಕಾಯ್ತಿದ್ದಾರೆ. ಆಗಸ್ಡ್ 15ರಂದು ಕೃಷ್ಣಂ ಪ್ರಣಯ ಸಖಿ ರಿಲೀಸ್.
ಮಾಳವಿಕಾ ನಾಯರ್ ಪ್ರಧಾನ ಹೀರೋಯಿನ್. ತಮಿಳು, ತೆಲುಗಿನಲ್ಲಿ ಖ್ಯಾತಿ ಗಳಿಸಿರುವ ಮಾಳವಿಕಾ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. . ಶರಣ್ಯಾ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಿವಧ್ವಜ್, ಗಿರಿ ಮುಂತಾದವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದಾರೆ. ತ್ರಿಶೂಲ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ರುದ್ರಪ್ಪ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಇತ್ತೀಚೆಗೆ ರಿಲೀಸ್ ಆದ ಚಿನ್ನಮ್ಮ ಹಾಡು ಟ್ರೆಂಡ್ ಆಗಿದೆ.



