ಬಿಹಾರದಲ್ಲಿ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಎರಡನೇ ಹಂತ ನವೆಂಬರ್ 11ಕ್ಕೆ ಇದೆ. ಫಲಿತಾಂಶ ನವೆಂಬರ್ 14ಕ್ಕೆ ಬರಲಿದೆ. ಹಲವು ಸಮೀಕ್ಷೆಗಳ ಪ್ರಕಾರ NDA ನೇತೃತ್ವದ ಬಿಜೆಪಿ+ಜೆಡಿಯು ಅಧಿಕಾರಕ್ಕೆ ಬರಲಿವೆ. ಕೆಲವು ಸಮೀಕ್ಷೆಗಳಲ್ಲಿ ಅದಕ್ಕೆ ಉಲ್ಟಾ ಆಗಿ ಮಹಾಘಟಬಂಧನ್ (RJD + ಕಾಂಗ್ರೆಸ್) ಅಧಿಕಾರಕ್ಕೆ ಬರಲಿವೆ. ಇವೆಲ್ಲದರ ನಡುವೆ ಸಟ್ಟಾ ಬಜಾರ್ ಸಮೀಕ್ಷೆಯೂ ಇದೆ. ಈ ಸಟ್ಟಾ ಬಜಾರ್ ಲೆಕ್ಕವೇ ವಿಭಿನ್ನ. ಅಲ್ಲಿ ಬೆಟ್ಟಿಂಗ್ ನಡೆಯುತ್ತದೆ. ಸಟ್ಟಾ ಬಜಾರ್ ಲೆಕ್ಕದ ಪ್ರಕಾರ ವಿಶೇಷವಾಗಿ ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಪ್ರಕಾರ BJP,NDA ಪರ ಬೆಟ್ಟಿಂಗ್ ಕಟ್ಟುವವರಿಗೆ 35 ಪೈಸೆ RJD, ಕಾಂಗ್ರೆಸ್ ಪಕ್ಷಕ್ಕೆ 1 ರೂ.80 ಪೈಸೆ ಕೊಡಲಾಗುತ್ತದೆ. ಹಾಗಾದರೆ ಗೆಲ್ಲೋದು ಯಾರು ಎಂದು ಸಟ್ಟಾ ಬಜಾರ್ ಹೇಳ್ತಾ ಇದೆ.. ಅದೇ ವಿಶೇಷ.
ಸಟ್ಟಾ ಬಜಾರ್ ಪ್ರಕಾರ ಬಿಹಾರ ಫಲಿತಾಂಶ ಹೀಗೆ ಇರಲಿದೆ :
ಎನ್‌ಡಿಎ (ಎನ್‌ಡಿಎ: ಬಿಜೆಪಿ + ಜೆಡಿಯು + ಇತರೆ): 128-147 ಸೀಟ್‌ಗಳು (ಅಧಿಕಾರದ ಅಂಕಗಳು). ಇದರಲ್ಲಿ ಬಿಜೆಪಿ 40-60, ಜೆಡಿಯು 35-50 ಸೀಟ್‌ಗಳನ್ನು ಪಡೆಯಬಹುದು ಎಂದು ಅಂದಾಜು.
ಮಹಾಘಠಬಂಧನ್ (ಆರ್‌ಜೆಡಿ + ಕಾಂಗ್ರೆಸ್ + ಇತರೆ): 80-85 ಸೀಟ್‌ಗಳು. ಆರ್‌ಜೆಡಿ 32-40 ಸೀಟ್‌ಗಳೊಂದಿಗೆ ಮುಂದಿರುವ ಸಾಧ್ಯತೆ. ಕಾಂಗ್ರೆಸ್ ಡಬಲ್ ಡಿಜಿಟ್ ಕೂಡಾ ಇಲ್ಲ.
ಜನ್ ಸುರಾಜ್ ಪಕ್ಷ (ಪ್ರಶಾಂತ್ ಕಿಶೋರ್): 20-20 ಸೀಟ್‌ಗಳು – ಇದು ಚುನಾವಣೆಯನ್ನು ಟ್ರಯಾಂಗಲ್ ಫೈಟ್ ಆಗುವಂತೆ ಮಾಡುತ್ತದೆ.
ಇದು ಸಟ್ಟಾ ಬಜಾರ್ ಸೀಟಿನ ಲೆಕ್ಕ. ಇದಿಷ್ಟನ್ನೂ ಲೆಕ್ಕ ಮಾಡಿಟ್ಟುಕೊಂಡಿರುವ ಬೆಟ್ಟಿಂಗ್ ಮಾರುಕಟ್ಟೆಯಲ್ಲಿ ಎನ್‌ಡಿಎ: ಬಿಜೆಪಿ + ಜೆಡಿಯು + ಇತರೆ ಪಕ್ಷಗಳಿಗೆ ಬಹುಮತ ಗ್ಯಾರಂಟಿ ಎಂದು 100 ರೂ. ಬೆಟ್ಟಿಂಗ್ ಕಟ್ಟಿದರೆ.. ಹಾಗೆಯೇ ಎನ್‌ಡಿಎ ಗೆದ್ದರೆ, 100 ರೂ.ಗೆ 125 ರೂ ಕೊಡ್ತಾರೆ. ಇಲ್ಲವೇ ಮಹಾಘಟಬಂಧನ್ ಗೆಲ್ಲಲಿದೆ ಎಂದು ಬೆಟ್ಟಿಂಗ್ ಕಟ್ಟಿದರೆ.. 100 ರೂ.ಗೆ 180 ರೂ. ಕೊಡ್ತಾರೆ. ಈ ಲೆಕ್ಕಗಳು NDAಗೆ ಸ್ಪಷ್ಟ ಗೆಲುವನ್ನು ಸೂಚಿಸುತ್ತವೆ.
ಹಣ ಕೊಡುವುದು ಕಾಂಗ್ರೆಸ್ ಪರ ಅಲ್ಲವಾ ಎನ್ನಬಹುದು.. ಬೆಟ್ಟಿಂಗ್ ಮಾರುಕಟ್ಟೆ ಗೊತ್ತಿದ್ದವರಿಗೆ ಅದು ಸುಲಭವಾಗಿ ಅರ್ಥವಾಗುತ್ತದೆ. ಎಲ್ಲಿ ರಿಸ್ಕ್ ಕಡಿಮೆ ಇದೆಯೋ.. ಅಲ್ಲಿ ಕಡಿಮೆ ಲಾಭ ಇರುತ್ತದೆ. ರಿಸ್ಕ್ ಹೆಚ್ಚು ಇರುವ ಕಡೆ ಹೆಚ್ಚು ಲಾಭ. ಎನ್‌ಡಿಎ ಪರ ಬೆಟ್ಟಿಂಗ್ ಕಟ್ಟುವವರಿಗೆ ರಿಸ್ಕ್ ಕಡಿಮೆ. ಮಹಾಘಟಬಂಧನ್ ಪರ ಬೆಟ್ಟಿಂಗ್ ಕಟ್ಟುವವರಿಗೆ ರಿಸ್ಕ್ ಹೆಚ್ಚು.
CM ಸ್ಪರ್ಧೆಯ ಲೆಕ್ಕಾಚಾರದಲ್ಲೂ ಅಷ್ಟೇ. ನಿತೀಶ್ ಕುಮಾರ್ ಅವರಿಗಿಂತ ತೇಜಸ್ವಿ ಯಾದವ್ ಜನಪ್ರಿಯ ಆಯ್ಕೆಯಾಗಿದ್ದರೂ.. ಸಿಎಂ ರೇಸಿನಲ್ಲಿ ಬೆಟ್ಟಿಂಗ್ ಕಟ್ಟುವವರು ರಿಸ್ಕ್ ತೆಗೆದುಕೊಳ್ಳೋದಿಲ್ಲ.
ನಿತೀಶ್ ಕುಮಾರ್ ಬೆಟ್ಟಿಂಗ್ ಕಟ್ಟಿದವರಿಗೆ 100 ರೂ.ಗೆ 110 ರೂ ಕೊಡ್ತಾರೆ. 10 ರೂ. ಲಾಭ. ತೇಜಸ್ವಿ ಯಾದವ್ ಪರ 100 ರೂ.ಗೆ 150 ರೂ. ಕೊಡ್ತಾರೆ. ಪ್ರಶಾಂತ್ ಕಿಶೋರ್ ಸಿಎಂ ಆಗ್ತಾರೆ ಎಂದು ಬೆಟ್ಟಿಂಗ್ ಕಟ್ಟಿ ಗೆದ್ದರೆ 100 ರೂ.ಗೆ 500 ರೂ. ಕೊಡ್ತಾರೆ. ಅಂದಹಾಗೆ ಇದೂವರೆಗೆ ಸಟ್ಟಾ ಬಜಾರ್ ಲೆಕ್ಕ ಸುಳ್ಳಾಗಿಲ್ಲ.



