ಮೊದಲ ಸಿನಿಮಾ ಅಟ್ಟರ್ ಫ್ಲಾಪ್. ೨ನೇ ಸಿನಿಮಾ ಇನ್ನೂ ರಿಲೀಸ್ ಆಗದೇ ಇದ್ದರೂ, ಕಂಪ್ಲೀಟ್ ಸೇಲ್. ಬ್ಯಾಡ್ ಮ್ಯಾನರ್ಸ್(Bad manners). ಇದೀಗ ಜಯಣ್ಣ-ಭೋಗೇಂದ್ರ (Jayanna-Bhogendra) ಪಾಲಾಗಿದೆ. ಅಭಿಷೇಕ್ ಅಂಬರೀಷ್ (Abhishek Ambarish) ಅವರ ೨ನೇ ಸಿನಿಮಾ ಬ್ಯಾಡ್ ಮ್ಯಾನರ್ಸ್. ಮೊದಲ ಸಿನಿಮಾ ಅಮರ್, ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಆದರೆ ೨ನೇ ಸಿನಿಮಾ ಹಾಗಾಗಿಲ್ಲ. ಮೊದಲ ಸಿನಿಮಾ ಫ್ಲಾಪ್ ಆದರೂ ದೊಡ್ಡ ಬಿಸಿನೆಸ್ ಆಗಿದ್ದೇಕೆ ಅನ್ನೋದಕ್ಕೆ ಕಾರಣ, ಡೈರೆಕ್ಟರ್.
ದುನಿಯಾ ಸೂರಿ (Duniya Suri) ನಿರ್ದೇಶನ ಇರುವ ಕಾರಣಕ್ಕೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಹೀಗಾಗಿಯೇ ಬ್ಯಾಡ್ ಮ್ಯಾನರ್ಸ್ ಚಿತ್ರದ ವಿಶ್ವದಾದ್ಯಂತ ನೆಗೆಟಿವ್ ರೈಟ್ಸ್ ಜಯಣ್ಣಗೆ ಸೇರಿದೆ. ಹಾಗೇ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಹಕ್ಕನ್ನು, ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕನ್ನೂ ಮಾರಾಟ ಮಾಡಲಾಗಿದೆ, ಅದರ ಒಡೆತನವೂ ಜಯಣ್ಣ ಅವರದ್ಧೇ.
ಮೂಲಗಳ ಪ್ರಕಾರ ಒಟ್ಟಾರೆ ವ್ಯಾಪಾರದ ಡೀಲ್ ೩೫ ಕೋಟಿಗೆ (35 crore) ಎನ್ನುವುದು ಒಂದು ಮಾಹಿತಿಯಷ್ಟೇ. ಈ ಡೀಲ್ ಪ್ರಕಾರ, ಜಯಣ್ಣ ಎಷ್ಟೇ ಲಾಭ ಮಾಡಿಕೊಂಡರೂ ಅದು ಅವರದ್ದೇ. ಹಾಗೇ ನಷ್ಟ ಆದರೂ ಅದು ಅವರದ್ದೇ ಜವಾಬ್ದಾರಿ. ಒಟ್ನಲ್ಲಿ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾಗೆ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿದ್ದು ಸ್ಯಾಂಡಲ್‌ವುಡ್ ಮಟ್ಟಿಗೆ ಸಾಧನೆಯೇ.. ಯುವ ನಟರ ಸಿನಿಮಾಗಳು ಈ ಮಟ್ಟಕ್ಕೆ ಡೀಲ್ ಆಗಿದ ಉದಾಹರಣೆಗಳಿಲ್ಲ. ಇನ್ನೇನಿದ್ದರೂ ನವೆಂಬರ್ 24ಕ್ಕೆ ಸಿನಿಮಾ ರಿಲೀಸ್ ಆದ್ಮೇಲೆ ಜಯಣ್ಣ ಎಷ್ಟು ಲಾಭ ಮಾಡುತ್ತಾರೆ ಅನ್ನೋದು ಗೊತ್ತಾಗುತ್ತೆ.
ಸಿನಿಮಾದ ಹಾಡುಗಳು ಈಗಾಗಲೇ ಧೂಳೆಬ್ಬಿಸಿವೆ. ಸೂರಿ-ಅಭಿಷೇಕ್-ರಚಿತಾ ರಾಮ್ (Rachitha ram) ಕಾಂಬಿನೇಷನ್ನಿನ ಹಾಡುಗಳಲ್ಲಿ ಕೇವಲ ಎಮೋಷನ್ ಅಷ್ಟೇ ಅಲ್ಲ, ರಗಡ್ʻನೆಸ್ ಕೂಡಾ ಇದೆ. ಸೂರಿ, ಜಯಣ್ಣ ಪಾಲಿಗೆ ಅದೃಷ್ಟ ತಂದ ನಿರ್ದೇಶಕರೂ ಹೌದು. ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ. ಕರ್ನಾಟಕದಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಒಟಿಟಿ ಕಾರಣಕ್ಕೆ ಬೇರೆ ಭಾಷೆಗಳಲ್ಲಿಯೂ ಸಿನಿಮಾವನ್ನು ಡಬ್ ಮಾಡಲಾಗಿದೆ. ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು (Digital and satellite rights) ಸಹ ಜಯಣ್ಣ ಫಿಲ್ಮ್ಸ್ ಬಳಿಯೇ ಇರುವ ಕಾರಣ ಅವರು ಯಾವ ಟಿವಿಗೆ ಹಾಗೂ ಯಾವ ಒಟಿಟಿಗೆ ಸಿನಿಮಾವನ್ನು ಮಾರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಜಯಣ್ಣ-ಭೋಗೇಂದ್ರ ಪಕ್ಕಾ ವ್ಯವಹಾರಸ್ಥರು. ನಷ್ಟ ಮಾಡಿಕೊಳ್ಳುವುದೇ ಇಲ್ಲ. ಪ್ರೀತಿ ವಿಶ್ವಾಸಕ್ಕೆ ಸಿನಿಮಾ ಮಾಡಿದರೂ, ಲಾಭ ನಷ್ಟದ ಲೆಕ್ಕಾಚಾರ ತಪ್ಪುವವರಲ್ಲ. ಹೀಗಿರುವಾಗ ಹೊಸ ನಟನ ಸಿನಿಮಾಗೆ ಇಷ್ಟು ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದಾರೆಂದರೆ ಒಂದೋ.. ಸಿನಿಮಾ ಕ್ವಾಲಿಟಿ ಚೆನ್ನಾಗಿರಬೇಕು. ಇಲ್ಲವೇ ಮೊದಲೇ ಫೈನಾನ್ಸ್ ಮಾಡಿದ್ದ ಸಿನಿಮಾ ಆದರೂ ಆಗಿರಬೇಕು.



