ಯಾವುದಾದರೂ ಮಾಡಬಾರದ್ದು ಮಾಡಿದಾಗ.. ಅದರಲ್ಲಿ ಎಕ್ಸ್ʻಪರ್ಟ್ ಆದವರನ್ನೇ ಕಾಂಟ್ಯಾಕ್ಟ್ ಮಾಡುವುದು ಮಾಮೂಲು. ದರ್ಶನ್ ಗ್ಯಾಂಗ್ ವಿಷಯವೂ ಅಷ್ಟೆ, ಕೊಲೆ ಮಾಡಿದವರು ಮೊದಲು ಫೋನ್ ಮಾಡಿದ್ದು ಬೇರಾರಿಗೋ ಅಲ್ಲ, ಪೊಲೀಸರಿಗೇ. ಎಸ್ʻಐ ಒಬ್ಬನಿಗೆ ಫೋನ್ ಮಾಡಿ, ನಮ್ಮವನೊಬ್ಬ ತಗ್ಲಾಕ್ಕೊಂಡಿದ್ದಾನೆ, ಹೇಗ್ ಬಚಾವ್ ಆಗೋದು ಅಂತಾ ಕೇಳಿತ್ತು. ಅಲರ್ಟ್ ಆದ ಆ ಸಬ್ ಇನ್ಸ್ʻಪೆಕ್ಟರ್.. ಅವರಿಗೆ ಗೈಡ್ ಮಾಡುತ್ತಲೇ.. ಇತ್ತ ಇಲಾಖೆಯವರಿಗೆ ಮಾಹಿತಿಯನ್ನೂ ಕೊಟ್ಟಿದ್ದ. ಆತ ಈಗ ಈ ಕೇಸಿನಲ್ಲಿ ಮಾಫಿ ಸಾಕ್ಷಿ. ಪ್ರಕರಣ ಕ್ರೈಂ ಕೇಸ್ʻಗಳನ್ನು ಕುತೂಹಲದಿಂದ ನೋಡುವವರಿಗೆ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಶರಣಾಗಿದ್ದ ಆರೋಪಿಗಳು ಮೂವರಲ್ಲ, ಒಟ್ಟು ಐದು ಮಂದಿ. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಎ4 ರಾಘವೇಂದ್ರ, ದರ್ಶನ್ ಆಪ್ತರಾದ ದೀಪಕ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ಮೂರ್ತಿ.ಕೊಲೆ ಪ್ರಕರಣದಲ್ಲಿ ಶಿಷ್ಯಂದಿರನ್ನೇ ಸರೆಂಡರ್ ಮಾಡಿಸಿದ್ದು ದರ್ಶನ್ ಎನ್ನಲಾಗಿದೆ. ಈ ವಿಷಯದ ಬಗ್ಗೆ ದರ್ಶನ್ ಗ್ಯಾಂಗ್‌ನ ಸದಸ್ಯರು ಒಬ್ಬ ಎಸ್ʻಐಗೆ ಫೋನ್ ಮಾಡಿ ನಮ್ ಹುಡುಗ ಒಬ್ಬ ದುಡ್ಡು ಕಾಸಿನ ವಿಷ್ಯಕ್ಕೆ ಗಲಾಟೆ ಮಾಡಿ ಕೊಲೆ ಮಾಡ್ಬಿಟ್ಟಿದ್ದಾನೆ, ಏನ್ ಮಾಡೋದು ಎಂದು ಕೇಳಿದ್ದಾನೆ. ಆತ ಸ್ವಲ್ಪ ಟೈಂ ಕೊಡು ಎಂದು ಹೇಳಿದ್ದಷ್ಟೇ ಅಲ್ಲ, ತಕ್ಷಣ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಪ್ರಕರಣದಲ್ಲಿ ಇರುವುದು 13 ಅಲ್ಲ ಒಟ್ಟು 17 ಆರೋಪಿಗಳು. 17 ಆರೋಪಿಗಳ ಪೈಕಿ ಈವರೆಗೆ 13 ಆರೋಪಿಗಳನ್ನ ಮಾತ್ರ ಬಂಧಿಸಲಾಗಿದೆ. ಉಳಿದ ನಾಲ್ವರು ಎಸ್ಕೇಪ್ ಆಗಿದ್ದಾರೆ.ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ನಟ ದರ್ಶನ್ ಎ2, ಪವನ್ ಎಂಬಾತ ಎ3 ಆರೋಪಿ. ರಾಘವೇಂದ್ರ ಎ4, ನಂದೀಶ್ ಎ5, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17. ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಆರೋಪಿಗಳು ಮಿಸ್ಸಿಂಗ್ ಇದ್ದಾರೆ. ಪ್ರಕರಣದಲ್ಲಿ ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9 ಆರೋಪಿಗಳು.
30 ಲಕ್ಷದ ಡೀಲ್..!
ಆರೋಪಿಗಳಾದ ವಿನಯ್, ನಾಗರಾಜ್, ಲಕ್ಷ್ಮಣ್ ಮುಖಾಂತರ ಗಿರಿನಗರದ ಹುಡುಗರಿಗೆ 30 ಲಕ್ಷ ಡೀಲ್ ಕುದುರಿಸಲಾಗಿತ್ತು. ಹಣಕಾಸು ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಕಾರಣ ಹೇಳಿ ಪೊಲೀಸರ ಮುಂದೆ ಸರೆಂಡರ್ ಆಗಲು ಕಾರ್ತಿಕ್ ಹಾಗೂ ರಾಘವೇಂದ್ರಗೆ ದರ್ಶನ್ ಸೂಚಿಸಿದ್ದ ದರ್ಶನ್.30 ಲಕ್ಷ ಡೀಲ್ ಅನ್ವಯ ದೀಪಕ್, ಕೇಶವ್ ಮೂರ್ತಿ, ನಿಖಿಲ್ ನಾಯಕ್‌ಗೆ ತಲಾ 5 ಲಕ್ಷ ರೂಪಾಯಿ (ಒಟ್ಟು 15 ಲಕ್ಷ) ನೀಡಿದ್ದರು. ಪೊಲೀಸರ ರಿಮ್ಯಾಂಡ್ ಕಾಪಿಯಲ್ಲಿ ಈ ಎಲ್ಲ ಅಂಶಗಳೂ ಇವೆ.ರ್ತಿಕ್ ಹಾಗೂ ರಾಘವೇಂದ್ರ ಕುಟುಂಬಕ್ಕೆ ಹಣ ತಲುಪಿಸುವುದಾಗಿ ಹೇಳಿದ್ದರಷ್ಟೇ ಅಲ್ಲ, ಲಾಯರ್ ಹಾಗೂ ಬೇಲ್ ಖರ್ಚನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ಈ ಕೇಸಿನಲ್ಲಿ ಒಂದಿಷ್ಟು ಗೈಡ್ ಮಾಡಿರುವುದು ಸ್ವತಃ ಒಬ್ಬ ಸಬ್ ಇನ್ಸ್ʻಪೆಕ್ಟರ್ ಎನ್ನಲಾಗಿದೆ. ಆದರೆ, ಆತ ಆರೋಪಿಗಳಿಗೆ ಗೈಡ್ ಮಾಡುತ್ತಲೇ.. ಅವರನ್ನು ಸಿಕ್ಕಿಬೀಳಿಸುವ ಎಲ್ಲ ಪ್ಲಾನ್ ಮಾಡಿದ್ದಾರೆ. ಆ ಮೂಲಕ ಸಾಕ್ಷ್ಯಗಳನ್ನೂ ಒಟ್ಟುಗೂಡಿಸಿದ್ದಾರೆ. ಪ್ರಕರಣದ ಒಂದು ಚಿತ್ರಣವನ್ನೂ ಪಡೆದುಕೊಂಡಿದ್ದಾರೆ. ದರ್ಶನ್ ಗ್ಯಾಂಗ್.. ತನಗೇ ಗೊತ್ತಿಲ್ಲದೆ.. ಹುಚ್ಚು ಹುಚ್ಚಾಗಿ ಆಡಲು ಹೋಗಿ ಕಂಪ್ಲೀಟ್ ಸಿಕ್ಕಿಕೊಂಡಿದೆ.



