ಸಾಮಾನ್ಯವಾಗಿ ಜ್ಯೋತಿಷ್ಯದಲ್ಲಿ ಶುಭ ಸಮಯ ಇದ್ದೇ ಇರುತ್ತದೆ. ಪ್ರತಿಯೊಬ್ಬರಿಗೂ ಬಂದೇ ಬರುತ್ತದೆ. ಕೆಲವು ದಿಢೀರ್ ಲಾಭ ತಂದುಕೊಟ್ಟರೆ, ಇನ್ನೂ ಕೆಲವು ಗ್ರಹಗತಿಗಳು ನಿಧಾನವಾಗಿ.. ಆದರೆ ನಿಶ್ಚಿತ ಲಾಭ ತಂದುಕೊಡುತ್ತವೆ. ಸದ್ಯಕ್ಕೆ ಮೂರು ರಾಶಿಗಳಿಗೆ ಅಂತಹ ರಾಜಯೋಗವಿದೆ. ಇದು ಸಾಮಾನ್ಯ ರಾಜಯೋಗವಲ್ಲ, ಲಕ್ಷ್ಮೀನಾರಾಯಣ ರಾಜಯೋಗ.
ಯಾವಾಗಿನಿಂದ ಲಕ್ಷ್ಮೀ ನಾರಾಯಣ ರಾಜಯೋಗ..?
ಜುಲೈ 19 ರಂದು ಬುಧವು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಹಾಗಾಗಿ ಜುಲೈ 31 ರಂದು ಶುಕ್ರನು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ 1 ವರ್ಷದ ನಂತರ ಲಕ್ಷ್ಮಿ ನಾರಾಯಣ ರಾಜಯೋಗ ರಚನೆಯಾಗಲಿದೆ. ಆದ್ದರಿಂದ, ಈ ರಾಜಯೋಗದ ಪ್ರಭಾವದಿಂದಾಗಿ, 3 ರಾಶಿಚಕ್ರ ಚಿಹ್ನೆಗಳ ಜನರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು.
ಯಾವ ಯಾವ ರಾಶಿಗಳಿಗೆ ರಾಜಯೋಗ..?
ಸಿಂಹ, ಧನುಸ್ಸು ಹಾಗೂ ಕಟಕ ರಾಶಿಯವರಿಗೆ ಲಕ್ಷ್ಮೀನಾರಾಯಣ ರಾಜಯೋಗ ಇದೆ. ಆದರೆ ಈ ರಾಜಯೋಗ ಪಡೆಯುವವರು ಸ್ವಲ್ಪ ತಾಳ್ಮೆ ವಹಿಸಬೇಕು. ಗ್ರಹಗತಿಗಳು ಸೂಚನೆ ಕೊಡುತ್ತವೆ. ಆದರೆ ಆತುರಕ್ಕೆ ಬಿದ್ದರೆ, ಕೋಪ ಮಾಡಿಕೊಂಡರೆ ಕಷ್ಟ. ಸಿಟ್ಟು, ಸೆಡವು, ಕೋಪತಾಪಗಳನ್ನೆಲ್ಲ ಮೂಟೆ ಕಟ್ಟಿ ಇಡಬೇಕು. ಕಾಯಬೇಕು.
ಧನು ರಾಶಿಯವರಿಗೆ :
ಲಕ್ಷ್ಮಿ ನಾರಾಯಣ ರಾಜಯೋಗದ ರಚನೆಯು ಧನು ರಾಶಿಯ ಜನರಿಗೆ ಮಂಗಳಕರವಾಗಿದ್ದು, ಧನುಸ್ಸು ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರೂಪುಗೊಳ್ಳಲಿದೆ. ಆದ್ದರಿಂದ, ಈ ಸಮಯದಲ್ಲಿ ಅದೃಷ್ಟ ಬರುತ್ತದೆ. ಈ ರಾಶಿಯವರು ಸಮಾಜದ ದೊಡ್ಡ ಮತ್ತು ಪ್ರಭಾವಿ ಜನರನ್ನು ಭೇಟಿಯಾಗುತ್ತಾರೆ. ಅದರ ಪರಿಣಾಮದ ಪ್ರಯೋಜನ, ಲಾಭವನ್ನು ಭವಿಷ್ಯದಲ್ಲಿ ಪಡೆಯಬಹುದು. ಈ ಸಮಯದಲ್ಲಿ, ದೇಶ ಮತ್ತು ವಿದೇಶಗಳಲ್ಲಿ ಪ್ರಯಾಣಿಸಲು ಸಾಧ್ಯವಾದರೆ, ಅದು ಮಂಗಳಕರವಾಗಿರುತ್ತದೆ. ಈ ಅವಧಿಯಲ್ಲಿ ಈ ರಾಶಿಯವರು ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಉತ್ತಮ. ಸ್ಪರ್ಧಾತ್ಮಕ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಯಾವುದೇ ಆದರೂ ಲಕ್ಷ್ಮೀನಾರಾಯಣ ರಾಜಯೋಗದ ಆರಂಭವಷ್ಟೇ.
ಕಟಕ ರಾಶಿಯವರಿಗೆ :
ಲಕ್ಷ್ಮಿ ನಾರಾಯಣ ರಾಜಯೋಗ ಕಟಕ ರಾಶಿವಯರ ಸಂಕ್ರಮಣದ ಜಾತಕದ ಹಣ ಮತ್ತು ಮಾತಿನ ಮನೆಯ ಮೇಲೆ ರೂಪುಗೊಳ್ಳಲಿದೆ. ಆದ್ದರಿಂದ, ಈ ಸಮಯದಲ್ಲಿ ಕಟಕ ರಾಶಿಯವರು ಹಣವನ್ನು ಗಳಿಸಲು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಹಣವನ್ನು ಉಳಿಸಲೂ ಅವಕಾಶ ಪಡೆಯುತ್ತಾರೆ. ಕಟಕ ರಾಶಿಯವರಿಗೆ ಗೌರವ ಹೆಚ್ಚುತ್ತಾ ಹೋಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಾತ್ಮಕ ಫಲಿತಾಂಶಗಳು ಶುರುವಾಗುತ್ತವೆ. ಈ ಲಕ್ಷ್ಮಿ ನಾರಾಯಣ ರಾಜಯೋಗದ ಪರಿಣಾಮ, ಕಟಕ ರಾಶಿಯವರ ಮಾತಿನ ಪ್ರಭಾವವು ಹೆಚ್ಚಾಗುತ್ತದೆ. ಇದರಿಂದಾಗಿ ಜನರು ಪ್ರಭಾವಿತರಾಗುತ್ತಾರೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೆ, ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಆದರೆ ಇದೂ ಕೂಡಾ ಲಕ್ಷ್ಮಿ ನಾರಾಯಣ ರಾಜಯೋಗದ ಆರಂಭವಷ್ಟೇ. ತಾಳ್ಮೆ ತಪ್ಪಿದರೆ ಲಕ್ಷ್ಮಿ ನಾರಾಯಣ ರಾಜಯೋಗದ ಅಂತ್ಯವೂ ಶುರುವಾಗಬಹುದು. ಅಂತಿಮ ಫಲಿತಾಂಶದವರೆಗೂ ಕಾಯಬೇಕು.
ಸಿಂಹ ರಾಶಿಯವರಿಗೆ.. :
ಲಕ್ಷ್ಮಿ ನಾರಾಯಣ ರಾಜಯೋಗ ಸಿಂಹ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ರಾಜಯೋಗವು ರಾಶಿಚಕ್ರದ ಲಗ್ನ ಮನೆಯ ಮೇಲೆ ರೂಪುಗೊಳ್ಳಲಿದ್ದು ಆತ್ಮಿವಿಶ್ವಾಸ ಹೆಚ್ಚಾಗಲಿದೆ. ಲಕ್ಷ್ಮಿ ನಾರಾಯಣ ರಾಜಯೋಗದ ಪರಿಣಾಮ ಕೆಲಸ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸು ಸಿಗಲಿದೆ. ಆದಾಯದಲ್ಲಿ ಭಾರಿ ಹೆಚ್ಚಳವೂ ಆಗಲಿದೆ. ವಿವಾಹಿತರ ವೈವಾಹಿಕ ಜೀವನವು ಅದ್ಭುತವಾಗಿರುತ್ತದೆ. ಈ ಸಮಯದಲ್ಲಿ, ಲಕ್ಷ್ಮಿ ನಾರಾಯಣ ರಾಜಯೋಗದಿಂದಾಗಿ ಆರೋಗ್ಯವು ಕೂಡಾ ಉತ್ತಮವಾಗಿರುತ್ತದೆ ಎಲ್ಲಾ ಚಿಂತೆಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು. ಬುಧ ಮತ್ತು ಶುಕ್ರ ಸಿಂಹ ರಾಶಿಯಲ್ಲೇ ಇರುವುದರಿಂದ ಲಾಭವಂತೂ ಆಗಲಿದೆ.



