Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

‌ರಿಪೀಟ್‌ ಆಗುತ್ತಾ 2006ರ ʻಮುಂಗಾರು ದುನಿಯಾʼ ಮ್ಯಾಜಿಕ್‌ : ಈಗ ವಿಜಯ್‌ ಘರ್ಜನೆ ಲಾಭ ಗಣೇಶ್‌ಗೆ ಸಿಗುತ್ತಾ..?

SpeciallU by SpeciallU
August 14, 2024
in Cinema, News
Reading Time: 1 min read
0 0
0
‌ರಿಪೀಟ್‌ ಆಗುತ್ತಾ 2006ರ ʻಮುಂಗಾರು ದುನಿಯಾʼ ಮ್ಯಾಜಿಕ್‌ : ಈಗ ವಿಜಯ್‌ ಘರ್ಜನೆ ಲಾಭ ಗಣೇಶ್‌ಗೆ ಸಿಗುತ್ತಾ..?

ಭೀಮನಿಗೆ ಬಂಪರ್ ಸಿಕ್ಕಿದೆ. ಕೃಷ್ಣನಿಗೆ ಈ ಗೆಲುವು ಗುಡ್‌ ನ್ಯೂಸ್ ಎನ್ನೋಕೆ ಅಡ್ಡಿಯಿಲ್ಲ. ಗಣೇಶ್‌ ಮತ್ತು ವಿಜಯ್‌ ಇಬ್ಬರೂ ಸ್ನೇಹಿತರು. ಹೀರೋ ಆಗುವುದಕ್ಕೂ ಮುನ್ನವೇ ಫ್ರೆಂಡ್ಸ್.‌ ಇಬ್ಬರಿಗೂ ಹೀರೋ ಆಗಿ ಬಂಪರ್‌ ಲಾಭ ಸಿಕ್ಕಿದ್ದು 2006ರಲ್ಲಿ. 2006 ಡಿಸೆಂಬರ್‌ 29ರಂದು ರಿಲೀಸ್‌ ಆಗಿದ್ದ ಮುಂಗಾರು ಮಳೆ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಚೆಲ್ಲಾಟ, ಹುಡುಗಾಟದ ಗಣೇಶ್‌ ಗೋಲ್ಡನ್‌ ಸ್ಟಾರ್‌ ಗಣೇಶ್‌ ಆದರು.

ಅದಾದ 2 ತಿಂಗಳಲ್ಲಿ ಅಂದರೆ.. 2007, ಫೆಬ್ರವರಿ 23ರಂದು ರಿಲೀಸ್‌ ಆದ ಸಿನಿಮಾ ದುನಿಯಾ. ಸ್ಟಂಟ್‌ ಮ್ಯಾನ್‌ ಆಗಿದ್ದ ವಿಜಯ್‌, ಕರಿಚಿರತೆ, ಜಂಗ್ಲಿ ಸ್ಟಾರ್‌ ಆದರು. ದುನಿಯಾ ವಿಜಯ್‌ ಆದರು. ಈಗ ಮತ್ತೊಮ್ಮೆ ಇಬ್ಬರ ಸಿನಿಮಾಗಳೂ ಬ್ಯಾಕ್‌ ಟು ಬ್ಯಾಕ್‌ ಬರುತ್ತಿವೆ. ಈ ಬಾರಿ ಮೊದಲು ಬಂದಿರೋದು ವಿಜಯ್‌ ಅವರ ಭೀಮ. ನಂತರ ಬರುತ್ತಿರೋದು ಗಣೇಶ್‌ ಅವರ ಕೃಷ್ಣಂ ಪ್ರಣಯ ಸಖಿ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಭೀಮ. ದುನಿಯಾ ವಿಜಯ್‌ ನಿರ್ದೇಶನದ 2ನೇ ಸಿನಿಮಾ. ಅವರೇ ಹೀರೋ. ಈ ಬಾರಿಯೂ ಹಸಿ ಹಸಿ ಕಥೆಯನ್ನು ಅಷ್ಟೇ ಹಸಿ ಹಸಿಯಾಗಿ ಹೇಳಿ.. ಸಂದೇಶವನ್ನೂ ಕೊಟ್ಟು ಗೆದ್ದಿದ್ದಾರೆ ವಿಜಯ್.‌ ಇತ್ತೀಚೆಗೆ ಚಿತ್ರಮಂದಿರದಿಂದ ದೂರವೇ ಉಳಿದಿದ್ದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಖ್ಯಾತಿ ವಿಜಯ್‌ ಅವರಿಗೆ ಸಲ್ಲಬೇಕು. ಹೀಗಾಯೇ ಈ ವರ್ಷದ ಮೊದಲ ಹಿಟ್‌ ಸಿನಿಮಾ ಎನ್ನಬಹುದು. ಕೃಷ್ಣನಿಗೂ ಇದು ಗುಡ್‌ ನ್ಯೂಸ್‌ ಎಂದರೆ ಆಶ್ಚರ್ಯವಿಲ್ಲ.

‘ಭೀಮ’ ಮೊದಲ ದಿನದ ಕಲೆಕ್ಷನ್ ಮಾಸ್ ಆಗಿತ್ತು. ಮಾಸ್ ಆಡಿಯನ್ಸ್ ಥಿಯೇಟರ್‌ಗೆ ನುಗ್ಗಿದ್ದರು. ಮೊದಲ ದಿನ ಅಂದರೆ ಶುಕ್ರವಾರ ಸಿನಿಮಾದ ಕಲೆಕ್ಷನ್ 4.1 ಕೋಟಿ ರೂಪಾಯಿ ಎಂದು ವರದಿಯಾಗಿತ್ತು. ಇನ್ನು ಎರಡನೇ ದಿನ 3.90 ಕೋಟಿ ರೂಪಾಯಿ, ಮೂರನೇ ದಿನ ಭಾನುವಾರ 4.3 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ನಾಲ್ಕನೇ ದಿನ ಅಂದರೆ ಕಲೆಕ್ಷನ್ 1.50 ಕೋಟಿ ರೂಪಾಯಿ ಆಗಿದೆಯಂತೆ. ಇನ್ನು ಆಗಸ್ಟ್‌ 15ಕ್ಕೆ ರಜೆ ಇದೆ. ಆಗಸ್ಟ್‌ 16ಕ್ಕೆ ವರಮಹಾಲಕ್ಷ್ಮಿಹಬ್ಬ. ರಜೆಯ ದಿನಗಳಲ್ಲಿ ಕಲೆಕ್ಷನ್‌ ಇನ್ನಷ್ಟು ಹೆಚ್ಚಾಗಬಹುದು ಎಂಬ ನಿರೀಕ್ಷೆ ವಿತರಕರ ವಲಯದಲ್ಲಿದೆ.

ಗೋಲ್ಡನ್‌ ಸ್ಟಾರ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೂ ಇದು ಗುಡ್‌ ನ್ಯೂಸ್‌ ಎನ್ನಬಹುದು. ಭೀಮ ರಕ್ತಸಿಕ್ತ ಕಥೆಯಾದರೆ, ಕೃಷ್ಣಂ ಪ್ರಣಯ ಸಖಿ ಲವ್‌ ರೊಮ್ಯಾಂಟಿಕ್.‌ ವಿಜಯ್‌ ಚಿತ್ರಕ್ಕೆ ಮಾಸ್‌ ಆಡಿಯನ್ಸ್‌ ಹೆಚ್ಚು. ಗಣೇಶ್‌ ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್‌ ಹೆಚ್ಚು. ವಿಜಯ್‌ ಮತ್ತು ಗಣೇಶ್‌ ಇಬ್ಬರೂ ಹೇಗೆ ಗೆಳೆಯರೋ.. ಇಬ್ಬರ ಫ್ಯಾನ್ಸ್‌ ಕೂಡಾ ಅಷ್ಟೇ.. ದೋಸ್ತಿಗಳು.

ಹೀಗಾಗಿಯೇ ಶ್ರೀನಿವಾಸ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಬಗ್ಗೆ ನಿರೀಕ್ಷೆಗಳೂ ಹೆಚ್ಚುತ್ತಿವೆ. ಈಗಾಗಲೇ ಚಿತ್ರದಲ್ಲಿ ಇದುವರೆಗೆ ರಿಲೀಸ್‌ ಆಗಿರುವ ಎಲ್ಲ ಹಾಡುಗಳೂ ಪ್ರೇಮ ರೋಮಾಂಚನ ಸೃಷ್ಟಿಸಿವೆ. ಹೀಗಾಗಿ.. ಚಿತ್ರರಂಗಕ್ಕೆ ಶುಭ ಕಾಲ ಬಂದೈತೆ.. ಎನ್ನೋಕೆ ಅಡ್ಡಿ ಇಲ್ಲ.

ಕೃಷ್ಣನ ಪ್ರಣಯ ಗೀತೆ.. ರೊಮ್ಯಾಂಟಿಕ್‌ ಕಥೆ

ಶ್ರೀಕೃಷ್ಣನಿಗೆ ಹದಿನಾರು ಸಾವಿರ ಸಖಿಯರಂತೆ. ಆದರೆ ಅದು ಪುರಾಣ. ಈಗ ಹೊಸ ಕೃಷ್ಣ ಬಂದಿದ್ದಾನೆ. ಈತನಿಗೆ ಹದಿನಾರು ಸಾವಿರ ಅಲ್ಲ, ಹದಿನಾರರ ಅರ್ಧ 8 ಚೆಲುವೆಯರು ಜೊತೆಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ರಿಲೀಸ್ ಆಗುತ್ತಿರುವ ಕೃಷ್ಣಂ ಪ್ರಣಯ ಸಖಿ ಚಿತ್ರದಲ್ಲಿ 8 ಚೆಲುವೆಯರಿದ್ದಾರೆ.
8 ಚೆಲುವೆಯರು ಎಂದ ಕೂಡಲೇ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಸಹಜ. ಇದುವರೆಗೆ ಗಣೇಶ್ ಚಿತ್ರದಲ್ಲಿಒಬ್ಬರು, ಇಬ್ಬರು ಅಥವಾ ನಾಲ್ಕೈದು ಹೀರೋಯಿನ್ ಕೂಡಾ ಇದ್ದರು.

ಆದರೆ, ಈ ಬಾರಿ 8 ಜನ ಚೆಲುವೆಯರಿದ್ದಾರೆ. ಹಾಗಾದರೆ ಕಥೆ ಏನು..?

ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎನ್ನಲಾಗಿದೆ. ಕಾಡುವ ಕಥೆಯೂ ಇರಬಹುದೇ.. ಏಕೆಂದರೆ.. ಈಗಾಗಲೇ ಚಿತ್ರದ ಒಂದೊಂದು ಹಾಡು ಕೂಡಾ ಸೂಪರ್ ಹಿಟ್ ಆಗಿದೆ.

ಮೊದಲಿಗೆ ಚಂದನ್‌ ಶೆಟ್ಟಿ ಧ್ವನಿಯ “ಮೈ ಮ್ಯಾರೇಜ್‌ ಈಸ್‌ ಫಿಕ್ಸ್‌ಡ್‌” ಎಂದು ಮದುವೆಯ ಹಾಡು ರಿಲೀಸ್ ಆಗಿತ್ತು. ಈ ಹಾಡಿನಲ್ಲಿ ಎಂಟು ಸಖಿಯರು ಇದ್ರು. ಕೃಷ್ಣನ ನಿಜವಾದ ಲವ್‌ ಇರೋದು ಯಾರ ಮೇಲೆ? ಕಥೆಯ ಸಸ್ಪೆನ್ಸ್ ಇರುವುದೇ ಅಲ್ಲಿ.

ಮಾಳವಿಕ ನಾಯರ್‌, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ರಂಗಾಯಣ ರಘು, ಶಶಿಕುಮಾರ್ ಕೂಡಾ ಚಿತ್ರದಲ್ಲಿದ್ದಾರೆ. ರಕ್ತಸಿಕ್ತ ಸಿನಿಮಾಗಳ ಮೂಲಕವೇ ಹೆಸರು ಮಾಡಿದ್ದ ಶ್ರೀನಿವಾಸ ರಾಜು ನಿರ್ದೇಶನದ ಚಿತ್ರ ಇದು. ಹಾಡುಗಳನ್ನು ನೋಡುತ್ತಿದ್ದರೆ, ಕೇಳುತ್ತಿದ್ದರೆ.. ರಕ್ತದ ವಾಸನೆಯಂತೂ ಇಲ್ಲ. ಫುಲ್ ರೊಮ್ಯಾಂಟಿಕ್. ಹಾಡುಗಳ ಮೂಲಕವೇ ವೆಲ್ ಕಂ ಹೇಳ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ಸಂಗೀತ ಅರ್ಜುನ್ ಜನ್ಯ ಅವರದ್ದು. ಚಿತ್ರಕ್ಕೆ ಪ್ರಶಾಂತ್ ಜಿ ರುದ್ರಪ್ಪ, ಪ್ರೊಡ್ಯೂಸರ್.

Tags: #ಭೀಮ #ದುನಿಯಾವಿಜಯ್‌ #ಕಲೆಕ್ಷನ್ #ಗೋಲ್ಡನ್‌ಸ್ಟಾರ್‌ಗಣೇಶ್‌ #ಕೃಷ್ಣಂಪ್ರಣಯಸಖಿ #Bheema #DuniyaVijay #Collection #GoldenStarGanesh #Krishnampranayasakhi
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.