ಇದು ಕಳೆದ 3 ದಿನಗಳ ಲೆಕ್ಕ. ಈ ವೇಳೆ ಕಾಟೇರವನ್ನು ನೋಡಿದವರ ಸಂಖ್ಯೆಯಲ್ಲಿ ಯಾವ ರೀತಿಯಲ್ಲೂ ಕಡಿಮೆ ಆಗಿಲ್ಲ. ಕಳೆದ 3 ದಿನಗಳಲ್ಲಿ 5622 ಶೋಗಳಲ್ಲಿ ಕಾಟೇರ ಪ್ರದರ್ಶನವಾಗಿದೆ. ಹಬ್ಬದ ವೇಳೆ ಸಿಕ್ಕಿದ್ದ ಬಿಡುವಿನಲ್ಲಿ ಸಿನಿಮಾ ನೋಡಿದವರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಕಳೆದ 3 ದಿನಗಳಲ್ಲಿ ಕಾಟೇರದ ಶೋಗಳ ಸಂಖ್ಯೆ – 5622
ಈ 5622 ಶೋಗಳಲ್ಲಿ ಹೌಸ್ʻಫುಲ್ ಆದ ಶೋಗಳ ಸಂಖ್ಯೆ – 3864.
ಕಳೆದ 3 ದಿನಗಳಲ್ಲಿ ಕಾಟೇರದ ಒಟ್ಟಾರೆ ಕಲೆಕ್ಷನ್ –33.47 ಕೋಟಿ ರೂ.
ಇದು ಜಸ್ಟ್ 3 ದಿನಗಳ ಲೆಕ್ಕ. ಕಾಟೇರ ಚಿತ್ರ ಸದ್ಯಕ್ಕೆ ಕರ್ನಾಟಕದಾದ್ಯಂತ ಸುದ್ದಿ ಮಾಡುತ್ತಿದೆ. ಬಾಕ್ಸಾಫೀಸ್ ಗಳಿಕೆ 200 ಕೋಟಿ ಹತ್ತಿರ ಬಂದಿದೆ. ಚಿತ್ರರಂಗದ ಹಲವು ನಟ ನಟಿಯರು, ತಂತ್ರಜ್ಞರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ಧಾರೆ. ಹೀಗಿರುವಾಗಲೇ ಕಾಟೇರ ಚಿತ್ರವನ್ನು ನೋಡಿದ್ರಾ ಅನ್ನೋ ಪ್ರಶ್ನೆ ಕಿಚ್ಚ ಸುದೀಪ್ ಅವರಿಗೆ ಎದುರಾಗಿದೆ.
ಮ್ಯಾಕ್ಸ್ ಸಿನಿಮಾ ಶೂಟಿಂಗ್ʻಗೆ ಹೋಗುವಾಗ ವಿಮಾನ ಹತ್ತುವುದಕ್ಕೂ ಮುನ್ನ ಸ್ವಲ್ಪ ಸಮಯ ಇದ್ದ ಕಾರಣಕ್ಕೆ ಕಿಚ್ಚ ಸುದೀಪ್ ಆಸ್ಕ್ ಕಿಚ್ಚ’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ‘ಕಾಟೇರ ಯಾವಾಗ ನೋಡ್ತೀರಾ ಸರ್’ ಎಂದು ಕೇಳಲಾಗಿದೆ. ಇದಕ್ಕೆ ಸುದೀಪ್ ಕೊಟ್ಟಿರೋ ಉತ್ತರ ನೋಡಿದ್ರೆ ಸುದೀಪ್ ಕಾಟೇರ ನೋಡಿದ್ರೋ.. ಇಲ್ವೋ.. ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಕೊನೆಗೆ ಸುದೀಪ್ ಸಿನಿಮಾ ನೋಡಿದ್ದಾರೆ ಎಂಬರ್ಥದಲ್ಲೇ ಸುದ್ದಿಯಾಗಿದೆ. ಅದರ ಅರ್ಥವೂ ಹಾಗೆಯೇ ಇದೆ.
ಕಾಟೇರ ನೋಡಿದ್ರಾ’ ಎಂಬ ಟ್ವೀಟ್ನ ರೀಟ್ವೀಟ್ ಮಾಡಿಕೊಂಡಿರೋ ಸುದೀಪ್ ಅವರು ‘Hasnt anyone told you I hanven’t already’ ಎಂದು ಬರೆದಿದ್ದಾರೆ. ಈ ಉತ್ತರವನ್ನು ನೋಡಿದ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ಧಾರೆ.
ಆದರೆ ಫೈನಲ್ಲಾಗಿ ಕಿಚ್ಚ ಸುದೀಪ್ ಕಾಟೇರ ನೋಡಿದ್ರು ಅನ್ನೋ ಪರಿಹಾರ ಕಂಡುಕೊಂಡಿದ್ಧಾರೆ. ಕಿಚ್ಚ ಸುದೀಪ್ ಅವರನ್ನು ಮೆಚ್ಚಿಕೊಂಡಿದ್ಧಾರೆ. ಆದರೆ ಟೋಟಲ್ ಅರ್ಥ ಹುಡುಕಿದರೆ ಸುದೀಪ್ ಸಿನಿಮಾ ನೋಡಿದರೋ.. ಇಲ್ಲವೋ ಅರ್ಥವಾಗುತ್ತಿಲ್ಲ. ಏಕೆಂದರೆ ಪದ ಪದಗಳನ್ನು ವಿಭಜಿಸಿ ಅರ್ಥ ಹುಡುಕಿದರೆ ಸುದೀಪ್ ನೋಡಿಲ್ಲ ಎಂದೇ ಅರ್ಥವಾಗುತ್ತದೆ.
ಆದರೇನಂತೆ.. ತರುಣ್ ಸುಧೀರ್ ನಿರ್ದೇಶನದ, ಮಾಸ್ತಿ ಸಂಭಾಷಣೆ ಬರೆದಿರುವ ಕಾಟೇರ ಚಿತ್ರ ಭರ್ಜರಿ ಸದ್ದು ಮಾಡ್ತಿದೆ. ಕಥೆಗಾರ ಜಡೇಶ್ ಕುಮಾರ್ ಹಂಪಿಯವರ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ರಾಕ್ʻಲೈನ್ ವೆಂಕಟೇಶ್ ಅವರು 2024ನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ್ಧಾರೆ. ಮಾಲಾಶ್ರೀ ಮಗಳು ಆರಾಧನಾ ಅವರ ಮೊದಲ ಚಿತ್ರವೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿರುವುದು ವಿಶೇಷ. ಮಾಲಾಶ್ರೀ ಅವರದ್ದೂ ಹೀಗೆಯೇ ಆಗಿತ್ತು. ರಾಘವೇಂದ್ರ ರಾಜಕುಮಾರ್ ಅವರ ಜೊಎ ನಟಿಸಿದ್ದ ಮೊದಲ ಕನ್ನಡ ಸಿನಿಮಾ ನಂಜುಂಡಿ ಕಲ್ಯಾಣ, ಚಿತ್ರರಂಗದ ಬ್ಲಾಕ್ ಬಸ್ಟರ್ ಎನಿಸಿಕೊಂಡು ದಾಖಲೆ ಬರೆದಿತ್ತು. ಈಗ ಮಗಳ ಸರದಿ.



