ರಾಜ್ಯ ಕಾಂಗ್ರೆಸ್ ಭರ್ಜರಿಯಾಗಿ 2 ವರ್ಷದ ಅಧಿಕಾರ ಪೂರೈಸಿದೆ. ಸಿದ್ದರಾಮಯ್ಯ ಸಿಎಂ ಆಗಿ 2 ವರ್ಷವಾಗುತ್ತಿದ್ದಂತೆ, ಬದಲಾವಣೆ ಕೂಗು ಸೈಲೆಂಟ್ ಆಗಿ ಕೇಳಿ ಬರುತ್ತಿದೆ. ಬದಲಾವಣೆ ಕೂಗು ಸೈಲೆಂಟ್ ಆಗಿದ್ದರೂ.. ಬದಲಾವಣೆ ಬೇಡ ಎನ್ನುವ ಕೂಗು ಮಾತ್ರ ಜೋರಾಗಿದೆ. ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಅನುದಾನ ಕೊರತೆ, ಹಗರಣಗಳು ಏನೇ ಇರಲಿ.. ಈ ಎರಡು ವರ್ಷದ ಸಾಧನೆ ಜನರಿಗೆ ತೃಪ್ತಿ ತಂದಿದೆಯೇ.. ಈ ಬಗ್ಗೆ ಪೀಪಲ್ ಪಲ್ಸ್ ಸಮೀಕ್ಷೆ ಮಾಡಿದೆ.
ಉಲ್ಟಾ ತಿರುಗಿದ ಯುವ ಮತದಾರರು :
2023ರಲ್ಲಿ ಕಾಂಗ್ರೆಸ್ಸಿಗೆ ವೋಟ್ ಹಾಕಿದ್ದ 18-25 ವಯಸ್ಸಿನ ಮತದಾರರಲ್ಲಿ ತೀವ್ರ ಭ್ರಮ ನಿರಸನ ಕಾಣಿಸುತ್ತಿದೆ. ಈ ವಯಸ್ಸಿನ ಶೇ.56ರಷ್ಟು ಮತದಾರರು ಕಾಂಗ್ರೆಸ್ಸಿಗೆ ಬೆನ್ನು ತಿರುಗಿಸಿದ್ದಾರೆ. ವಿಶೇಷ ಎಂದರೆ.. ಯಾರಿಗೆ ಮತ ನೀಡಬೇಕು ಎಂಬ ಗೊಂದಲ ಈಗಲೂ ಮುಂದುವರೆದಿದೆ. ಕಾಂಗ್ರೆಸ್ ಬಿಟ್ಟರೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಗೊತ್ತಿಲ್ಲ ಎಂಬ ಉತ್ತರವೇ ಹೆಚ್ಚು ಬಂದಿದೆ. ಅಂದರೆ ಕಾಂಗ್ರೆಸ್ ವೈಫಲ್ಯದ ಲಾಭವನ್ನು ಬಾಚಿಕೊಳ್ಳುವಲ್ಲಿ ಬಿಜೆಪಿ ಎಡವಿದೆ.
ನಗರ ಪ್ರದೇಶದ ಮತದಾರರಲ್ಲಿ ಯುವ ಜನತೆ ಈಗಲೂ ಬಿಜೆಪಿ ಮತ್ತು ಮೋದಿ ಪರವಾಗಿಯೇ ಇದೆ. ಗ್ರಾಮೀಣ ಭಾಗದಲ್ಲಿ ಮಾತ್ರ ಈ ಗೊಂದಲ ಕಾಣಿಸುತ್ತಿದೆ.
ಜಾತಿ ಲೆಕ್ಕಾಚಾರ :
ಸಮೀಕ್ಷೆ ಪ್ರಕಾರ ಪ್ರಮುಖ ಜಾತಿಗಳಲ್ಲಿಯೂ ಕೆಲವು ಬದಲಾವಣೆಗಳಾಗಿವೆ. 2023ರಲ್ಲಿ ಶೇ.50ರಷ್ಟು ಲಿಂಗಾಯತ ಮತದಾರರು ಬಿಜೆಪಿ ಪರವೇ ಇದ್ದರು. ಆದರೆ 10% ವ್ಯತ್ಯಾಸವಾಗಿತ್ತು.ಆ 10% ವ್ಯತ್ಯಾಸ ಕಾಂಗ್ರೆಸ್ಸಿಗೆ ಭರಪೂರ ಲಾಭ ತಂದಿತ್ತು. ಉಳಿದಂತೆ ವಾಲ್ಮೀಕಿ, ಮರಾಠ, ನಾಯಕರು ಈಗಲೂ ಬಿಜೆಪಿ ಪರ ಇದ್ದರೆ, ಕಾಂಗ್ರೆಸ್ಸಿನ ಪರ ಹೋಗಿದ್ದ ಕೆಲವು ದಲಿತ ಮತದಾರರು ಬಿಜೆಪಿಗೆ ಶಿಫ್ಟ್ ಆಗುತ್ತಿದ್ದಾರೆ. ಕುರುಬರೂ, ಒಕ್ಕಲಿಗರೂ ಕೂಡಾ ಕಾಂಗ್ರೆಸ್ಸಿಂದ ದೂರ ಸರಿಯುತ್ತಿದ್ದಾರೆ. ಇದಕ್ಕೆ ಏನು ಕಾರಣ ಎಂದರೆ.. ಸಮೀಕ್ಷೆ ತೋರಿಸುವುದು ಜಾತಿ ಸಮೀಕ್ಷೆಯ ಕಡೆ. ಜಾತಿ ಸಮೀಕ್ಷೆ ವರದಿ ಈಗ ಜಾರಿಯಾಗಿಲ್ಲದೇ ಇದ್ದರೂ.. ಆ ವಿಷಯದಲ್ಲಿ ಸರ್ಕಾರದ ನಡೆ, ಹೇಳಿಕೆಗಳು ಕೆಲವು ಪ್ರಮುಖ ಜಾತಿಗಳನ್ನು ಕಾಂಗ್ರೆಸ್ಸಿಂದ ದೂರ ಸರಿಯುವಂತೆ ಮಾಡಿದೆ ಎನ್ನುತ್ತಿದೆ ಸಮೀಕ್ಷೆ.
ಇನ್ನು ರಾಜ್ಯದ ಬಹುತೇ ಕಡೆ ರಸ್ತೆ ರಿಪೇರಿ ಕೆಲಸಗಳೂ ಆಗುತ್ತಿಲ್ಲ. ಇದು ಬಹುತೇಕ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಯಾವ ಗೃಹಲಕ್ಷ್ಮಿ ಯೋಜನೆ ತಮ್ಮ ಕೈಹಿಡಿಯಲಿದೆ ಎಂದು ಅತೀ ಹೆಚ್ಚು ಅನುದಾನ ಕೊಡುತ್ತಿದೆಯೋ.. ಅದು ಸರಿಯಾಗಿ ಸಿಗದೆ ʻಗ್ಯಾರಂಟಿಯೇ ಶಾಪʼವಾಗಿ ಕಾಡುತ್ತಿದೆ. ಬೆಲೆ ಏರಿಕೆಯೂ ಕಾಂಗ್ರೆಸ್ಸಿಗೆ ವಿಲನ್ ಆಗುತ್ತಿದೆ.
ಅಚ್ಚರಿ ಎಂದರೆ.. ಇದರ ಲಾಭ ಎತ್ತಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಮೊದಲು ಅವರ ಪಕ್ಷದ ಪ್ರಾಬ್ಲಂ ಬಗೆಹರಿಸಿಕೊಳ್ಳಲಿ.. ಆಮೇಲೆ ಯೋಚನೆ ಮಾಡ್ತೀವಿ ಅಂತಿದ್ದಾರಂತೆ ಮತದಾರರು.



