ನಟಿ ರಚಿತಾ ರಾಮ್ ಅವರಿಗೆ 16 ಕೋಟಿಯ ರೋಲ್ಸ್ ರಾಯ್ ಕಾರ್ʻನ್ನು ಗಿಫ್ಟ್ ಕೊಟ್ಟಿದ್ದಾರೆ ಶ್ರೀನಗರ ಕಿಟ್ಟಿ. ಅರೆ.. ಇದ್ಯಾವಾಗ ಶುರು ಆಯ್ತು.. ಅಂದ್ಕೋಬೇಡಿ. ಕೊಟ್ಟಿರುವುದು ರಚಿತಾ ರಾಮ್ ಅವರಿಗೆ ಅಲ್ಲ, ಗೀತಾಗೆ. ಕೊಟ್ಟಿರುವುದು ಶ್ರೀನಗರ ಕಿಟ್ಟಿ ಅಲ್ಲ, ಸಂಜು. ಗೀತಾಳನ್ನು ಪ್ರೀತಿಸುತ್ತಿರುವ ಆರಾಧಿಸುತ್ತಿರುವ ಪ್ರೇಮಿ ಸಂಜು. ಅದು ಅವರ 10ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಕೊಡುತ್ತಿರುವ ಕಾಣಿಕೆ. ಆ ಕಾಣಿಕೆ ಹೇಗಿದೆ ಅನ್ನೋದನ್ನ ನೋಡಬೇಕೇಂದರೆ.. ಮುಂದಿನ ವರ್ಷದ ಏಪ್ರಿಲ್ 1ನೇ ತಾರೀಕಿನವರೆಗೆ ಕಾಯಬೇಕು. ಏಕೆಂದರೆ ಆ ದಿನ ಸಿನಿಮಾ ರಿಲೀಸ್ ಆಗುವ ರಿಲೀಸ್ ಆಗುವ ಸಾಧ್ಯತೆ ಇದೆ.
2011ರಲ್ಲಿ ತೆರೆಗೆ ಬಂದಿದ್ದ ಸಂಜು ವೆಡ್ಸ್ ಗೀತಾ ಸೂಪರ್ ಹಿಟ್ ಎನಿಸಿತ್ತು. ಇದೀಗ 13 ವರ್ಷಗಳ ನಂತರ ಭಾಗ 2 ತೆರೆಗೆ ಬರುತ್ತಿದ್ದು, 2024ರ ಏಪ್ರಿಲ್ 1ರಂದೇ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾರೆ ನಾಗಶೇಖರ್‌ಗೆ. ಏಕೆಂದರೆ ಸಂಜು ವೆಡ್ಸ್ ಗೀತಾ ಏಪ್ರಿಲ್ 1ರಂದೇ ರಿಲೀಸ್ ಆಗಿತ್ತು.
ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಕ್ಸಸ್‌ನಿಂದಾಗಿ ಈಗ ನಾವು ಭಾಗ 2 ಮಾಡುತ್ತಿದ್ದೇವೆ. ಈಗಾಗಲೇ 5-6 ದಿನಗಳ ಶೂಟಿಂಗ್ ಕೂಡ ಮುಕ್ತಾಯವಾಗಿದೆ. ರಂಗಾಯಣ ರಘು, ಸಾಧು ಕೋಕಿಲ ಸುಂದರವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನನ್ನ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚು ಮಹತ್ವ ನೀಡುತ್ತೇನೆ. ಶ್ರೀಧರ್ ವಿ ಸಂಭ್ರಮ್ ಅವರು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಇನ್ನೊಂದು 5 ದಿನ ಶೂಟಿಂಗ್ ಮಾಡಲಿದ್ದೇವೆ. ನಂತರ ಡಿಸೆಂಬರ್ 2ರಿಂದ ಬೆಂಗಳೂರಲ್ಲಿ ಶೂಟಿಂಗ್ ನಡೆಯಲಿದೆ. ಡಿ.9ರಿಂದ ಸ್ವಿಟ್ಜರ್ಲ್ಯಾಂಡ್‌ನಲ್ಲಿ 12 ಚಿತ್ರೀಕರಣ ಮಾಡಲಿದ್ದೇವೆ. ಮುಂಬೈ, ಹೈದರಾಬಾದ್‌ನಲ್ಲೂ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ ಎಂದು ವಿವರಣೆ ಕೊಟ್ಟಿದ್ದಾರೆ ನಾಗಶೇಖರ್.
ಪಾರ್ಟ್ 1ರಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಮುಖ್ಯಭೂಮಿಕೆಯಲ್ಲಿದ್ದರು. ಈಗ ಪಾರ್ಟ್ 2ರಲ್ಲಿ ರಮ್ಯಾ ಬದಲು ರಚಿತಾ ರಾಮ್ ಎಂಟ್ರಿ ಕೊಟ್ಟಿದ್ದಾರೆ. ನಾಗಶೇಖರ್ ಜೊತೆಗೆ ಒಟ್ಟಿಗೆ ಓದಿದ್ದ ಚಲವಾದಿ ಕುಮಾರ್ ಈ ಸಿನಿಮಾ ಪ್ರೊಡ್ಯೂಸರ್. ನಾಗಶೇಖರ್ ಮತ್ತು ನಾನು ಎಂಜಿನಿಯರಿಂಗ್ ಅನ್ನು ಒಟ್ಟಿಗೆ ಓದಿದ್ವಿ. ಈ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ನಾನು ಇದ್ದೆ. ಸಿನಿಮಾ ಅಂತೂ ತುಂಬಾ ಚೆನ್ನಾಗಿ ಬರ್ತಿದೆ ಎಂದು ವಿಶ್ವಾಸದಲ್ಲಿದ್ದಾರೆ ನಿರ್ಮಾಪಕರು.
ಅಂದಹಾಗೆ ಚಿತ್ರದ ಟೀಸರ್ ನೋಡಿದವರಿಗೆ ಮತ್ತೊಂದು ಪ್ರೇಮ ಪ್ರಣಯ ಕಾವ್ಯ ಎನ್ನುವ ಸೂಚನೆ ಕೊಟ್ಟಿದೆ. ರೊಮ್ಯಾನ್ಸ್‌ಗೆ ಇದುವೇ ಹೊಸ ಬರಹ ಎನ್ನುವಂತೆ ಬ್ಯೂಟಿಫುಲ್ ಜೋಡಿಯ ಪ್ರಣಯಗೀತೆಯಂತೆ ಕಾಣುತ್ತಿದೆ ಸಂಜು ವೆಡ್ಸ್ ಗೀತಾದ ಭಾಗ 2.



