Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ನಿಯಂತ್ರಣವಿಲ್ಲದ ನಾಲಗೆ.. ಅಡ್ಜಸ್ಟ್‌ ಮೆಂಟ್..‌ ಯತ್ನಾಳ್‌ ಉಚ್ಚಾಟನೆಗೆ 10 ಕಾರಣಗಳು..!

SpeciallU by SpeciallU
March 27, 2025
in News, Politics
Reading Time: 1 min read
0 0
0
ನಿಯಂತ್ರಣವಿಲ್ಲದ ನಾಲಗೆ.. ಅಡ್ಜಸ್ಟ್‌ ಮೆಂಟ್..‌ ಯತ್ನಾಳ್‌ ಉಚ್ಚಾಟನೆಗೆ 10 ಕಾರಣಗಳು..!

ಯತ್ನಾಳ್‌ ಉಚ್ಚಾಟನೆಗೆ ಕಾರಣ ಏನಿರಬಹುದು ಎಂದರೆ.. ಮೇಲ್ನೋಟಕ್ಕೆ ಅದು ನಿಯಂತ್ರಣವಿಲ್ಲದ ನಾಲಗೆ.. ಎನ್ನಬಹುದು. ಯತ್ನಾಳ್‌ ಅವರ ಮಾತಿನಲ್ಲಿ ಹಿತಮಿತ ಇರಲಿಲ್ಲ. ಅವರು ಯಾರನ್ನು ಬೇಕಾದರೂ.. ಹೇಗೆ ಬೇಕಾದರೂ ಟೀಕೆ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಅಡ್ಜಸ್ಟ್‌ ಮೆಂಟ್‌ ರಾಜಕಾರಣದ ಆರೋಪ ಮಾಡುತ್ತಿದ್ದ ಯತ್ನಾಳ್‌ವಿರುದ್ಧವೂ ಹೊಂದಾಣಿಕೆ ರಾಜಕೀಯದ ಆರೋಪಗಳಿದ್ದವು. ಯತ್ನಾಳ್‌ ಉಚ್ಚಾಟನೆಗೆ 10 ಕಾರಣಗಳನ್ನು ಪಟ್ಟಿ ಮಾಡಬಹುದು.

1. ನಾಲಗೆಯೇ ಶತ್ರು..!

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಯತ್ನಾಳ್‌ ಅವರದ್ದು ಹಠಮಾರಿ ವ್ಯಕ್ತಿತ್ವ. ಇನ್ನು ಅವರಿಗೆ ಮನಸ್ಸಿಗೆ ಬಂದಂತೆ ಬಯ್ಯುವ ಹವ್ಯಾಸವೂ ಇದೆ. ಹಾಗೆ ಬಯ್ಯುವಾಗ ಏಕವಚನ, ಬಹುವಚನಗಳನ್ನು ನೋಡುವುದಿಲ್ಲ. ಹಂದಿ, ನಾಯಿ ಅನ್ನೋದಕ್ಕೂ ಹಿಂದೆ ಮುಂದೆ ನೋಡಲ್ಲ. ಆದರೆ.. ಹಾಗೆ ಬಯ್ಯುವಾಗ ಎದುರಾಳಿಗಳೂ ತಮಗೆ ಹೆದರಿ ಕೂರಬೇಕು ಎಂದು ಬಯಸುತ್ತಾರೆ. ಆದರೆ.. ಹಾಗಾಗುವುದಿಲ್ಲ. ಅದೇ ಮಾದರಿಯಲ್ಲಿ ತಿರುಗೇಟು, ಬೈಗುಳಗಳು ಬಂದಾಗ ಕೆರಳಿ ಕೆಂಡವಾಗುವ ಯತ್ನಾಳ್‌, ಇನ್ನಷ್ಟು ಹತೋಟಿ ತಪ್ಪುತ್ತಾರೆ.

2. ಸಂಧಾನಕ್ಕೆ ಡೋಂಟ್‌ ಕೇರ್..!

ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಸಂಧಾನ ನಡೆಸುವ ಹಲವರ ಪ್ರಯತ್ನಗಳಿಗೆ ಯತ್ನಾಳ್‌ ಸೊಪ್ಪು ಹಾಕಲೇ ಇಲ್ಲ. ಈ ವಿಚಾರವಾಗಿ ಹೈಕಮಾಂಡ್‌ ಮಾಡಿದ ಮನವಿಯನ್ನೂ ಯತ್ನಾಳ್‌ ಕಡೆಗಣಿಸಿದರು.‌ ಮಾಡಿದ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೂ ಕೊಂಡೊಯ್ಯದೆ.. ನೀಡುತ್ತಿದ್ದ ಹೇಳಿಕೆಗಳು ಯತ್ನಾಳ್‌ ಅವರನ್ನು ಬಿಜೆಪಿಯಲ್ಲಿ ಒಂಟಿಯಾಗಿಸಿದವು.

3. ಬೆದರಿಕೆ ತಂತ್ರವೇ ವಿಲನ್..!

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅನೇಕ ಭ್ರಷ್ಟಾಚಾರ ಆರೋಪಗಳನ್ನು ಮತ್ತು ವೈಯಕ್ತಿಕ ಟೀಕೆಗಳನ್ನು ಮಾಡಿದ್ದ ಬಸವನಗೌಡ ಪಾಟೀಲ್‌ ಯತ್ನಾಳ್‌, ಒಂದು ವೇಳೆ ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದೇ ಆದಲ್ಲಿ ಪಕ್ಷದ ಭ್ರಷ್ಟಾಚಾರದ ವಿವಿರಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಯತ್ನಾಳ್‌ ಅವರ ಈ ಬೆದರಿಕೆಗಳಿಂದ ಕೆರಳಿದ ಹೈಕಮಾಂಡ್‌, ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಕ್ರಮ ಕೈಗೊಂಡಿದೆ.

4. ಏಕಾಂಗಿ ಹೋರಾಟದ ಮಂತ್ರ..!

ತನ್ನ ಬಣದ ನಾಯಕರೊಡನೆ ರಾಜ್ಯಾದ್ಯಂತ ವಕ್ಫ್‌ ವಿರೋಧಿ ಹೋರಾಟವನ್ನು ಆಯೋಜನೆ ಮಾಡಿದ್ದ ಯತ್ನಾಳ್‌ ಬಿಜೆಪಿ ರಾಜ್ಯ ಘಟಕದ ಅನುಮತಿ ಪಡೆಯುವ ಪ್ರಯತ್ನವನ್ನೇ ಮಾಡಲಿಲ್ಲ. ಅಲ್ಲದೇ ಬಿಜೆಪಿ ರಾಜ್ಯ ಘಟಕ ಅಧಿಕೃತವಾಗಿ ಹಮ್ಮಿಕೊಂಡಿದ್ದ ವಕ್ಫ್‌ ವಿರೋಧಿ ಹೋರಾಟದಲ್ಲಿ ಯತ್ನಾಳ್‌ ಪಾಲ್ಗೊಳ್ಳಲಿಲ್ಲ. ವಕ್ಫ್‌ ವಿರೋಧಿ ಹೋರಾಟ, ಪಕ್ಷಕ್ಕೆ ಬಲ ತುಂಬುವ ಬದಲು ನಿಶ್ಯಕ್ತಿಯಾಗುವಂತೆ ಮಾಡಿತು. ಕಾರ್ಯಕರ್ತರು ಗೊಂದಲಕ್ಕೊಳಗಾದರು.

5. ವಿಜಯೇಂದ್ರರನ್ನು ಪ್ರಶ್ನೆ ಮಾಡಿದರೆ..

ಯತ್ನಾಳ್‌ ಅವರ ಗುಂಪುಗಾರಿಕೆ ಮತ್ತು ಬಣ ರಾಜಕಾರಣದಿಂದಾಗಿ ವಿಜಯೇಂದ್ರ ಅವರನ್ನ ಪ್ರಶ್ನೆ ಮಾಡುವಂತಾಯಿತು. ವಿಜಯೇಂದ್ರ, ಹೈಕಮಾಂಡ್‌ ಆಯ್ಕೆಯಾಗಿದ್ದರು. ಆ ಮೂಲಕ ಅವರು ಹೈಕಮಾಂಡ್‌ ನಿರ್ಧಾರವನ್ನೂ ಪ್ರಶ್ನೆ ಮಾಡಿದ್ದರು. ಪದೇ ಪದೇ ಪಕ್ಷದ ನಾಯಕತ್ವದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ, ಯತ್ನಾಳ್‌ ಅವರು ಪಕ್ಷದ ಆಂತರಿಕ ರಚನೆಗೆ ಪೆಟ್ಟು ನೀಡುತ್ತಿದ್ದಾರೆ..” ಎಂದು ವಿಜಯೇಂದ್ರ ಬಣ ಹೈಕಮಾಂಡ್‌ಗೆ ದೂರು ನೀಡಿತು. ಹೈಕಮಾಂಡ್‌ ಈ ದೂರುಗಳನ್ನು ಸ್ವೀಕರಿಸಿದ್ದು ಮಾತ್ರವಲ್ಲದೇ, ಇವುಗಳಲ್ಲಿ ಸತ್ಯ ಇದೆ ಎಂಬ ತೀರ್ಮಾನಕ್ಕೂ ಬಂದಿತು.

6. ಗುಂಪುಗಾರಿಕೆ

ಯಡಿಯೂರಪ್ಪ ವಿರುದ್ಧ ರಾಜಕೀಯ ಯುದ್ಧವನ್ನೇ ಸಾರಿದ ಬಸನಗೌಡ ಪಾಟೀಲ್‌ ಯತ್ನಾಳ್‌, ಪಕ್ಷದಲ್ಲಿ ಗುಂಪುಗಾರಿಕೆಯ ಚಟುವಟಿಕೆಗಳಿಗೆ ನಾಯಕತ್ವ ವಹಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವ ಹೊಂದಿರುವ ಯತ್ನಾಳ್‌, ವಿಜಯೇಂದ್ರ ವಿರುದ್ಧ ಅಸಮಾಧಾನ ಹೊಂದಿದ್ದ ನಾಯಕರಿಗೆಲ್ಲ ಟಾನಿಕ್‌ ಕೊಟ್ಟರು. ರಮೇಶ್‌ ಜಾರಕಿಹೊಳಿ, ಕುಮಾರ್‌ ಬಂಗಾರಪ್ಪ, ಜಿಎಂ ಸಿದ್ದೇಶ್ವರ, ಬಿಪಿ ಹರೀಶ್‌, ಅರವಿಂದ ಲಿಂಬಾವಳಿ, ಸಿಟಿ ರವಿ, ಪ್ರತಾಪ್‌ ಸಿಂಹ ಸೇರಿದಂತೆ ಬಹುತೇಕ ನಾಯಕರಿಗೆ ಯತ್ನಾಳ್‌ ನೇತೃತ್ವ ವಹಿಸಿದ್ದರು.

7. ಗೆಲ್ಲುವ ಸಾಮರ್ಥ್ಯ ಕಡಿಮೆ

ವಿಜಯೇಂದ್ರ ಅವರಿಗೆ ಹೋಲಿಸಿದರೆ ಯತ್ನಾಳ್‌ ಅವರಿಗೆ ಗೆಲ್ಲಿಸುವ ಸಾಮರ್ಥ್ಯ ಇಲ್ಲ. ಅವರ ಕ್ಷೇತ್ರದಲ್ಲಿಯೇ ಲೋಕಸಭೆಯಲ್ಲಿ ಬಿಜೆಪಿಗೆ ಲೀಡ್‌ ಸಿಕ್ಕಿರಲಿಲ್ಲ. ಯತ್ನಾಳ್‌ ಅವರಷ್ಟೇ ಅಲ್ಲ, ಯತ್ನಾಳ್‌ ಬಣದ ಬಹುತೇಕ ನಾಯಕರಿಗೆ ಮುಳುವಾಗಿದ್ದೇ ಈ ವಿಚಾರ. ತಮ್ಮ ಕ್ಷೇತ್ರದಲ್ಲೇ ಪ್ರಭಾವ ಇಲ್ಲದವರು, ಗೆಲ್ಲಿಸುವ ಸಾಮರ್ಥ್ಯ ಇರುವವರನ್ನು ಪ್ರಶ್ನೆ ಮಾಡುತ್ತಾ ಹೋಗಬಾರದು ಎನ್ನುವ ನಿಲುವಿಗೆ ಹೈಕಮಾಂಡ್‌ ಬಂತು.

8. ಆಂತರಿಕ ಸರ್ವೆ

ಇನ್ನು ಅಮಿತ್‌ ಶಾ ಅವರು ತರಿಸಿಕೊಂಡ ಆಂತರಿಕ ಸರ್ವೆಯಲ್ಲಿ ವಿಜಯೇಂದ್ರ ಪರ ಶೇ.80ಕ್ಕೂ ಹೆಚ್ಚು ಕಾರ್ಯಕರ್ತರ ಒಲವಿತ್ತು. ಇದೂ ಕೂಡಾ ಯತ್ನಾಳ್‌ ಉಚ್ಚಾಟನೆಗೆ ಕಾರಣವಾಯ್ತು

9. ಪಂಚಮಸಾಲಿ ಭಯ

ಇನ್ನು ಯತ್ನಾಳ್‌ ಪಂಚಮಸಾಲಿ ಲಿಂಗಾಯತರು. ಯತ್ನಾಳ್‌ ಹೋರಾಟದಿಂದಾಗಿ ಬಿಜೆಪಿಯ ಲಿಂಗಾಯತ ಮತಗಳು ಛಿದ್ರವಾದವೇ ಹೊರತು, ಲಾಭವಾಗಲಿಲ್ಲ. ಆ ಲಾಭವಾಗಿದ್ದು ಕಾಂಗ್ರೆಸ್ಸಿಗೆ.

10. ಹೈಕಮಾಂಡ್‌ ವಿರುದ್ಧವೂ ಭ್ರಷ್ಟಾಚಾರದ ಆರೋಪ

ಪದೇ ಪದೇ ರಾಜ್ಯ ನಾಯಕತ್ವದ ವಿರುದ್ಧ ಕಿಡಿಕಾರುತ್ತಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌, 2 ಸಾವಿರ ಕೋಟಿ ಕೊಟ್ಟರೆ ಸಿಎಂ ಆಗಬಹುದು ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಇದು ದೆಹಲಿಯ ನಾಯಕರನ್ನು ಕೆರಳಿಸಿತ್ತು. ಕಾಂಗ್ರೆಸ್ಸಿಗೆ ಬಹುದೊಡ್ಡ ಅಸ್ತ್ರ ಒದಗಿಸಿತ್ತು.

ಒಟ್ಟಿನಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್ ಅವರ‌ ಉಚ್ಚಾಟನೆ ನಿರ್ಧಾರ, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳಿಗೆ ಕಾರಣವಾಗಿದೆ. ಇದೀಗ ಯತ್ನಾಳ್‌ ಅವರ ರಾಜಕೀಯ ನಡೆ ಏನಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ.

 

 

Tags: #ಯತ್ನಾಳ್‌ #ಉಚ್ಚಾಟನೆ #ವಿಜಯೇಂದ್ರ #ಬಿಜೆಪಿ #Yatnal #Expulsion #Vijayendra #BJPಯತ್ನಾಳ್‌ ಉಚ್ಚಾಟನೆಗೆ 10 ಕಾರಣಗಳು..!
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.