ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 50 ದಿನಗಳು ಕಳೆದುಹೋಗಿವೆ. ಈ ಮಧ್ಯೆ ತನಿಖೆಯಲ್ಲಿ ರೇಣುಕಾಸ್ವಾಮಿ ಅವರ ಬ್ಲಡ್ ಸ್ಯಾಂಪಲ್ಸ್ ಗುರುತು ಸಿಕ್ಕಿರುವ ಬಗ್ಗೆ ಮಾಹಿತಿ ಬಂದಿದೆ. ಅಂದ್ರೆ ವಿಜಯಲಕ್ಷ್ಮಿ ದರ್ಶನ್ ಮನೆಯಲ್ಲಿ ಸಿಕ್ಕ ಬ್ರಾಂಡೆಡ್ ಜೀನ್ಸ್ ಪ್ಯಾಂಟ್ʻನಲ್ಲಿ ರೇಣುಕಾಸ್ವಾಮಿ ಅವರ ಬ್ಲಡ್ ಸ್ಯಾಂಪಲ್ಸ್ ಸಿಕ್ಕಿದೆಯಂತೆ.
ಪೊಲೀಸರು ದರ್ಶನ್ ಪತ್ನಿಯ ಮನೆಯಲ್ಲಿ ಸಿಕ್ಕ ಪ್ಯಾಂಟ್ʻನ್ನ ವಾಷ್ ಮಾಡಿ ಒಣಗಲು ಹಾಕಿದ್ದರು. ಆ ಪ್ಯಾಂಟ್ʻನ್ನೇ ವಶಪಡಿಸಿಕೊಂಡಿದ್ದ ಪೊಲೀಸರು ʻಲುಮಿನಲ್ ಟೆಸ್ಟ್ʼ ಮೂಲಕ ಬ್ಲಡ್ ಸ್ಯಾಂಪಲ್ ಪತ್ತೆ ಹಚ್ಚಿದ್ದಾರೆ. ಈ ಲುಮಿನಲ್ ಟೆಸ್ಟ್ ಅಂದ್ರೆ ಫೋರೆನ್ಸಿಕ್ʻನಲ್ಲಿ ಬಳಸೋ ಟೆಕ್ನಿಕ್. ಸಾಮಾನ್ಯವಾಗಿ ಅಪರಾಧ ಮಾಡಿದವರು ಬಟ್ಟೆಗಳನ್ನು ಇನ್ಯಾವುದೋ ರೀತಿಯಲ್ಲಿ ಇಟ್ಟುಕೊಂಡಿದ್ದರೆ, ಆ ಬಟ್ಟೆಗಳ ಮೇಲಿನ ಬ್ಲಡ್ ಸ್ಯಾಂಪಲ್ ಪತ್ತೆಗೆ ಲುಮಿನಲ್ ಟೆಸ್ಟ್ ಮಾಡ್ತಾರೆ. ಆ ಮೂಲಕ ಅಡಗಿರುವ ಸಾಕ್ಷ್ಯವನ್ನು ಹೊರತೆಗೆಯುತ್ತಾರೆ.
ಲುಮಿನಲ್ ಟೆಸ್ಟ್ ಅಂದ್ರೆ..
ಲಮಿನಲ್ ಎಂಬುದು ಒಂದು ರೀತಿಯ ಕೆಮಿಕಲ್. ರಕ್ತದ ಕಲೆ ಇರುವ ಬಟ್ಟೆಗೆ ಲುಮಿನಲ್ ಕೆಮಿಕಲ್ ಅಪ್ಲೈ ಮಾಡಲಾಗುತ್ತೆ.
ಬಟ್ಟೆಯನ್ನ ಎಷ್ಟೇ ವಾಷ್ ಮಾಡಿದ್ದರೂ.. ಹಿಮೋಗ್ಲೋಬಿನ್ ಹೋಗಿರಲ್ಲ. ಆ ಹಿಮೋಗ್ಲೋಬಿನ್ʻನಲ್ಲಿ ಕಬ್ಬಿಣದ ಅಂಶ ಇರುತ್ತೆ. ಈ ಲುಮಿನಲ್ ಕೆಮಿಕಲ್, ಆ ಹಿಮೋಗ್ಲೋಬಿನ್ ಜೊತೆ ರಾಸಾಯನಿಕ ಸಂಯೋಜನೆ ಆಗುತ್ತೆ. ಹಿಮೋಗ್ಲೋಬಿನ್ ಜೊತೆ ಕೆಮಿಕಲ್ ರಿಯಾಕ್ಷನ್ ನಂತರ ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದನೆ ಮಾಡುತ್ತೆ. ಆ ನೀಲಿ-ಹಸಿರು ಬಣ್ಣದ ದ್ರಾವಣ ಸಂಗ್ರಹಿಸಿ ಅದರಿಂದ ಡಿಎನ್‌ಎ ಸಂಗ್ರಹಿಸಲಾಗುತ್ತೆ. ಹೀಗೆ ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆಯಾಗಿವೆ.
ಇನ್ನು ದರ್ಶನ್ ಬಹುತೇಕ ಸಾಕ್ಷಿಗಳನ್ನು ನಾಶ ಮಾಡಿದ್ದರೂ.. ಅದು ಒಂದು ಲಕ್ಷದ ಜೀನ್ಸ್ ಪ್ಯಾಂಟ್ ಅನ್ನೋ ಕಾರಣಕ್ಕೆ ನಾಶ ಮಾಡಲಿಲ್ವಾ ಅನ್ನೋ ಪ್ರಶ್ನೆ ಎದುರಾಗುತ್ತೆ. ದೊಡ್ಡ ದೊಡ್ಡ ಕ್ರೈಂ ಮಾಡಿದವರೆಲ್ಲ ಇಂತಹ ಸಿಲ್ಲಿ ಕಾರಣಗಳಿಂದಾಗಿಯೇ ಸಿಕ್ಕಿ ಹಾಕಿಕೊಂಡವರು ಅನ್ನೋ ಇತಿಹಾಸ ನೆನಪಾದರೆ.. ದರ್ಶನ್ ಮಾಡಿದ್ದು ನ್ಯಾಚುರಲ್ ಅಂತಾ ಅನ್ಸುತ್ತೆ. ಈ ಮಧ್ಯೆ ದರ್ಶನ್ ಅವರ ಆಪ್ತ, ಹಾಸ್ಯ ನಟ ಚಿಕ್ಕಣ್ಣ ಅವರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 164 ಅಡಿಯಲ್ಲಿ.
ರೇಣುಕಾಸ್ವಾಮಿ ಕೊಲೆ ನಡೆದ ದಿನ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್‌ನಲ್ಲಿ ದರ್ಶನ್ ಪಾರ್ಟಿ ಮಾಡಿದ್ದರು. ಆ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಇದ್ದರು. ಈ ಸಂಬಂಧ ಚಿಕ್ಕಣ್ಣ ಅವರನ್ನ ಪೊಲೀಸರು ಜೂನ್ 17ರಂದು ವಿಚಾರಣೆಯನ್ನೂ ನಡೆಸಿದ್ದರು. ಇದೀಗ ನ್ಯಾಯಾಧೀಶರ ಎದುರು CRPC 164 ಅಡಿಯಲ್ಲಿ ಚಿಕ್ಕಣ್ಣ ಅವರ ಹೇಳಿಕೆಯನ್ನ ಪೊಲೀಸರು ದಾಖಲಿಸಿಕೊಂಡಿದ್ದಾರೆ.
CRPC 164 ಅಡಿಯಲ್ಲಿ ನೀಡುವ ಹೇಳಿಕೆಯನ್ನು ಖುದ್ದು ಮ್ಯಾಜಿಸ್ಟ್ರೇಟ್ ದಾಖಲಿಸಿಕೊಳ್ಳುತ್ತಾರೆ. ಅದು ಪೊಲೀಸರ ಎದುರು ನೀಡುವ ಹೇಳಿಕೆಯಂತಲ್ಲ. ಹೇಳಿಕೆಯನ್ನು ಬದಲಾಯಿಸಲು ಅಥವಾ ಆಗ ತಪ್ಪಾಗಿತ್ತು, ಅರ್ಥವಾಗಿರಲಿಲ್ಲ ಎಂದು ತಿದ್ದಲು ಸಾಧ್ಯವಿಲ್ಲ. ಹೀಗಾಗಿ CRPC 164 ಅಡಿಯಲ್ಲಿ ಚಿಕ್ಕಣ್ಣ ಕೊಟ್ಟಿರುವ ಹೇಳಿಕೆಯಿಂದ ದರ್ಶನ್‌ಗೆ ಕಂಟಕವಾಗುತ್ತಾ, ಇಲ್ವಾ ಎಂಬುದು ಚಾರ್ಜ್‌ಶೀಟ್‌ನಲ್ಲಿ ಗೊತ್ತಾಗಲಿದೆ.
ಆದರೆ.. ಚಿಕ್ಕಣ್ಣ ಅವರ ಹೇಳಿಕೆಯಲ್ಲಿ ಈ 1 ಲಕ್ಷದ ಜೀನ್ಸ್ ಕಥೆಯೂ ಬರುತ್ತೆ. ದರ್ಶನ್ ಕೊಲೆಯಾದ ದಿನ ಧರಿಸಿದ್ದು ಅದೇ ಪ್ಯಾಂಟ್ ಆಗಿದ್ದರೆ, ಚಿಕ್ಕಣ್ಣ ಒಪ್ಪಿಕೊಳ್ಳಲೇಬೇಕಾಗುತ್ತೆ. ಯಾಕೆ ಅಂದ್ರೆ ಸಿಸಿಟಿವಿ ಫುಟೇಜ್ ಕೂಡಾ ಇದೆ. ಅದನ್ನು ತಿರುಚಿ ನೋಡಿಲ್ಲ ಅಥವಾ ಇದು ಆ ಪ್ಯಾಂಟ್ ಅಲ್ಲ ಅನ್ನೋಕೂ ಆಗಲ್ಲ. ಇನ್ನು ಹಾಕಿಕೊಂಡಿದ್ದು ಇದೇ ಪ್ಯಾಂಟ್ ಎಂದು ಹೇಳಿದರೆ.. ಆಗ ಅದು ದರ್ಶನ್ʻಗೆ ಉಲ್ಟಾ ಹೊಡೆಯುತ್ತೆ. ಒಟ್ಟಿನಲ್ಲಿ ದರ್ಶನ್ ಅವರನ್ನ ಬಚಾವ್ ಮಾಡಬೇಕು ಎಂದುಕೊಂಡರೂ.. ಬಚಾವ್ ಮಾಡೋಕೆ ಆಗದ ಸ್ಥಿತಿಯಲ್ಲಿದ್ದಾರೆ ಚಿಕ್ಕಣ್ಣ.
ಸ್ಟೋನಿ ಬ್ರೂಕ್‌ನಲ್ಲಿ ನಡೆದ ಪಾರ್ಟಿಯಲ್ಲಿ ಚಿಕ್ಕಣ್ಣ ಅವರನ್ನೂ ಆಹ್ವಾನಿಸಲಾಗಿತ್ತು. ಪಾರ್ಟಿ ವೇಳೆ ರೇಣುಕಾಸ್ವಾಮಿ ಅವರನ್ನ ಕರೆತಂದ ಬಗ್ಗೆ ದರ್ಶನ್‌ಗೆ ಪವನ್ ಮಾಹಿತಿ ನೀಡಿದ್ದನಂತೆ. ಚಿಕ್ಕಣ್ಣ ತಮಗೆ ರೇಣುಕಾಸ್ವಾಮಿಯನ್ನು ಕರೆತಂದಿರುವ ವಿಷಯ ಗೊತ್ತಿರಲಿಲ್ಲ ಎಂದು ಮಾಧ್ಯಮಗಳು ಎದುರು ಹೇಳಿಕೆ ನೀಡಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 17 ಆರೋಪಿಗಳಿದ್ದಾರೆ. ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ಭದ್ರತಾ ದೃಷ್ಟಿಯಿಂದ 4 ಆರೋಪಿಗಳನ್ನು ತುಮಕೂರು ಜೈಲಿನಲ್ಲಿ ಇರಿಸಲಾಗಿದೆ.



