ಕನ್ನಡದ ಈ ಸೆಂಚುರಿ ಸ್ಟಾರ್ (Century star) ಅದೆಷ್ಟು ಸಿನಿಮಾ ಮಾಡ್ತಾರೋ.. ಏನೋ.. ಕನ್ನಡದಲ್ಲಿಯೇ ಡಜನ್ ಗಟ್ಟಲೆ ಸಿನಿಮಾಗಳಿವೆ. ತಮಿಳು, ಮಲಯಾಳಂ, ತೆಲುಗುನಲ್ಲೂ ಡಿಮ್ಯಾಂಡ್ ಇದೆ. ಶಿವಣ್ಣ ಈಗ ಬೌಂಡರಿ ದಾಟಿದ್ದಾರೆ. ತೆಲುಗಿನಲ್ಲಿ, ತಮಿಳಿನಲ್ಲಿ ನಟಿಸಿರುವ ಶಿವಣ್ಣ(Dr. Shiva rajkumar) ಮಲಯಾಳಂನಲ್ಲಿಯೂ ಚಿತ್ರವೊಂದಕ್ಕೆ ಮಾತುಕತೆಯಲ್ಲಿದ್ದಾರೆ. . ಇಷ್ಟು ದಿನ ಕನ್ನಡಿಗರಿಗಷ್ಟೆ ಗೊತ್ತಿದ್ದ ಶಿವಣ್ಣನ (Shivanna) ಗತ್ತು ‘ಜೈಲರ್’ (jailor) ಸಿನಿಮಾದಿಂದ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೂ ಗೊತ್ತಾಗಿದೆ. ಕನ್ನಡದ ಬಹುಬೇಡಿಕೆಯ ಸ್ಟಾರ್ ನಟರಾಗಿದ್ದ ಶಿವರಾಜ್ ಕುಮಾರ್ ‘ಜೈಲರ್’ ಬಳಿಕ ಪರಭಾಷೆಗಳಲ್ಲಿಯೂ ಬೇಡಿಕೆಯ ನಟರಾಗಿಬಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಈಗಾಗಲೇ ಖದರ್ ತೋರಿಸಿರುವ ಶಿವಣ್ಣ, ಬಾಲಿವುಡ್ನಲ್ಲೂ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ.
ದಿ ಕೇರಳ ಸ್ಟೋರಿ (The Kerala Story) ಸಿನಿಮಾ ನಿರ್ದೇಶಕ ಸುದಿಪ್ತೋ ಸೇನ್ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಜೊತೆಗೆ ಸಿನಿಮಾ ವಿತರಕ ಹಾಗೂ ನಿರ್ಮಾಪಕ ಎನ್ಎಸ್ ರಾಜಕುಮಾರ್ (N S Rajkumar) ಸಹ ಅವರ ಜೊತೆಗಿದ್ದಾರೆ. ಮೂವರು ಒಟ್ಟಿಗಿರುವ ಚಿತ್ರ ಇದೀಗ ವೈರಲ್ ಆಗಿದ್ದು, ಸಿನಿಮಾ ಸಂಬಂಧಿಸಿದಂತೆ ಮಾತುಕತೆಗೆ ಈ ಮೂವರು ಸೇರಿದ್ದಾರೆ ಎನ್ನಲಾಗುತ್ತಿದೆ. ಹಿಂದಿ ಸಿನಿಮಾ ಒಂದರ ಮಾತುಕತೆ ನಡೆದಿದ್ದು, ಸುದಿಪ್ತೋ ನಿರ್ದೇಶನದ ಈ ಸಿನಿಮಾದ ಬಗ್ಗೆ ಶಿವರಾಜ್ ಕುಮಾರ್ ಸಹ ಆಸಕ್ತಿ ತೋರಿದ್ದು, ಕತೆ ಓಕೆ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಶಿವಣ್ಣ ಅಂತೂ ಫ್ರೀ ಇಲ್ಲ. ಒಂದು ದಿನವೂ ಫ್ರೀ ಇರಲ್ಲ. ಕೈತುಂಬಾ ಕೆಲಸಗಳಿವೆ. ಹಲವು ಚಿತ್ರಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಹಿಂದಿಯನ್ನೂ ಒಪ್ಪಿಕೊಂಡರೆ ಅದಕ್ಕೆ ಡೇಟ್ಸ್ ಹೊಂದಿಸುವುದೇ ಸಮಸ್ಯೆಯಾಗಲಿದೆ. ಆದರೆ, ಶಿವಣ್ಣ ನಟನೆಯನ್ನು ತಪಸ್ಸಿನಂತೆ ಆಚರಿಸುತ್ತಿದ್ದಾರೆ. ನಟಿಸಬೇಕು.. ನಟಿಸಬೇಕು.. ನಟಿಸುತ್ತಲೇ ಇರಬೇಕು ಎನ್ನುವುದು ಶಿವಣ್ಣ ಮಂತ್ರ. ಹಾಗಾಗಿ.. ಎಷ್ಟೇ ಚಿತ್ರಗಳಿದ್ದರೂ.. ಶಿವಣ್ಣ ಹೊಸ ಚಿತ್ರಗಳಿಗೆ ಯೆಸ್ ಅಂತಿರ್ತಾರೆ. ಇದು ಇವತ್ತಿನ ಕಥೆಯಲ್ಲ. ಆರಂಭದಿಂದ ಹಿಡಿದು ಸ್ಟಾರ್ ಪಟ್ಟ ಸಿಕ್ಕಾಗಲೂ.. ಸೋತಾಗಲೂ.. ಗೆದ್ಧಾಗಲೂ.. ಹಲವು ವರ್ಷಗಳಿಂದಲೂ ಶಿವಣ್ಣ ಇರೋದೇ ಹಾಗೆ.



