ತೂಕ ಇಳಿಸಿಕೊಳ್ಳೋಕೆ ಒಬ್ಬೊಬ್ಬರು ಒಂದು ಐಡಿಯಾ ಫಾಲೋ ಮಾಡ್ತಾರೆ. ಅದಕ್ಕೆಂದೇ ತರಹೇವಾರಿ ಫುಡ್ ಸಿಗ್ತವೆ. ಅಂತಹ ಒಂದು ಹಣ್ಣು ಐಸ್ ಆಪಲ್. ನೋಡೋಕೆ ಲಿಚಿ ಹಣ್ಣಿನಂತೆ ಕಾಣೋ ಈ ಐಸ್ ಌಪಲ್ ತಿನ್ನೋಕೆ ಸಿಹಿ. ಆದರೆ ಈ ಹಣ್ಣಿನಲ್ಲಿ ಎಲ್ಲ ಪೋಷ್ಟಕಾಂಶಗಳೂ ಇವೆಯಂತೆ. ಎಳನೀರಿನಂತೆಯೂ ಇರುತ್ತೆ. ಆದರೆ ನೀರಿರಲ್ಲ. ಒಳಗೆ ಌಪಲ್ ಇರುತ್ತೆ.
ಐಸ್ ಸೇಬು ನೋಡೋಕೆ ಟ್ರಾನ್ಸ್ಪರೆಂಟ್. ಅರೆಪಾರದರ್ಶಕ. ತಿರುಳಿರುತ್ತವೆ. ಇದು ಭಾರತದ ಕರಾವಳಿ ಪ್ರದೇಶಗಳಲ್ಲಿ ಸಿಗುತ್ತೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಸಿಗುತ್ತೆ. ಬೇಸಿಗೆಯಲ್ಲಿ ಸ್ವಲ್ಪ ಜಾಸ್ತಿನೇ ಸಿಗುತ್ತೆ.
ಉದ್ದಕ್ಕೂ ವ್ಯಾಪಕವಾಗಿ ಕಂಡುಬರುತ್ತದೆ. ಮರಾಠಿ ಮತ್ತು ಹಿಂದಿಯಲ್ಲಿ ತಡ್ಗೊಲಾ ಎಂದೂ ತಮಿಳಿನಲ್ಲಿ ನುಂಗು ಎಂದೂ ಕರೆಯಲ್ಪಡುವ ಐಸ್ ಸೇಬು, ಸಕ್ಕರೆ ಪಾಮ್ ಮರದ ಹಣ್ಣು. ಇದಕ್ಕೆ ಜನ ಕರೆಯೋದು ಐಸ್ ಌಪಲ್ ಅಂತಾ.
ಐಸ್ ಸೇಬುಗಳು ಆರೋಗ್ಯಕ್ಕೆ ಒಳ್ಳೇದು.ದೇಹಕ್ಕೆ ಕೂಲರ್ ಆಗಿ ಕೆಲಸ ಮಾಡ್ತವೆ. ಕ್ಯಾಲ್ಸಿಯಂ ಫೈಟೊನ್ಯೂಟ್ರಿಯೆಂಟ್ಗಳು ಮತ್ತು ಕಾರ್ಬೋಹೈಡ್ರೇಟ್ಗಳಿರೋ ಇದು ಸಾಲಿಡ್ ಎಳನೀರಿನಂತೆ ಅರ್ಥಾತ್ ಘನರೂಪದ ಎಳನೀರು ಅಂದ್ರೂ ತಪ್ಪಲ್ಲ. ಐಸ್ ಸೇಬು ಕಡಿಮೆ ಕ್ಯಾಲೊರಿ ಇರೋ ಹಣ್ಣು. ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಎ, ಸಿ, ಇ ಎಲ್ಲವೂ ಇದರಲ್ಲಿ ಸ್ವಲ್ಪ ಜಾಸ್ತಿನೇ ಇರುತ್ತೆ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳೋಕೆ ಇದು ಒಳ್ಳೆ ಆಹಾರ ಎನ್ನುತ್ತಾರೆ ತಜ್ಞರು.
ತೂಕ ಇಳಿಸೋಕೆ ಟ್ರೈ ಮಾಡ್ತಿರೋವ್ರಿಗೆ ಇದು ಒಳ್ಳೆಯ ಫುಡ್. ಹಣ್ಣಿನಲ್ಲಿರೋ ನೀರು ಮತ್ತು ನಾರಿನ ಅಂಶ ಹಸಿವು ತಡೆಯುತ್ತೆ. ದೀರ್ಘಕಾಲ ಹೊಟ್ಟೆ ತುಂಬಿದ ಫೀಲಿಂಗ್ ಕೊಡುತ್ತೆ. ಹೀಗಿದ್ದರೆ ನೀವು ಬೇಕಾಬಿಟ್ಟಿ ತಿನ್ನೋದನ್ನ ಅವಾಯ್ಡ್ ಮಾಡಬಹುದು. ಜೊತೆಗೆ ಇದರಲ್ಲಿ ಕಡಿಮೆ ಕ್ಯಾಲೋರಿ ಇರೋದ್ರಿಂದ ತೂಕ ಕಡಿಮೆ ಮಾಡಿಕೊಳ್ಳೋಕೆ ಇದು ಒಳ್ಳೆ ಮೆಡಿಸಿನ್. ಇದನ್ನು ತಿಂದರೆ ಜೀರ್ಣಕ್ರಿಯೆಯೂ ಸರಾಗ.
ಇದು ಹಸಿವನ್ನು ತಡೆಯೋದಷ್ಟೇ ಅಲ್ಲ, ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತೆ. ಜೊತೆಗೆ ದೇಹದ ಉಷ್ಣತೆಯನ್ನು ಕಂಟ್ರೋಲ್ ಮಾಡೋಕೆ ಸಹಾಯ ಮಾಡುತ್ತೆ. ಇದರಲ್ಲಿ ಫೈಬರ್ಗಳು, ಪ್ರೋಟೀನ್ಗಳು ಮತ್ತು ವಿಟಮಿನ್ನುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಮಲಬದ್ಧತೆ, ಹೊಟ್ಟೆ ಉಬ್ಬುವಿಕೆ, ವಾಕರಿಕೆ ಮತ್ತಿತರ ಸಮಸ್ಯೆಗಳಿಗೂ ಇದು ರಾಮಬಾಣ.
ಗರ್ಭಾವಸ್ಥೆಯಲ್ಲಿರುವವರಿಗೆ ಇದು ತುಂಬಾ ಆರೋಗ್ಯಕರ ಆಹಾರ. ಆಹಾರದಲ್ಲಿ ಐಸ್ ಸೇಬುಗಳನ್ನು ಸೇರಿಸಿದ್ರೆ ತಿಂದಿದ್ದೆಲ್ಲ ಸರಾಗವಾಗಿ ಹೊರ ಹೋಗುತ್ತೆ. ಜೊತೆಗೆ ಗರ್ಭಿಣಿಯರಲ್ಲಿ ಇದು ಎದೆ ಹಾಲು ಹೆಚ್ಚಿಸುವ ಆಯುರ್ವೇದಿಕ ಔಷಧಿಯೂ ಹೌದು.
ಐಸ್ ಸೇಬನ್ನು ತಾಜಾ ತಾಜಾ ಇದ್ದಾಗಲೇ ತಿನ್ನಬೇಕು. ಅದು ಎಳನೀರಿನ ಗಟ್ಟಿಯಾದ ಗಂಜಿಯಂತಿರುತ್ತೆ. ತುಂಬಾ ದಿನ ಇಡೋಕೆ ಸಾಧ್ಯವಿಲ್ಲ. ಫ್ರಿಜ್ಜಿನಲ್ಲಿಟ್ಟುಕೊಂಡು ತಿನ್ನಬಹುದಾದರೂ ಅದನ್ನು ಯಾರೂ ಶಿಫಾರಸು ಮಾಡೋದಿಲ್ಲ.



