ಕೆಲವು ವರ್ಷಗಳಿಂದ ಅಭಿಮಾನಿಗಳ ನಿರೀಕ್ಷೆಯನ್ನು ಟಚ್ ಕೂಡಾ ಮಾಡದೆ ಸುಮ್ಮನಿದ್ದ ಶ್ರೀಮುರಳಿ, ಈ ಬಾರಿ ಒಂದೇ ಹುಟ್ಟುಹಬ್ಬಕ್ಕೆ ಎರಡು ಗಿಫ್ಟ್ ಕೊಟ್ಟಿದ್ದಾರೆ. ಒಂದು ಬಘೀರನ ಟೀಸರ್. ಎರಡು ಪರಾಕ್ ಪೋಸ್ಟರ್. ಒಂದಕ್ಕಿಂತ ಒಂದು ಡಿಫರೆಂಟ್.
ಶ್ರೀಮುರಳಿ ತಮ್ಮ ಹುಟ್ಟುಬ್ಬದ ದಿನ ಎರಡು ಪ್ರೀತಿಯ ಶಾಕ್ ಕೊಟ್ಟಿದ್ಧಾರೆ. ಮೊದಲನೆಯದ್ದು ಬಘೀರ ಚಿತ್ರದ ಟೀಸರ್. ಎರಡನೆಯದ್ದ ಮತ್ತೊಂದು ಹೊಸ ಸಿನಿಮಾ ಘೋಷಣೆ. ಹೊಸ ಚಿತ್ರದ ಟೈಟಲ್ ಪರಾಕ್. ಶ್ರೀಮುರಳಿ ಹುಟ್ಟುಹಬ್ಬದ ವಿಶೇಷವಾಗಿ ‘ಬಘೀರ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅದೇ ದಿನ ಶ್ರೀಮುರಳಿಯ ಹೊಸ ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ.
ಬಘೀರ ಟೀಸರ್ನಲ್ಲಿ ಯಾವುದೇ ಡೈಲಾಗ್ ಇಲ್ಲ. ಕೇವಲ ಸಾಹಸ ದೃಶ್ಯಗಳು ಹೈಲೈಟ್ ಆಗಿವೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ ಎಂಬುದು ಸ್ಪಷ್ಟ. ‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ರೀತಿಯೇ ಈ ಸಿನಿಮಾ ಕೂಡ ಡಾರ್ಕ್ ಶೇಡ್ನಲ್ಲಿ ಮೂಡಿಬರುತ್ತಿದೆ ಎಂಬುದಕ್ಕೆ ಟೀಸರ್ ಸಾಕ್ಷಿ ಒದಗಿಸುತ್ತಿದೆ. ‘ಬಘೀರ’ ಸಿನಿಮಾಗೆ ಕಥೆ ಬರೆದಿರುವುದು ಪ್ರಶಾಂತ್ ನೀಲ್ , ಡಾ. ಸೂರಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟೀಸರ್ನಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದ್ದು, ಬಿ. ಅಜನೀಶ್ ಲೋಕನಾಥ್ ಗಮನ ಸೆಳೆಯುತ್ತಾರೆ.
ಇದರ ಜೊತೆಗೆ ಕೆಲವೇ ದಿನಗಳ ಹಿಂದೆ ಹೊಸ ಸಿನಿಮಾ ಬಗ್ಗೆ ಹೇಳಿಕೊಂಡಿದ್ದ ಶ್ರೀಮುರಳಿ ಹೊಸ ಚಿತ್ರ ಪರಾಕ್ʻನ್ನೂ ಲಾಂಚ್ ಮಾಡಿದ್ದಾರೆ. ರೋರಿಂಗ್ ಸ್ಟಾರ್ ಹುಟ್ಟುಹಬ್ಬದ ವಿಶೇಷಾಗಿ ಹೊಸ ಪರಾಕ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರೆಕ್ಕೆಯುಳ್ಳ ಏಂಜಲ್ ರೀತಿ ಪೋಸ್ಟರ್ನಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಅವರ ಒಂದು ರೆಕ್ಕೆ ಏಂಜಲ್ನ ರೆಕ್ಕೆಯಂತಿದ್ದರೆ ಮತ್ತೊಂದು ರೆಕ್ಕೆ ಬಂದೂಕುಗಳಿಂದ ಮಾಡಲಾಗಿದೆ. ಒಟ್ಟಾರೆ ಸಖತ್ ಹೊಸ ಅವತಾರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಕೆಲವು ಶಾರ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಅನುಭವ ಇರುವ ಹಾಲೇಶ್ ‘ಪರಾಕ್’ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ಧಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ. ‘ಪರಾಕ್’ ಸಿನಿಮಾವನ್ನು ಬ್ರ್ಯಾಂಡ್ ಕೋ-ಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ನಡಿ ನಿರ್ಮಾಣ ಮಾಡಲಾಗುತ್ತಿದ್ದು, ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ನಿರ್ಮಾಪಕರು. ಬಹುತೇಕ ದಾವಣಗೆರೆಯ ಪ್ರತಿಭೆಗಳೇ ಒಂದಾಗಿ ‘ಪರಾಕ್’ ಸಿನಿಮಾ ಮಾಡುತ್ತಿರುವುದು ವಿಶೇಷ.



