ಇತ್ತೀಚೆಗೆ ಜನ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಯಾವುದೋ.. ಯಾವ ಕಾಲಕ್ಕೋ ಇದ್ದಕ್ಕಿದ್ದಂತೆ ಹಿಟ್ ಆಗುತ್ತದೆ. ಟ್ರೋಲ್ ಆಗ್ತದೆ. ಎಷ್ಟೋ ವರ್ಷಗಳ ಹಿಂದೆ ಉಪೇಂದ್ರ ಅವರೇ ಸೃಷ್ಟಿಸಿದ್ದ ಹಾಡು.. ಏನಿಲ್ಲ. ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ. ನೀ.. ನಲ್ಲ.. ಹಾಡು ಇದ್ದಕ್ಕಿದ್ದಂತೆ ಟ್ರೋಲ್ ಆಗಿದ್ದು ಇದಕ್ಕೆ ಉದಾಹರಣೆ. ಆದರೆ, ಇಂತಹ ಟ್ರೋಲ್ ಪದಗಳನ್ನೇ ಹಾಡಾಗಿ ಬಳಸಬಹುದು ಅನ್ನೋ ಟ್ರೆಂಡ್ ಐಡಿಯಾ ಹೊಳೆದಿದ್ದೂ ಉಪೇಂದ್ರ ಅವರಿಗೆ.. ಈಗ ಬಂದಿರೋ ಯುಐ ಚಿತ್ರದ ಟ್ರೋಲ್ ಸಾಂಗಿನಲ್ಲಿ ಟ್ರೋಲ್ ಆದ ಪದಗಳೆಲ್ಲ ಇವೆ.
ಕರಿಮಣಿ ಮಾಲೀಕ ನೀನಲ್ಲ..
ಬೆಳ್ಳುಳ್ಳಿ ಕಬಾಬ್.. ಒನ್ ಮೋರ್ ಒನ್ ಮೋರ್..
ಹೆಂಗ್ ಪುಂಗ್ಲಿ..
ಆಲ್ ರೈಟ್ ಮುಂದಕ್ಕೋಗೋಣ..
ಜೋಡೆತ್ತು..
ಇದು ರಾಜ್ಯವೇ ಖುಷಿಪಡುವ ಸುದ್ದಿ..
ನಾ ಡ್ರೈವರಾ, ನನ್ನ ಲವರಾ..
ಹೇ ತಗಡು, ಗುಮ್ಮಿಸಿಕೊಳ್ತೀಯಾ..
ಕಂಜಾಜುಲೆಷನ್ಸ್ ಬ್ರದರ್..
ನಾನು ನಂದಿನಿ ಪಿಜಿಯಲ್ಲಿ ಇರ್ತಿನಿ..
ಡೋಲೋ 650 ಬಿಸಿ ರಾಗಿಹಿಟ್ಟು..
ಬಡವರ ಮಕ್ಳು..
ಹೀರೋ ಎಲ್ಲಿದ್ದೀಯಪ್ಪ.. ಜನಗಳ ಮಧ್ಯೆ ಇದ್ದೀನಪ್ಪ..
ಗೂಸ್ ಬಂಪ್ಸ್..
ಇದು ಖಚಿತ.. ಉಚಿತ.. ನಿಶ್ಚಿತ..
ಫ್ರೀ.. ಫ್ರೀ.. ಫ್ರೀ..
ಇದು ಹಂಸಲೇಖ ಟ್ಯೂನು ಕಣೆ.. ನಿನ್ಮೇಲೆ ಕೇಸ್ ಹಾಕ್ತಾರೆ ಕಣೆ..
ಟ್ರೋಲಾಗುತ್ತೆ.. ಇದು ಟ್ರೋಲಾಗುತ್ತೆ.. ಅನ್ನೋ ಹಾಡು ಬಿಟ್ಟಿರೋ, ಟ್ರೋಲ್ ಆದದ್ದನ್ನೆಲ್ಲ ಹಾಡಿನಲ್ಲಿ ತಂದಿದ್ದಾರೆ. ಯುಐ ಚಿತ್ರ ಟ್ರೋಲ್ ಸಾಂಗ್ ಭರ್ಜರಿ ಹಿಟ್ ಆಗ್ತಾ ಇದೆ.
ಈಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್, ಟ್ರೆಂಡ್ ಆದ ಡೈಲಾಗ್‌ಗಳೆಲ್ಲಾ ಈ ಸಾಂಗ್‌ನಲ್ಲಿವೆ. ಈಚಿನದ್ದು ಮಾತ್ರವಲ್ಲ, ಮೂರ್ನಾಲ್ಕು ವರ್ಷಗಳ ಹಿಂದಿನದ್ದು ಈ ಸಾಂಗ್‌ನಲ್ಲಿದೆ. ನರೇಶ್ ಕುಮಾರ್ ಎಚ್. ಎನ್. ಈ ಎಲ್ಲ ಟ್ರೋಲ್ ಪದಗಳನ್ನೂ ಒಟ್ಟುಗೂಡಿಸಿ ಸಾಹಿತ್ಯ ರಚಿಸಿದ್ಧಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಐಶ್ವರ್ಯಾ ರಂಗರಾಜನ್, ಹರ್ಷಿತಾ ದೇವಂತ್, ಅನೂಪ್ ಭಂಡಾರಿ, ಅಜನೀಶ್ ಲೋಕನಾಥ್ ಒಟ್ಟಾಗಿ ಸೇರಿ ಹಾಡಿದ್ದಾರೆ.
ಹಾಡಿನಲ್ಲಿ ಹೀರೋಯಿನ್ ರೀಷ್ಮಾ ನಾಣಯ್ಯ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಉಪೇಂದ್ರ ತಾವು ನಿರ್ದೇಶನ ಮಾಡುವ ಸಿನಿಮಾಗಳಂತೆ ಅವರ ಪ್ರಚಾರದ ತಂತ್ರವೂ ವಿಭಿನ್ನ ಮತ್ತು ವಿಚಿತ್ರವಾಗಿರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಒಟ್ಟಿಗೆ ಈ ಹಾಡಿನ ಮೂಲಕ ಉಪ್ಪಿ ಪ್ರೇಕ್ಷಕರ ತಲೆಗೆ ಮತ್ತೆ ಹುಳ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಯುಐ ಮೂಲಕ ಉಪೇಂದ್ರ ಮತ್ತೊಮ್ಮೆ ಸೌಂಡು ಮಾಡ್ತಿದ್ಧಾರೆ.
ಅಂದಹಾಗೆ ಈ ಟ್ರೋಲ್ ಸಾಂಗಿನಲ್ಲಿ ಟ್ರೆಂಡಿಂಗಿನಲ್ಲಿದ್ದೂ ಬಳಸದೇ ಇರುವ ಪದಗಳೂ ಇವೆ. ಜಸ್ಟ್ ಅವುಗಳ ಲಿಸ್ಟ್ ನೋಡೋದಾದ್ರೆ..
ಇದು..ಇದು..ಆಕ್ಚುಲಿ ಚೆನ್ನಾಗಿರೋದು
ಬರೀ ಇಂಥವೆಯಾ
ಯಾವೋ ಇವೆಲ್ಲಾ
ಏಯ್ ಸೂರ್ಯ ನಿಂಗೆ ಒಳ್ಳೆದಾಯ್ತದ
ಎಲ್ಲೋ ಗೋಜಪ್ಪ ನಿನ್ನ ಅರಮನೆ
ನನ್ ಮೇಲೆ ಆಣೆ ಇಟ್ಟು ಹೇಳು
ಇಷ್ಟು ಹೇಳೋಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್
ಮಹಾಪ್ರಭುಗಳೇ ನೀವೇನು ಇಲ್ಲಿ
ಈ ತರ ಹಿಂಸೆ ಕೊಟ್ಟರೆ ಯಾರು ಬದುಕುತ್ತಾರೆ
ಹೇ ಪ್ರಭು..
ರುಕೋ ಜರಾ.. ಸಂಬಾಲ್ ಕರೋ..
ಮುಂತಾದ ಪದಗಳು ಇನ್ನೂ ಇವೆ. ಈ ಲಿಸ್ಟಿಗೆ ಹೊಸ ಅಥವಾ ಸೇರದೇ ಇರುವ ಟ್ರೋಲ್ ಪದಗಳನ್ನು ನೀವು ಸೇರಿಸಬಹುದು.



