| ಮೊಬೈಲ್ ಅಥವಾ ಅಕೌಂಟ್ʻಗಳಿಗೆ ಯಾವ ರೀತಿಯ ಪಾಸ್ʻವರ್ಡ್ ಇರಬೇಕು.. ಬ್ಯಾಂಕಿನವರು, ಮೊಬೈಲ್ ಅಂಗಡಿಯವರು ವಾರ್ನಿಂಗ್ ಕೊಡುತ್ತಲೇ ಇರುತ್ತಾರೆ. ಬ್ಯಾಂಕಿನವರಂತೂ ಸುಲಭದ ಪಾಸ್ʻವರ್ಡ್ ಇಟ್ಟುಕೊಳ್ಳಬೇಡಿ. ಆಗಾಗ್ಗೆ ಪಾಸ್ʻವರ್ಡ್ ಬದಲಾಯಿಸುತ್ತಿರಿ ಎಂದು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಏಕೆಂದರೆ ಸೈಬರ್ ಕ್ರೈಮ್‌ಗಳು ಎಂಬುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ಈ ಡಿಜಿಟಲ್ ಜಮಾನದಲ್ಲಿ ಸೈಬರ್ ದಾಳಿಕೋರರು ಅಮಾಯಕನ್ನು ಬಲೆಗೆ ಕೆಡವಲು ನಾನಾ ರೀತಿಯಲ್ಲಿ ಹವಣಿಸುತ್ತಿರುತ್ತಾರೆ. ಜೊತೆಗೆ ಹ್ಯಾಕರ್‌ಗಳು ಸುಲಭವಾಗಿ ಜನರ ಮಾಹಿತಿಗೆ ಕನ್ನ ಹಾಕಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಮೋಸದ ಜಾಲದಲ್ಲಿ ಸಿಲುಕಿ ನಲುಗಿದವರು ಅದೆಷ್ಟೋ ಮಂದಿ. ಈ ಸೈಬರ್ ಕ್ರಿಮಿನಲ್‌ಗಳ ಕಾಟಕ್ಕೆ ಸಾಕಷ್ಟು ಮಂದಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂಬುದು ಕೂಡಾ ಸತ್ಯ. ಸಾಕಷ್ಟು ಮಂದಿ ಪಾಸ್‌ವರ್ಡ್‌ಗಳ ಸದೃಢತೆಯ ಬಗ್ಗೆ ಗಮನ ಹರಿಸುವುದಿಲ್ಲ. ನೆನಪಿಟ್ಟುಕೊಳ್ಳಲು ಸುಲಭವಾಗುವ ರೀತಿಯಲ್ಲಿ ಅಥವಾ ಸರಳವಾಗಿರುವ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ. ಆದರೆ, ಇಂತಹ ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳಿಗೆ ಭೇದಿಸಲು ಒಂದು ನಿಮಿಷ ಕೂಡಾ ಬೇಕಾಗುವುದಿಲ್ಲ ಎಂಬುದೂ ಸತ್ಯ. 123456 |
| Admin |
| 12345678 |
| 12345 |
| Password |
| Pass@123 |
| 123456789 |
| Admin@123 |
| India@123 |
| admin@123 |
| Pass@1234 |
| 1234567890 |
| Abcd@1234 |
| Welcome@123 |
| Abcd@123 |
| admin123 |
| administrator |
| Password@123 |
| Password |
| UNKNOWN |
ಇಂತಹ ಸುಲಭದ ಪಾಸ್ʻವರ್ಡ್ ಬಳಸಿಕೊಳ್ಳೋ ಮೂಲಕ ಹ್ಯಾಕರ್ʻಗಳು ಸುಲಭವ್ಗಿ ಹ್ಯಾಕ್ ಮಾಡಬಹುದು. ಇವುಗಳಲ್ಲಿ ಬಹುತೇಕ ಪಾಸ್‌ವರ್ಡ್‌ಗಳನ್ನು ಪಡೆಯಲು 1 ಸೆಕೆಂಡು ಕೂಡಾ ಬೇಕಾಗಿಲ್ಲ. ಬಾಕಿ ಉಳಿದಂತೆ Pass@123ಗೆ 5 ನಿಮಿಷ, Admin@123ಗೆ 1 ವರ್ಷ, India@123ಗೆ 3 ಗಂಟೆ, admin@123ಗೆ 34 ನಿಮಿಷ, Pass@1234, Abcd@1234, Abcd@123 ಹಾಗೂ UNKNOWNಗೆ 17 ನಿಮಿಷ, Welcome@123ಗೆ 10 ನಿಮಿಷ, admin123ಗೆ 11 ಸೆಕೆಂಡು, Password@123ಗೆ 2 ಸೆಕೆಂಡು ಬೇಕಾಗಬಹುದು ಎಂದು ಈ ವರದಿಯಲ್ಲಿ ತಿಳಿಸಲಾಗಿದೆ.
ಒಂದೊಮ್ಮೆ ನೀವು ಯಾರಾದರೂ ಈ ಪಾಸ್‌ವರ್ಡ್ ಇಟ್ಟುಕೊಂಡಿದ್ದರೆ ಅಥವಾ ಇದೇ ರೀತಿಯ ದುರ್ಬಲ ಪಾಸ್‌ವರ್ಡ್ ಅನ್ನು ಹೊಂದಿದ್ದರೆ ತಕ್ಷಣ ಅದನ್ನು ಬದಲಾಗಿಸಿ ಸದೃಢ ಪಾಸ್‌ವರ್ಡ್ ಬಳಕೆ ಮಾಡುವುದು ಬಹಳ ಉತ್ತಮ.



