ವಿಶ್ವನಾಥ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಸದ್ಯಕ್ಕೆ ವಿಧಾನ ಪರಿಷತ್ ಸದಸ್ಯರಾಗಿರುವ ವಿಶ್ವನಾಥ್, ಸಿದ್ದರಾಮಯ್ಯ ಪರ ಪ್ರಚಾರ ಮಾಡುತ್ತಾರಂತೆ. ಈ ಮಾತು ಹೇಳಿರೋದು ಖುದ್ದು ಎಚ್. ವಿಶ್ವನಾಥ್. ನಾನು ವಿಧಾನಪರಿಷತ್ ಸದಸ್ಯನಾಗಿರುವುದು ಸಾಹಿತ್ಯ ಕ್ಷೇತ್ರದಿಂದ. ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ನಂತರ ನನ್ನನ್ನು ಮೇಲ್ಮನೆಗೆ ನಾಮಕರಣ ಮಾಡಿದ್ದು ರಾಜ್ಯಪಾಲರು. ಅನೇಕ ಜನರಿಗೆ ಇದು ತಿಳಿದಿಲ್ಲ. ನಾನೀಗ ಯಾವ ಪಕ್ಷದಲ್ಲೂ ಇಲ್ಲ. ನಾನೀಗ ಸ್ವತಂತ್ರ ವ್ಯಕ್ತಿ ಎಂದಿದ್ದಾರೆ ವಿಶ್ವನಾಥ್.

ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವಿನ ಸ್ನೇಹ-ಸಂಬಂಧ ಎಲ್ಲರಿಗೂ ಗೊತ್ತಿರುವಂತಹುದೇ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ತರುವ ನಿಟ್ಟಿನಲ್ಲಿ ವಿಶ್ವನಾಥ್ ಪಾತ್ರವಿತ್ತು. ಸಿದ್ದರಾಮಯ್ಯ ಅವರನ್ನು ಕುರುಬ ಸಮುದಾಯದ ಲೀಡರ್ ಆಗಿ ಬೆಳೆಸುವಲ್ಲೂ ಸಿದ್ದರಾಮಯ್ಯ ಪಾತ್ರವಿತ್ತು. ಅದಾದ ಮೇಲೆ ಸಿದ್ದರಾಮಯ್ಯ ಸಿಎಂ ಆದ ಮೇಲೆ ವಿಶ್ವನಾಥ್ ಮುರಕೊಂಡು ಬಿದ್ದಿದ್ದರು. ಸಿದ್ದರಾಮಯ್ಯ ಅವರನ್ನು ಯಾವ್ಯಾವ ರೀತಿ ಟೀಕಿಸುವುದಕ್ಕೆ ಸಾಧ್ಯವಿದೆಯೋ.. ಆ ಎಲ್ಲ ರೀತಿಯಲ್ಲೂ ಟೀಕಿಸಿದ್ದರು. ಮಾತು ಮತ್ತು ಟೀಕೆ ಏಕವಚನಕ್ಕೂ ಇಳಿದಿತ್ತು. ಟೀಕಿಸುತ್ತಲೇ ಕಾಂಗ್ರೆಸ್ ಬಿಟ್ಟು ಸಿದ್ದರಾಮಯ್ಯ ಅವರ ಪರಮಶತ್ರು 





ತಾಂತ್ರಿಕವಾಗಿ ವಿಶ್ವನಾಥ್ ಲೆಕ್ಕ ಸರಿಯಾಗಿಯೇ ಇದೆ. ಆದರೆ.. ಸೈದ್ಧಾಂತಿಕವಾಗಿ..??? ಅಧಿಕಾರ ಹಿಡಿಯುವುದೇ ಮೊದಲ ಸಿದ್ಧಾಂತ. ಅದನ್ನು ವಿಶ್ವನಾಥ್ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ ಮಾಡಿದ್ದಾರೆ. ಈಗ ಸರ್ಕಲ್ ಒಂದು ಸುತ್ತು ಮುಗಿಸಿದೆ. ಅಷ್ಟೆ.



