ರಾಜ್ಯ ರಾಜಕಾರಣದಲ್ಲಿ ದೊಡ್ಡ ಪಲ್ಲಟವೇ ನಡೆಯುತ್ತಿದೆ. ಈಗ ಜೆಡಿಎಸ್ʻನ ಇನ್ನೊಂದು ದೊಡ್ಡ ವಲಸೆ ನಡೆಯುವ ಸೂಚನೆ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ವಿಡಿಯೋ ಕೇಸಿನಲ್ಲಿ ಮುಜುಗರ ಅನುಭವಿಸುತ್ತಿರುವ ಜೆಡಿಎಸ್ ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಸೂಚನೆ ನೀಡಿದ್ಧಾರೆ. ನೀಡುತ್ತಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ತಪ್ಪಿಸಿಕೊಳ್ಳಲು ಹಾಗೂ ಮತ್ತೊಮ್ಮೆ ಚುನಾವಣೆ ಎದುರಿಸುವುದರಿಂದ ಬಚಾವ್ ಆಗಲು 13 ಶಾಸಕರು ಕಾಂಗ್ರೆಸ್ ಸೇರಬೇಕು. (ಜೆಡಿಎಸ್ʻನಲ್ಲಿ 19 ಶಾಸಕರಿದ್ದು, 3ನೇ 1 ಭಾಗ ಅಂದರೆ 12+1 ಶಾಸಕರು ಬಂದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ) ಅದಕ್ಕೆ ಎಲ್ಲವೂ ಸಿದ್ಧವಾಗಿದ್ದು, 12 ಶಾಸಕರು ಕಾಂಗ್ರೆಸ್ ಸೇರಲಿದ್ಧಾರೆ ಅನ್ನೋ ಸುದ್ದಿಯೊಂದು ಇದೆ.
ಪ್ರಜ್ವಲ್ ರೇವಣ್ಣ ಅವರ ವಿಚಾರದಿಂದ ಜೆಡಿಎಸ್‌ನ 12 ಮಂದಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂಬ ವಿಚಾರವೆಲ್ಲಾ ಸುಳ್ಳು. ಊಹಾಪೋಹಗಳನ್ನು ಹರಡಲಾಗುತ್ತಿದೆ. ಜೆಡಿಎಸ್‌ನವರು ಬಿಜೆಪಿ ಜತೆ ಮೈತ್ರಿಯಾದರೂ ಮಾಡಿಕೊಳ್ಳಲಿ, ಪಕ್ಷವನ್ನು ವಿಲೀನವಾದರೂ ಮಾಡಿಕೊಳ್ಳಲಿ ಅದಕ್ಕೂ ನಮಗೂ ಸಂಬಂಧ ಇಲ್ಲ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಡಿಎಸ್ ಪಕ್ಷದ 12 ಶಾಸಕರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂಬ ಚರ್ಚೆ ಬಗ್ಗೆಅದೆಲ್ಲವೂ ಸುಳ್ಳು, ನನ್ನ ಜತೆ ಯಾರೊಬ್ಬರೂ ಸಂಪರ್ಕದಲ್ಲಿಲ್ಲ. ನಾನು ಯಾರ ಜತೆಯೂ ಮಾತುಕತೆ ನಡೆಸಿಲ್ಲ. ಸುಮ್ಮನೆ ಊಹಾಪೋಹದ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಎಂತಹವರಾದರೂ ಈ ವಿಚಾರದಲ್ಲಿ ಹತಾಶರಾಗಿರುತ್ತಾರೆ. ಅವರ ಪಕ್ಷದಲ್ಲಿ ಹಾಗೂ ಕುಟುಂಬದಲ್ಲಿನ ಆಂತರಿಕ ಸಮಸ್ಯೆಗಳು ಎಲ್ಲರಿಗೂ ಗೊತ್ತಿದೆ. ಈಗ ನಾನು ಆ ಬಗ್ಗೆ ಚರ್ಚೆ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದಿಂದ ಈ ರೀತಿ ವಲಸೆ ಹೋಗುವುದು ಹೊಸದೇನಲ್ಲ. ಜೆಡಿಎಸ್ ಪಕ್ಷದಿಂದ ನಡೆದ ದೊಡ್ಡ ಹಾಗೂ ಪ್ರಮುಖ ಪಕ್ಷಾಂತರ ಸಿದ್ದರಾಮಯ್ಯ ಅವರದ್ದೇ. ಅದಾದ ಮೇಲೆ ಜೆಡಿಎಸ್ʻನ ಹಲವು ಶಾಸಕರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಶಿಫ್ಟ್ ಆಗಿದ್ದಾರೆ. ಈಗ ಕಾಂಗ್ರೆಸ್ಸಿನಲ್ಲಿರುವ ಸಿದ್ದರಾಮಯ್ಯ, ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ, ಹೆಚ್.ಸಿ.ಮಹದೇವಪ್ಪ, ಚೆಲುವರಾಯ ಸ್ವಾಮಿ, ಅರಸೀಕೆರೆ ಶಿವಲಿಂಗೇಗೌಡ, ಮಾಗಡಿ ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ, ಗುಬ್ಬಿ ಶ್ರೀನಿವಾಸ್ (ವಾಸು).. ಮೊದಲಾದವರ ಮೂಲ ಪಕ್ಷ ಜೆಡಿಎಸ್. ದಿ. ಎಂ.ಪಿ.ಪ್ರಕಾಶ್ (ಡಿಸಿಎಂ ಆಗಿದ್ದವರು) ಕೂಡಾ ಜೆಡಿಎಸ್ಸಿನವರೇ. ಇನ್ನು ಬಿಜೆಪಿಯಲ್ಲಿಯೂ ಹಲವು ನಾಯಕರು ಜೆಡಿಎಸ್ʻನಿಂದ ವಲಸೆ ಬಂದವರು.
ಜೆ.ಹೆಚ್.ಪಟೇಲ್ ಅವರು ಸಿಎಂ ಆಗಿದ್ಧಾಗ ಜನತಾ ದಳ ಇಬ್ಭಾಗವಾಗಿ ಜೆಡಿಯು ಹಾಗೂ ಜೆಡಿಎಸ್ ಎಂಬ ಎರಡು ಪಕ್ಷಗಳು ಸೃಷ್ಟಿಯಾದವು. ಅದಾದ ಮೇಲೆ ಎಸ್.ಎಂ. ಕೃಷ್ಣ ಅವಧಿಯಲ್ಲಿ ದೊಡ್ಡ ವಲಸೆಯಾಯ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಜೆಡಿಎಸ್ʻನಿಂದ ಕಾಂಗ್ರೆಸ್ಸಿಗೆ ನಾಯಕರು ಬಂದರು. ಒಂದು ಮಾತಿನಲ್ಲಿ ಹೇಳಬೇಕೆಂದರೆ.. ಈಗ ಕಾಂಗ್ರೆಸ್ಸಿನಲ್ಲಿ 20ಕ್ಕೂ ಹೆಚ್ಚು ಶಾಸಕರು ಮೂಲತಃ ಜೆಡಿಎಸ್ʻನವರು. ಬಿಜೆಪಿಯಲ್ಲಿ ಕೂಡಾ 10+ ನಾಯಕರು ಜೆಡಿಎಸ್ ಮೂಲದವರೇ.



