ಹೆಂಡತಿ ಒಬ್ಬಳು ಮನೆಯೊಳಗಿದ್ದರೆ
ನನಗದು ಕೋಟಿ ರೂಪಾಯಿ
ಹೆಂಡತಿ ಒಬ್ಬಳು ಹತ್ತಿರವಿದ್ದರೆ
ನಾನೂ ಒಬ್ಬ ಸಿಪಾಯಿ
ಇದು ಕವಿತೆ. ಹೆಂಡತಿ ಹತ್ತಿರವಿದ್ದರೆ ಸಿಪಾಯಿಯೋ.. ದೂರವಿದ್ದರೆ ಸಿಪಾಯಿಯೋ.. ಹೆಂಡತಿಯರೇ ಹೇಳಬೇಕು. ಮದುವೆಯಾದ ಮೇಲೆ ಹುಡುಗ ಗಂಡನಾದರೆ ಹುಡುಗಿ ಹೆಂಡತಿ ಆಗ್ತಾಳೆ. ಶಿವನೇ ಅರ್ಧನಾರೀಶ್ವರ ಎಂದಮೇಲೆ ಪ್ರತಿ ಪತ್ನಿಯೂ ಗಂಡನ ಅರ್ಧಾಂಗಿಯೇ.
ಜೀವನ ಸಂಗಾತಿ, ಬೆಟರ್ ಹಾಫ್, ವೈಫ್, ಪತ್ನಿ, ಹೆಂಡತಿ ಹೀಗೆ ಹಲವು ಹೆಸರುಗಳಿಂದ ಕರೆದರೂ ಇಂಗ್ಲಿಷಿನಲ್ಲಿ ಮಾತ್ರ WIFE. ಇಷ್ಟಕ್ಕೂ ಹೆಂಡತಿಯನ್ನು WIFE ಎಂದು ಏಕೆ ಕರೆಯುತ್ತಾರೆ. ಅದೇ ವಿಸ್ಮಯ.
ಗಂಡ ಎಂದ ಮೇಲೆ ಹಸ್ಬೆಂಡ್ ಆದ ಮೇಲೆ WIFE ಎಂಬ ಇಂಗ್ಲಿಷ್ ಪದದ ಅರ್ಥವನ್ನೂ ತಿಳಿದುಕೊಳ್ಳೋದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಅವನು ಹೆಂಡತಿಗೆ ತಕ್ಕ ಗಂಡ ಅಲ್ಲ.
ನಮ್ಮ ದಾಂಪತ್ಯ
ಮಾತು ಬೆಳ್ಳಿ
ಮೌನ ಬಂಗಾರ
ಅಂದವ ಜಾಣ
ಚಿನ್ನದ ಮಾತು
ಎತ್ತಿದ ತಕ್ಷಣ
ಪತಿದೇವ ಮೌನ
ಅಂತಾ ಬರೀತಾರೆ ಡುಂಡಿರಾಜ್. ಕೇವಲ ಚಿನ್ನ ಕೊಡಿಸಿದರಷ್ಟೇ ಹೆಂಡತಿಗೆ ತಕ್ಕ ಗಂಡ ಅನ್ನಿಸ್ಕೊಳ್ಳೋಕಾಗಲ್ಲ.
ದಾಂಪತ್ಯ ಜೀವನದಲ್ಲಿ
ಅಂತಿಮ ಜಯ ಯಾರಿಗೆ?
ಗಂಡನಿಗಲ್ಲ
ಹೆಂಡತಿಗೂ ಅಲ್ಲಾ ಅವಳ ಕಣ್ಣಿರಿಗೆ!
ವಿವಾಹಿತ ಮಹಿಳೆಯನ್ನು WIFE ಎಂದು ಕರೆಯಲಾಗುತ್ತದೆ. ವ್ಯಾಖ್ಯಾನದ ಪ್ರಕಾರ, ತನ್ನ ಪತಿಯಿಂದ ಬೇರ್ಪಟ್ಟ, ಆದರೆ ಕಾನೂನುಬದ್ಧ ಸಂಬಂಧವು ಕೊನೆಗೊಳ್ಳದ ಮಹಿಳೆಯನ್ನು ಸಹ ಹೆಂಡತಿ ಎಂದು ಕರೆಯಲಾಗುತ್ತದೆ.

ಆದಾಗ್ಯೂ, ಮಾಜಿ-ಹೆಂಡತಿ Ex-WIFE, WIFE ಆದರೂ ಹೆಂಡತಿ ಅನ್ನೋದು ದೂರವಾಗಲ್ಲ.
ಹೆಂಡತಿ ಎಲ್ಲ ಕಡೆ ಇದ್ದರೂ WIFE ಪದ ಬಂದಿದ್ದು ಜರ್ಮನ್ ಮೂಲದಿಂದ. ದು ಪ್ರೊಟೋ ಜರ್ಮನ್ ಭಾಷೆಯಲ್ಲಿನ ವಿಬಾಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ ಆಧುನಿಕ ಜರ್ಮನ್ ಗಿಂತ ಮೊದಲು ಇದ್ದ ಇಂಡೋ-ಯುರೋಪಿಯನ್ ಭಾಷೆಗಳಲ್ಲಿ ಒಂದು. ಇದು ಮಹಿಳೆ ಎಂಬ ಅರ್ಥವನ್ನು ನೀಡುತ್ತದೆ. ಇದನ್ನು ಆಧುನಿಕ ಜರ್ಮನ್ ಪದ ವೀಬ್ ಗೆ ಸಹ ಬಳಸಬಹುದು, ಇದರರ್ಥ ಮಹಿಳೆ.
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ಮೂಗಿನ್ ತುದೀಲಿ ಸ್ವಲ್ಪ ಸಿಟ್ಟು ಜಾಸ್ತಿ
ಚಂದ ಚಂದ ಚಂದ ಚಂದ ನನ್ ಹೆಂಡ್ತಿ
ನನ್ನಂಥ ಗಂಡನಿಗೆ ಅವ್ಳೇ ಆಸ್ತಿ
ಅಂತಾ ಹೇಳ್ಕೊಂಡು ಖುಷಿಯಾಗಿದ್ರೆ ಆಯ್ತು. ಹೆಂಡತಿ ಹೇಗೆ ಇರಲಿ.. ಚೆಂದಕ್ಕಿದ್ದಾಳೆ. ಅವಳೇ ನನ್ನ ಆಸ್ತಿ ಎಂದುಕೊಳ್ಳುವುದು ಹಾಗೂ ಹೇಳಿಕೊಳ್ಳೋದೇ ಪತಿಧರ್ಮ. ಮದುವೆಯಾಗದೇ ಇರುವ ಹುಡುಗರು ಹಾಡ್ತಾನೇ ಇರ್ತಾರೆ.. ಹೆಂಡ್ತಿ ಬೇಕು ಹೆಂಡ್ತಿ. ಮದುವೆ ಆಗಿ ಹೆಂಡ್ತಿ ಇದ್ದು ಸಂಸಾರ ಸಾಕಾದವ್ರು
ನಾವ್ ಮನೆಗ್ ಹೋಗೋದಿಲ್ಲ
ನಾವು ಮನೆಗ್ ಹೋಗೋದಿಲ್ಲ
ನಮಗೆ ಬಾಗ್ಲು
ತೆಗಿಯೋರಿಲ್ಲ
ಇಲ್ಲ… ಇಲ್ಲ… ಇಲ್ಲ… ಇಲ್ಲ
ನಾವು ಮನೆಗ್ ಹೋಗೋದಿಲ್ಲ…
ಇಲ್ಲ.. ಅಂತಾ ಹಾಡ್ತಾರೆ..ಚಾಯ್ಸ್ ನಿಮ್ದು.



