ಹೊಸ GST ರೂಲ್ಸ್ ಜಾರಿಗೆ ಬರ್ತಾ ಇದೆ. ಸೆಪ್ಟೆಂಬರ್ 22ರಿಂದ ಹೊಸ GST ಜಾರಿಗೆ ಬರುತ್ತಲ್ಲ.. ಆಗ ಖುಷಿಯಾಗೋದು ಕಾರ್ ಖರೀದಿದಾರರು. ಈಗಾಗಲೇ ಬುಕ್ಕಿಂಗ್ ಆದ ಕಾರುಗಳನ್ನ ಸ್ವಲ್ಪ ವೇಯ್ಟ್ ಮಾಡಿಸ್ತಾ ಇದ್ದಾರೆ ಗ್ರಾಹಕರು. ಅವರು ಎದುರು ನೋಡ್ತಾ ಇರೋದು ಸೆಪ್ಟೆಂಬರ್ 22ನೇ ತಾರೀಕಿಗೆ. ಡೈರೆಕ್ಟ್ ಆಗಿ ಟ್ಯಾಕ್ಸ್ ಕಮ್ಮಿ ಆಗಿರೋದ್ರಿಂದ ಯಾವ ಕಾರು ಖರೀದಿ ಮಾಡಿದರೆ.. ಎಷ್ಟು ಲಾಭ ಅಥವಾ ಉಳಿತಾಯ ಅನ್ನೋದನ್ನ ನೋಡೋಣ.
ಮಿನಿ ಕಾರುಗಳು :
ಮಾರುತಿ ಆಲ್ಟೋ ಖರೀದಿ ಮಾಡಿದ್ರೆ.. ಈಗ ಇರುವ ದರ 4 ಲಕ್ಷದ 20 ಸಾವಿರ. ಈ ಕಾರನ್ನ ಹೊಸ GSTಯಲ್ಲಿ ಖರೀದಿ ಮಾಡಿದ್ರೆ 35 ಸಾವಿರದ 700 ರೂಪಾಯಿ ಉಳಿತಾಯ ಆಗುತ್ತೆ.
ಮಾರುತಿ ವ್ಯಾಗನ್ ಆರ್ ರೇಟು ಸದ್ಯಕ್ಕೆ ಈಗ 5 ಲಕ್ಷ, 80 ಸಾವಿರ. ಹೊಸ GSTಯಲ್ಲಿ 90 ಸಾವಿರ ಸೇವ್ ಮಾಡಬಹುದು.
ಮಾರುತಿ ಸ್ವಿಫ್ಟ್ ಖರೀದಿ ಮಾಡುವವರಿಗೆ ಆರೂವರೆ ಲಕ್ಷ ಇದ್ರೆ, ಹೊಸ GSTಲ್ಲಿ ಒಂದು ಲಕ್ಷ ಸೇವ್ ಆಗುತ್ತೆ.
ಹ್ಯುಂಡೈ ಐ10 ನಿಯೋಸ್ ಕಾರಿನ ಬೆಲೆ 6 ಲಕ್ಷ ಇದೆ. ಹೊಸ GSTಯಲ್ಲಿ 51 ಸಾವಿರ ಉಳಿತಾಯ ಆಗುತ್ತೆ.
ಸೆಡಾನ್ಸ್
ಮಾರುತಿ ಡ್ರೈಜ್ ವ್ಯಾಲ್ಯೂ 6.8 ಲಕ್ಷ ಇದೆ. ಹೊಸ GSTಯಲ್ಲಿ 1 ಲಕ್ಷ ಕಡಿಮೆ ಆಗುತ್ತೆ.
ಇನ್ನು ವಿಡಬ್ಲ್ಯೂ (VW-Virtus) ವಿರ್ಟಸ್ ಕಾರು 11.5 ಲಕ್ಷ ಇದ್ದು, ಹೊಸ GSTಯಲ್ಲಿ 1 ಲಕ್ಷದ 10 ಸಾವಿರ ಉಳಿತಾಯ ಮಾಡಬಹುದು.
ಪ್ರೀಮಿಯರ್ SUV
ಮಾರುತಿ ಬ್ರಿಜಾ ಕಾರ್ 8.7 ಲಕ್ಷ ಇದೆ. ಹೊಸ GST ಬಂದ್ಮೇಲೆ 90 ಸಾವಿರ ಉಳಿತಾಯ ಆಗುತ್ತೆ.
ಹ್ಯುಂಡೈ ಕ್ರೆಟಾ ಕೂಡಾ 11.1 ಲಕ್ಷ ಇದೆ. ಸೆಪ್ಟೆಂಬರ್ 22ರ ನಂತರ 1.1 ಲಕ್ಷ ಸೇವ್ ಮಾಡಬಹುದು.
ಎಂ & ಎಂ (M&M XUV700) ವ್ಯಾಲ್ಯು 14.5 ಲಕ್ಷ ಇದೆ. ಹೊಸ GSTಯಲ್ಲಿ 1.9 ಲಕ್ಷ ಸೇವ್ ಆಗುತ್ತೆ.
Entry SUV
ಇನ್ನು Entry SUV ಟಾಟಾ ಪಂಚ್ ವಿಷ್ಯಕ್ಕೆ ಬಂದ್ರೆ, 6.2 ಲಕ್ಷ ಇದೆ. ಹೊಸ GSTಯಲ್ಲಿ ಈ ಕಾರಿನಲ್ಲೂ 90 ಸಾವಿರ ಸೇವ್ ಮಾಡಬಹುದು.
MPV ಕಾರ್
ಇದ್ರಲ್ಲಿ ಮಾರುತಿ ಎರ್ಟಿಗಾ ಬರುತ್ತೆ. ಈಗಿನ ರೇಟು 9.1 ಲಕ್ಷ. ಹೊಸ GSTಯಲ್ಲಿ 90 ಸಾವಿರ ಉಳಿತಾಯ ಆಗೋ ಚಾನ್ಸ್ ಇದೆ.
ಟೊಯೋಟಾ ಇನ್ನೋವಾದಲ್ಲಿ 20 ಲಕ್ಷ ಇದೆ. ಇದರಲ್ಲಿ 2.5 ಲಕ್ಷ ಸೇವ್ ಆಗುವ ಉಳಿತಾಯ ಆಗುವ ನಿರೀಕ್ಷೆ ಇದೆ.
ಲಕ್ಷುರಿ ಕಾರ್ಸ್
ಬಿಎಂಡಬ್ಲ್ಯು 5ಸಿರೀಸ್ ಮತ್ತು ಎಕ್ಸ್-07 ಸಿರೀಸ್‌ನಲ್ಲಿ 4 ಲಕ್ಷದಿಂದ 5 ಲಕ್ಷದವರೆಗೆ ಉಳಿತಾಯ ಮಾಡಬಹುದಂತೆ. ಈಗ ಈ ಕಾರುಗಳ ರೇಟ್ 5ಸಿರೀಸ್ ಬಿಎಂಡಬ್ಲ್ಯು 75 ಲಕ್ಷ ಇದ್ರೆ, ಎಕ್ಸ್-07 ಸಿರೀಸ್ ಒಂದೂವರೆ ಕೋಟಿ ಇದೆ.
ಇನ್ನು ಸ್ಕೂಟರ್ ಅಥವಾ ಬೈಕ್ ವಿಚಾರಕ್ಕೆ ಬಂದ್ರೆ..
ಹೋಂಡಾ ಆಕ್ಟಿವಾ ಬೈಕ್ ಸದ್ಯಕ್ಕೆ 81 ಸಾವಿರ ಇದೆ. ಹೊಸ GSTಯಲ್ಲಿ 7 ಸಾವಿರ ಕಡಿಮೆ ಆಗುತ್ತೆ.
ಟಿವಿಎಸ್ ಎನ್‌ಟಿಓಆರ್‌ಕ್ಯೂ ಬೈಕ್, 88 ಸಾವಿರ ಇದೆ. ಇದರಲ್ಲಿ ಏಳೂವರೆ ಸಾವಿರ ಉಳಿತಾಯ ಆಗುತ್ತೆ.
ಇನ್ನು ಹೋಂಡಾ ಶೈನ್ 125 ಸಿಸಿ ಲೆಕ್ಕ ನೋಡೋದಾದ್ರೆ, ಈಗಿನ ರೇಟ್ 91 ಸಾವಿರ ಇದೆ. ಸೆಪ್ಟೆಂಬರ್ 22ರ ನಂತರ ಏಳರಿಂದ ಎಂಟು ಸಾವಿರ ಕಡಿಮೆ ಆಗುತ್ತೆ.
ಇನ್ನು ಬಜಾಜ್ ಪಲ್ಸರ್ 150ಸಿಸಿ ನೋಡೋದಾದ್ರೆ, ಈಗ ಖರೀದಿ ಮಾಡಿದ್ರೆ ಒಂದು ಲಕ್ಷದ 10 ಸಾವಿರ ಕೊಡಬೇಕು. ಹೊಸ GSTಯಲ್ಲಿ ಸುಮಾರು 10 ಸಾವಿರ ಉಳಿತಾಯ ಆಗುತ್ತೆ.
ಇಲ್ಲಿ ಹೇಳಿರೋ ಅಷ್ಟೂ ಕಾರ್ ಮತ್ತು ಬೈಕ್ ವಿವರಗಳಲ್ಲಿ ಬೇಸಿಕ್ ಕಾರ್, ಬೈಕ್ ಡೀಟೈಲ್ಸ್ ಮಾತ್ರ ಕೊಡಲಾಗಿದೆ. ಶೋರೂಂ ಬೆಲೆ ಮಾತ್ರ ಇದೆ. ಖರೀದಿ ಮಾಡೋ ಟೈಮಲ್ಲಿ ಬೇರೆ ಬೇರೆ ಅಕ್ಸೆಸರೀಸ್ ಸೇರಿದಾಗ ಚೇಂಜ್ ಆಗೋ ಚಾನ್ಸ್ ಕೂಡಾ ಇದೆ.



