ಜುಲೈ 27 ಮಕ್ತಾಯವಾಗಿದೆ. ಈಗಾಗಲೇ ಅರ್ಜಿ ಹಾಕಿದ್ದವರು, ಓಕೆ ಆಗಿದ್ದವರಿಗೆ ಆಗಸ್ಟ್ ನಲ್ಲಿ ವಿದ್ಯುತ್ ಬಿಲ್ ಬರೋದಿಲ್ಲ. ಆದರೆ ಅರ್ಜಿಯನ್ನು ಸಲ್ಲಿಸದೇ ಇರುವವರು ಬಿಲ್ ಕಟ್ಟಲೇಬೇಕು. ಇನ್ನೊಂದು ಎಚ್ಚರಿಕೆಯೆಂದರೆ, ಗೃಹಜ್ಯೋತಿ (GruhaJyothi) ಹೆಸರಲ್ಲೂ ವಂಚಕರು ಹುಟ್ಟಿಕೊಂಡಿದ್ದಾರೆ. ಒಂದು ಮೆಸೇಜ್ (SMS) ಮೂಲಕ ದುಡ್ಡು ಹೊಡೆಯೋ ಸೈಬರ್ ಖದೀಮರೂ ಬಂದಿದ್ದಾರೆ. ಆ ಎಲ್ಲವನ್ನೂ ಇಲ್ಲಿ ತಿಳಿದುಕೊಳ್ಳಿ.
ಮೊದಲನೆಯಾದಗಿ.. ಜುಲೈ 27ಕ್ಕೆ ಮುಂಚೆ ಗೃಹಜ್ಯೋತಿಗೆ (GruhaJyothi) ಅರ್ಜಿ ಹಾಕಿದ್ದರೆ, ನಿಮಗೆ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ ಬರೋದಿಲ್ಲ. ಇಲ್ಲ ಅಂದ್ರೆ, ಈ ತಿಂಗಳ ಉಚಿತ ಸೌಲಭ್ಯದಿಂದ ವಂಚಿತರಾಗುತ್ತೀರ. ಜುಲೈ 28ರಿಂದ ಅರ್ಜಿ ಸಲ್ಲಿಸಿದರೆ ಆಗಸ್ಟ್ನಲ್ಲಿ ಪರಿಗಣನೆ ಮಾಡಲಾಗುತ್ತದೆ. ಇನ್ನು ಪ್ರತಿ ತಿಂಗಳು ಕೂಡ 27 ನೇ ತಾರೀಖನ್ನು ಆ ತಿಂಗಳ ಗಡುವು ದಿನವಾಗಿ ನಿಗದಿ ಪಡಿಸಲಾಗಿದೆ. ಆ ದಿನಾಂಕದ ನಂತರ ಅರ್ಜಿ ಹಾಕಿದರೆ ಆ ಅರ್ಜಿಯನ್ನು ಮುಂದಿನ ತಿಂಗಳಿಗೆ ಪರಿಗಣನೆ ಮಾಡಲಾಗುತ್ತದೆ.
ಗೃಹಜ್ಯೋತಿ (GruhaJyothi) ಅರ್ಜಿ ಸ್ವೀಕಾರ ಶುರುವಾಗಿ 40 ದಿನ ಕಂಪ್ಲೀಟ್ ಆಗಿದೆ. ಜೂನ್ 18ರಿಂದ ಶುರುವಾದ ಅರ್ಜಿ ಸ್ವೀಕಾರ ಪ್ರಕ್ರಿಯೆಯಲ್ಲಿ ಈವರೆಗೂ ರಾಜ್ಯದಲ್ಲಿ 1.15 ಕೋಟಿಗೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಇನ್ನು ಹಿಂದಿನ ಉಚಿತ ಯೋಜನೆಗಳಾದ ಕುಟೀರ ಜ್ಯೋತಿ, ಭಾಗ್ಯಲಕ್ಷ್ಮೀ ಸೇರಿದಂತೆ ವಿವಿಧ ಯೋಜನೆಗಳ ಫಲನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ, ಜುಲೈ 1 ರಿಂದಲೇ ಗೃಹ ಜ್ಯೋತಿ ಉಚಿತ ವಿದ್ಯುತ್ ಸೌಲಭ್ಯ ಆರಂಭವಾಗಿದೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕಿರುವವರು ಮಾಸಿಕ ಸರಾಸರಿಯಂತೆಯೇ ವಿದ್ಯುತ್ ಬಳಕೆ ಮಾಡಿದ್ದರೆ ಜುಲೈ ತಿಂಗಳ ಬಳಸಿದ್ದಕ್ಕೆ ಆಗಸ್ಟ್ನಲ್ಲಿ ನೀಡುವ ಬಿಲ್ನ ಮೊತ್ತ ಶೂನ್ಯವಾಗಿರಲಿದೆ.
ಗ್ರಾಹಕರು ಮಾಸಿಕ ಸರಾಸರಿಗಿಂತ ಹೆಚ್ಚುವರಿ ಹೆಚ್ಚು ವಿದ್ಯುತ್ ಬಳಕೆ ಮಾಡಿದ್ದರೆ ಆ ಹೆಚ್ಚುವರಿ ಬಳಕೆ ಶುಲ್ಕ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಮನೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾಸಿಕ ಸರಾಸರಿ 60 ಯುನಿಟ್ ವಿದ್ಯುತ್ ಬಳಸುತ್ತಿದ್ದರೆ, ಅದಕ್ಕೆ ಶೇ. 10 ಸೇರಿ 66 ಯುನಿಟ್ ಉಚಿತವಾಗಿ ಲಭ್ಯವಾಗಲಿದೆ. ಜುಲೈ ತಿಂಗಳಲ್ಲಿ ನಿಮ್ಮ ಮನೆಯಲ್ಲಿ 70 ಯುನಿಟ್ ಬಳಸಿದ್ದರೆ ಮೇಲಿನ ನಾಲ್ಕು ಯುನಿಟ್ಗೆ ಹಣ ಪಾವತಿಸಬೇಕಾಗುತ್ತದೆ.
ಎರಡನೆಯದಾಗಿ.. ಅರ್ಜಿ ಸ್ವೀಕೃತವಾಗಿದೆ ಎಂದು ತಿಳಿದುಕೊಳ್ಳುವುದು ಹೇಗೆ?
ಇನ್ನು ಅರ್ಜಿ ಸ್ವೀಕಾರವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋದು ಹೇಗೆ..? ಅದಕ್ಕೆ ಸುಲಭ ಮಾರ್ಗ ಇದೆ. ಗೃಹಜ್ಯೋತಿ ಅರ್ಜಿಯ ಸ್ಟೇಟಸ್ ತಿಳಿಸಿಕೊಡುವ ನಿಟ್ಟಿನಲ್ಲಿ ಇಂಧನ ಇಲಾಖೆಯು ಡೈರೆಕ್ಟ್ ಲಿಂಕ್ ಬಿಡುಗಡೆ ಮಾಡಿದೆ. ಅರ್ಜಿದಾರರು https://sevasindhu.karnataka.gov.in/StatucTrack/Track_Status
ಈ ಲಿಂಕ್ ಬಳಸಿ ತಮ್ಮ ಗೃಹ ಜ್ಯೋತಿ ಅರ್ಜಿ ಯಾವ ಹಂತದಲ್ಲಿ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಅರ್ಜಿ ಸಲ್ಲಿಕೆ ಸೂಕ್ತವಾಗಿರದಿದ್ದರೆ ಅಥವಾ ಅರ್ಜಿಯನ್ನೇ ಸಲ್ಲಿಸಿರದಿದ್ದರೆ ಈ ಲಿಂಕ್ನಲ್ಲಿ ಮಾಹಿತಿ ಸಿಗಲಿದೆ.
https://sevasindhu.karnataka.gov.in/StatucTrack/Track_Status
ಇದು ಸೇವಾಸಿಂಧು ವೆಬ್ಸೈಟ್ ಲಿಂಕ್ ಆಗಿದೆ. ಈ ವೆಬ್ಸೈಟ್ಗೆ ಭೇಟಿ ನೀಡಿದ ಕೂಡಲೇ ನಿಮ್ಮ ವಿದ್ಯುತ್ ಕಂಪನಿ (ಎಕ್ಸಾಂ) ಯಾವುದು ಎಂಬ ಆಯ್ಕೆಯನ್ನು ಮಾಡಬೇಕು. ಆ ನಂತರ ನಿಮ್ಮ ಮನೆಯ ವಿದ್ಯುತ್ ಸಂಪರ್ಕದ ಖಾತೆ ಸಂಖ್ಯೆ (ಅಕೌಂಟ್ ಐಡಿ) ನಮೂದಿಸಬೇಕು. ಆನಂತರ ಚೆಕ್ ಸ್ಟೇಟಸ್ ಎಂಬ ಆಯ್ಕೆ ಮಾಡಿದರೆ ಗೃಹ ಜ್ಯೋತಿ ಅರ್ಜಿಯು ಯಾವ ಹಂತದಲ್ಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
https://sevasindhu.karnataka.gov.in/StatucTrack/Track_Status
ಅರ್ಜಿ ಸಂಖ್ಯೆ, ವಿದ್ಯುತ್ ಖಾತೆ ಸಂಖ್ಯೆ ಹಾಗೂ ಅರ್ಜಿ ಸಲ್ಲಿಕೆ ದಿನಾಂಕ, ಸಮಯವನ್ನು ತೋರಿಸಿ ಆ ನಂತರ ಅರ್ಜಿ ಸ್ಥಿತಿ ತಿಳಿಸಲಾಗುತ್ತಿದೆ. ಬಹುತೇಕರಿಗೆ ಅರ್ಜಿಯನ್ನು ಸ್ವೀಕರಿಸಿದ್ದೇವೆ ಮತ್ತು ಅದನ್ನು ಸಂಬಂಧ ಪಟ್ಟ ವಿದ್ಯುತ್ ಸರಬರಾಜು ಕಂಪನಿಗೆ (Escom) ಮುಂದಿನ ಕ್ರಮಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ.
(B alert, Don`t click that message. B careful about cyber criminals)
ಮೂರನೇ.. ಅತೀ ಮುಖ್ಯ ಪಾಯಿಂಟ್. ಆ ಮೆಸೇಜ್ ಬಂದರೆ ದಯವಿಟ್ಟು ಕ್ಲಿಕ್ ಮಾಡಬೇಡಿ..!
ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದವರಿಗೆ ಇತ್ತೀಚೆಗೆ ಒಂದು ಮೆಸೇಜ್ ಬರುತ್ತಿದೆ. ವಾಟ್ಸಪ್ ಅಥವಾ ಎಸ್.ಎಂ.ಎಸ್. ಮೂಲಕ ಮೆಸೇಜ್ ಬರುತ್ತಿದೆ. ನಿಮ್ಮ ಅರ್ಜಿ ಸ್ವೀಕಾರವಾಗಿದೆ. ಅದಕ್ಕೆ ಮುನ್ನ ಗೃಹಜ್ಯೋತಿ ಲಾಭ ಪಡೆಯುವುದಕ್ಕೆ ಮುನ್ನ ನಿಮ್ಮ ಬಾಕಿ ಬಿಲ್ ಕ್ಲಿಯರ್ ಮಾಡಿಕೊಳ್ಳಿ. ಚುಕ್ತಾ ಮಾಡಿ. ಇಲ್ಲದೇ ಹೋದರೆ ನಿಮ್ಮ ಅರ್ಜಿ ಸ್ವೀಕೃತಿಯಾಗುವುದೂ ಇಲ್ಲ. ಗೃಹಜ್ಯೋತಿ ಲಾಭವೂ ಸಿಕ್ಕುವುದಿಲ್ಲ. ಈ ಕೆಳಗಿನ ಲಿಂಕ್`ನಲ್ಲಿ ಹೋಗಿ ಬಿಲ್ ಪಾವತಿ ಮಾಡಿ ಎಂದು ಮೆಸೇಜ್ ಬರುತ್ತದೆ. ನೀವು ಆತುರಕ್ಕೆ ಬಿದ್ದು ಆ ಮೆಸೇಜ್ ಕ್ಲಿಕ್ ಮಾಡಿದಿರೋ ಮಟಾಷ್. ನಿಮ್ಮ ಅಕೌಂಟಿನಲ್ಲಿನ ದುಡ್ಡು ಖಾಲಿಯಾಗುತ್ತದೆ. ಆನ್`ಲೈನ್`ನಲ್ಲಿಯೇ ಬಿಲ್ ಕಟ್ಟುತ್ತಿದ್ದರೆ, ಎಂದಿನಂತೆ ಆ ಲಿಂಕ್`ನ್ನೇ ಬಳಸಿ. ಯಾವುದೇ ನಿಗಮದವರು ಆ ರೀತಿ ಲಿಂಕ್ ಕಳಿಸುತ್ತಿಲ್ಲ.



