ಈ ಬಾರಿಯ ನಮ್ಮ ಮತ ಜೆಡಿಎಸ್`ಗೆ. ನಿಖಿಲ್ ಕುಮಾರಸ್ವಾಮಿಯವರಿಗೇ ನಮ್ಮ ಮತ. ನಿಖಿಲ್ ಅವರನ್ನು ಈ ಬಾರಿಯ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ. ನಿಖಿಲ್ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಇಂತಾದ್ದೊಂದು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದಾರೆ ರಾಮನಗರ ಕ್ಷೇತ್ರದ ಕೆಲವು ಮುಸ್ಲಿಂ ಮುಖಂಡರು. ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮುಖಂಡ ಗಜಫರ್ ಅಲಿ ಬಾಬು, ಅಲ್ಲಾನ ಹೆಸರಲ್ಲಿ ಪಕ್ಷದ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಭೋದಿಸಿದ್ದಾರೆ.





ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಸುಲಭವಾಗಿಯೇ ಗೆದ್ದರಾದರೂ ಎರಡು ಸುತ್ತುಗಳಲ್ಲಿ ಕಾಂಗ್ರೆಸ್`ನ ಇಕ್ಬಾಲ್ ಹುಸೇನ್ ಪೈಪೋಟಿ ಕೊಟ್ಟಿದ್ದರು. ಎರಡು ಸುತ್ತುಗಳಲ್ಲಿ ಕುಮಾರಸ್ವಾಮಿ 2ನೇ ಸ್ಥಾನಕ್ಕೆ ಕುಸಿದಿದ್ದರು. ಈ ಹಿನ್ನೆಲೆಯಲ್ಲಿಯೇ ಮುಸ್ಲಿಂ ಮತದಾರರನ್ನು ಪಕ್ಷ ಬಿಟ್ಟ ಹೋಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಜೆಡಿಎಸ್.



