ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಜೊತೆ ಮಾರ್ಟಿನ್ (Actor Dhruva Sarja) ಚಿತ್ರದಲ್ಲಿ ವೈಭವಿ ಶಾಂಡಿಲ್ಯ (Vaibhavi Shandilya) ಜೋಡಿ. ಜೊತೆಗೆ ಅನ್ವೇಶಿ ಜೈನ್ ಕೂಡಾ ಇದ್ದಾರೆ. ಈ ಇಬ್ಬರು ಚೆಲುವೆಯರ ಜೊತೆಗೆ ಇನ್ನೊಬ್ಬ ಸುಂದರಿಯೂ ಬಂದಿದ್ದಾಳೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ (Dhruva Sarja) ಹೊಸ ಬ್ಯೂಟಿ ಸಿಕ್ಕಿದ್ದಾಳೆ. ಇಟಾಲಿಯನ್ ಸುಂದರಿ. ಜಾರ್ಜಿಯಾ ಆಂಡ್ರಿಯಾನಿ (Georgia andriyani). ಇತ್ತೀಚೆಗೆ ಚಿತ್ರದ ಸ್ಪೆಷಲ್ ಸಾಂಗ್ ಶೂಟ್ ಮುಕ್ತಾಯವಾಗಿದೆ. ಹೈದರಾಬಾದ್ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಈ ಬಿಂದಾಸ್ ನಂಬರ್ ಶೂಟ್ ಮಾಡಲಾಗಿದೆ. ಧ್ರುವ ಜೊತೆ ಜಾರ್ಜಿಯಾ ಆಂಡ್ರಿಯಾನಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಯಾರೀಕೆ ಜಾರ್ಜಿಯಾ ಆಂಡ್ರಿಯಾನಿ?
ಜಾರ್ಜಿಯಾ ಆಂಡ್ರಿಯಾನಿ (Georgia andriyani)ಇಟಲಿಯವರು. ನಟಿ(Actress Georgia andriyani) ಹಾಗೂ (Model Georgia andriyani) ಮಾಡೆಲ್. ಗೆಸ್ಟ್ ಇನ್ ಲಂಡನ್ ಮೂಲಕ ಚಿತ್ರರಂಗಕ್ಕೆ ಬಂದವರು. ಹಿಂದಿಯಲ್ಲಿ ವೆಲ್‍ಕಂ ಟು ಭಜರಂಗಪುರ್, ನಾನ್ ಸ್ಟಾಪ್ ಧಮಾಲ್, ಐ ಲವ್ ಯೂ ಟ್ರೂಲಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ನಟ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ಜೊತೆ ಅಫೇರ್ ಇದ್ದ ವಿಷಯ ಕೇಳಿ ಬಂದಿತ್ತು. ವಯಸ್ಸು 34 ವರ್ಷ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಇದು ಆಕೆಯ ಮೊದಲ ಸಿನಿಮಾ.
ಹೇಗಿದೆ ಹಾಡು..?
ಪಾಕಿಸ್ತಾನದಲ್ಲಿರುವ ಫೀಲ್ ಬರುವಂತೆ ಸೆಟ್ ಅನ್ನು ಡಿಸೈನ್ ಮಾಡಲಾಗಿದ್ದು, ನರ್ತಕಿಯರ, ಎಕ್ಸ್ಟ್ರಾಗಳ ಕಾಸ್ಟೂಮ್ ಅನ್ನು ಅರೆಬಿಕ್ ಮಾದರಿಯಲ್ಲಿಯೇ ಡಿಸೈನ್ ಮಾಡಲಾಗಿದೆ. ಈ ಹಾಡು ಅರೆಬಿಕ್ ಶೈಲಿಯಲ್ಲಿದ್ದು
ಮಣಿಶರ್ಮಾ ಟ್ಯೂನ್ ಹಾಕಿರುವ ಹಾಡಿಗೆ ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದಾರೆ.
300ಕ್ಕೂ ಹೆಚ್ಚು ಫಾರಿನ್ ಡ್ಯಾನ್ಸರ್ಸ್ ಹಾಡಿನಲ್ಲಿ ಕುಣಿದಿದ್ದಾರೆ. ಇದೊಂದೇ ಹಾಡಿಗೆ ಮೂರೂವರೆ ಕೋಟಿ ಬಜೆಟ್ನಲ್ಲಿ ಅದ್ಧೂರಿಯಾಗಿ ಹಾಡು ಚಿತ್ರೀಕರಿಸಲಾಗಿದೆ. ಇನ್ನೂ ಎರಡು ಹಾಡುಗಳ ಶೂಟಿಂಗ್ ಬಾಕಿಯಿದೆ.
ಮಾರ್ಟಿನ್ (Martin) ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು ಕಾಜೇಜು ಎಪಿಸೋಡ್ ಕೂಡ ಇದೆ ಎನ್ನಲಾಗುತ್ತಿದೆ. ಸಿಕ್ಕಾಪಟ್ಟೆ ರಗಡ್ ಲುಕ್ನಲ್ಲಿ ಧ್ರುವ ಸರ್ಜಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೆಷಲ್ ಸಾಂಗ್ನಲ್ಲೂ ಅದೇ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.
ಎ. ಪಿ ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆಯ 2ನೇ ಸಿನಿಮಾ ಮಾರ್ಟಿನ್. ಧ್ರುವ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಅರ್ಜುನ್, ಈ ಬಾರಿ ಪಕ್ಕಾ ಆಕ್ಷನ್ ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ವೈಭವಿ ಶಾಂಡಿಲ್ಯ ಹಾಗೂ ಅನ್ವೇಶಿ ಜೈನ್ ಒಟ್ಟು ಇಬ್ಬರು ನಾಯಕಿಯರಿದ್ದಾರೆ.
ಅಕ್ಟೋಬರ್ 10ರ ಒಳಗೆ ಮುಗಿಸುವ ಯೋಚನೆಯಲ್ಲಿ ಚಿತ್ರತಂಡ ಇದೆ. ಆ ಬಳಿಕ ಸಿನಿಮಾದ ಪ್ರಮೋಷನ್, ಬಿಡುಗಡೆ ಇತ್ಯಾದಿ ಕಾರ್ಯಗಳು ನಡೆಯಲಿವೆ. ಸಿನಿಮಾಕ್ಕೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು, ದೊಡ್ಡ ಮಟ್ಟದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿರುವ ಜೊತೆಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ.



