ರೇಣುಕಾಸ್ವಾಮಿ ಕೊಲೆಗೆ ಕಾರಣವಾಗಿದ್ದು ಪವಿತ್ರಾ ಗೌಡ ಅವರಿಗೆ ಆತ ಹಾಕಿದ್ದ ಅಶ್ಲೀಲ ಮೆಸೇಜ್. ಅವನು ಕಳಿಸಿದ್ದ ಅವನದ್ದೇ ಮರ್ಮಾಂಗದ ಫೋಟೋ ನೋಡಿ ಕೆರಳಿದ್ದರು ಪವಿತ್ರಾ ಗೌಡ. ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದ್ದ ಪವಿತ್ರ ಗೌಡ ನಿಂದನೆಯ ವಾರ್ʻನಲ್ಲಿ ರೇಣುಕಾಸ್ವಾಮಿಯೂ ಒಬ್ಬ. ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಅಭಿಮಾನಿಗಳೇ ವಿಜಯಲಕ್ಷ್ಮಿ ಪರ ನಿಂತು ಪವಿತ್ರಾಗೌಡ ವಿರುದ್ಧ ಮುಗಿಬಿದ್ದರು. ಭಾಷೆ ಹತೋಟಿಯನ್ನು ಮೀರಿತ್ತು.
ಅದೇ ವೇಳೆ ಪವಿತ್ರಾಗೌಡ ಇನ್‌ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಕೂಡ ‘ರೆಡ್ಡಿ’ ಹೆಸರಿನಲ್ಲಿ ನಿಂದಿಸಿ ಪೋಸ್ಟ್ ಹಾಕುತ್ತಿದ್ದ. ಇನ್ನೊಂದೆಡೆ ‘ಗೌತಮ್’ ಹೆಸರಿನ ಮತ್ತೊಂದು ಖಾತೆಯಲ್ಲಿ ಪವಿತ್ರಾಗೌಡಳಿಗೆ ಖಾಸಗಿಯಾಗಿ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶಗಳನ್ನು ನಿರಂತರವಾಗಿ ಕಳುಹಿಸುತ್ತಿದ್ದ. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಕಾಡುತ್ತಿದ್ದ ರೇಣುಕಾಸ್ವಾಮಿ, ತಾನು ಕೊಲೆಯಾಗುವ ಐದಾರು ದಿನಗಳ ಹಿಂದೆ ಪವಿತ್ರಾಗೌಡಳಿಗೆ ತನ್ನ ಖಾಸಗಿ ಅಂಗದ ಭಾವಚಿತ್ರ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದ. ಈ ಅಶ್ಲೀಲ ಪೋಟೋಗೆ ಅಸಹ್ಯಗೊಂಡ ಪವಿತ್ರಾ ಗೌಡ ತನ್ನ ಸಹಾಯಕ ಪವನ್‌ಗೆ ಗೌತಮ್ ಹೆಸರಿನ ವ್ಯಕ್ತಿ ಬಗ್ಗೆ ಹೇಳಿ ಕೋಪ ಕಾರಿಕೊಂಡಿದ್ದಳು.
ಅದಾದ ಮೇಲೆ ದರ್ಶನ್ʻಗೆ ಈ ವಿಷಯ ಗೊತ್ತಾಯ್ತು.ಗೌತಮ್‌ನ ವಿವರ ಪಡೆಯಲು ಸೂಚಿಸಿದ್ದರು.
ಆಗ ಪವನ್ ಹಾಗೂ ಪವಿತ್ರಾಗೌಡ ಜಂಟಿಯಾಗಿ ರೇಣುಕಾಸ್ವಾಮಿಯನ್ನು ಟ್ರ್ಯಾಪ್ ಮಾಡಿದ್ದರು. ಅಂತೆಯೇ ಗೌತಮ್ ಹೆಸರಿನ ಅಪರಿಚಿತನ ಜತೆ ಸಲುಗೆ ವ್ಯಕ್ತಪಡಿಸುವ ಸಂದೇಶಗಳಿಂದ ಪವಿತ್ರಾ ಚಾಟಿಂಗ್ ಶುರು ಮಾಡಿದ್ದಳು. ಆದರೆ ತಾನು ಟ್ರ್ಯಾಪ್ ಆಗುವ ಪರಿವೆಯೇ ಇಲ್ಲದೆ ರೇಣುಕಾಸ್ವಾಮಿ, ತನ್ನ ಹೆಸರು ಗೌತಮ್, ಚಿತ್ರದುರ್ಗದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪೋಟೋ, ಮೊಬೈಲ್ ಸಂಖ್ಯೆ ಸಹಿತ ವೈಯಕ್ತಿಕ ವಿವರ ಹಂಚಿಕೊಂಡಿದ್ದ.
ಈ ಮಾಹಿತಿ ತಿಳಿದ ಕೂಡಲೇ ದರ್ಶನ್, ಆ ಜಿಲ್ಲೆಯ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಪೋಟೋ ಕಳುಹಿಸಿ ಹುಡುಕುವಂತೆ ಸೂಚಿಸಿದ್ದರು. ಕೊನೆಗೆ ಅಪೋಲೋ ಫಾರ್ಮಸಿಗೆ ತೆರಳಿ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿ ಗುರುತಿಸಿದ ರಾಘವೇಂದ್ರ, ಆತ ಗೌತಮ್ ಅಲ್ಲ ನಿಜವಾದ ಹೆಸರು ರೇಣುಕಾಸ್ವಾಮಿ ಎಂದು ದರ್ಶನ್ʻಗೆ ತಿಳಿಸಿದ್ದ. ಆಗ ಕೂಡಲೇ ಆತನನ್ನು ಬೆಂಗಳೂರಿಗೆ ಕರೆತರುವಂತೆ ದರ್ಶನ್ ಸೂಚಿಸಿದ್ದರು.
ಅಂತೆಯೇ ಜೂ.8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿ ಮೊಬೈಲ್‌ಗೆ ಕರೆ ಮಾಡಿದ ರಾಘವೇಂದ್ರ, ನಿನ್ನೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಕರೆಸಿಕೊಂಡಿದ್ದ. ನಿನ್ನನ್ನು ದರ್ಶನ್ ಭೇಟಿಯಾಗಬೇಕಂತೆ. ಈಗಲೇ ಹೋಗಬೇಕು ಎಂದು ತಿಳಿಸಿ ಕಾರಿನಲ್ಲಿ ಬಲವಂತವಾಗಿ ಕರೆತಂದು ದರ್ಶನ್‌ಗೆ ರಾಘವೇಂದ್ರ ತಂಡ ಒಪ್ಪಿಸಿತ್ತು
ಒಟ್ಟಿನಲ್ಲಿ ರೇಣುಕಾಸ್ವಾಮಿಯ ವಿಕೃತಿಗಳು ಹಾಗೂ ದರ್ಶನ್ʻನ ವಿಕೃತಿ ಎರಡೂ ಕೊಲೆಗೆ ಕಾರಣವಾಗಿದೆ.



