ಗೋಲ್ಡನ್ ಸ್ಟಾರ್ ಗಣೇಶ್, 2024ರ ಮೊದಲ ಸಿನಿಮಾ ರಿಲೀಸ್ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿದೆ. ಗಣೇಶ್ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಗೆಲುವು ಸಿಕ್ಕಿಲ್ಲ.ಗಣೇಶ್ ಅವರ ಬಹುತೇಕ ಚಿತ್ರಗಳು ಆರಂಭ ಅದ್ಧೂರಿಯಾಗಿರುತ್ತೆ. ಆದರೆ.. ಕೆಲವೇ ದಿನಗಳಷ್ಟರಲ್ಲಿ ಥಿಯೇಟರು ಖಾಲಿ ಹೊಡೆಯುತ್ತೆ. ಇದು ವಾಸ್ತವ. ಆದರೆ.. ಕೆಲವು ಚಿತ್ರಗಳು ಕ್ವಾಲಿಟಿ ಚೆನ್ನಾಗಿದ್ದು ಗಮನ ಸೆಳೆಯುತ್ತಿವೆ. ಅಂದಹಾಗೆ ಬಾನದಾರಿಯಲ್ಲಿ.. ಚಿತ್ರದ ನಂತರ ಮತ್ತೊಂದು ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ.
ನಿರ್ದೇಶಕ ಶ್ರೀನಿವಾಸ ರಾಜು ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಚಿತ್ರೀಕರಣ ವಿಯೆಟ್ನಾಂನಲ್ಲಿ ಮುಕ್ತಾಯವಾಗಿದೆ. ವಿಯೆಟ್ನಾಂನ ಸುಂದರ ಪ್ರದೇಶಗಳಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ 2 ಹಾಡುಗಳು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ.
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಎದುರು ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಾಯಕಿಯರು. ಕ್ರೈಂ ಥ್ರಿಲ್ಲರ್ ಚಿತ್ರಗಳಿಗೆ ಹೆಸರಾಗಿದ್ದ ಶ್ರೀನಿವಾಸ ರಾಜು, ಬಾರಿಗೆ ಬೇರೆಯ ಜಾನರ್ ಲವ್ ಟ್ರ್ಯಾಕ್ ಚಿತ್ರ ಮಾಡುತ್ತಿದ್ಧಾರೆ.
ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ ಕೃಷ್ಣಂ ಪ್ರಣಯಂ ಸಖಿ. ಗಣೇಶ್ ಅವರಿಗೆ ಇದು 41ನೇ ಸಿನಿಮಾ. ಶ್ರೀನಿವಾಸ ಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿ ಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜಾ, ಗಿರಿ ಶಿವಣ್ಣ ಮುಂತಾದ ಕಲಾವಿದರು ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಚಿತ್ರದ ಶಕ್ತಿ ಗಣೇಶ್. ಶ್ರೀನಿವಾಸ ರಾಜು ಎಂಬ ನಿರ್ದೇಶಕರು ಖ್ಯಾತಿ ಪಡೆದಿದ್ದೇ ದಂಡುಪಾಳ್ಯದಂತಹ ಚಿತ್ರಗಳ ಮೂಲಕ. ಆಕ್ಷನ್ ಮತ್ತು ರಕ್ತಸಿಕ್ತ ಕಥೆಗಳ ಮೂಲಕವೇ ಗೆದ್ದಿರುವ ಶ್ರೀನಿವಾಸ ರಾಜು, ಇದೇ ಮೊದಲ ಬಾರಿ ಲವ್ ಸ್ಟೋರಿ ಹೇಳುತ್ತಿದ್ಧಾರೆ. ಹೀಗಾಗಿ ನಿರೀಕ್ಷೆಯೂ ಜೋರಾಗಿದೆ.
ಇದುವರೆಗೂ ರಕ್ತ ಸಿಕ್ತ ಸಿನಿಮಾಗಳನ್ನೇ ಮಾಡಿರುವ ನಿರ್ದೇಶಕ ಶ್ರೀನಿವಾಸ ರಾಜು, ಟೈಟಲ್ ಮೂಲಕವೇ ಇದು ಗಣೇಶ್ ಅವರ ಜಾನರ್ ಸಿನಿಮಾ ಎಂದಿದ್ದಾರೆ. ಗಣೇಶ್ ಅವರಿಗಿಂತ ಹೆಚ್ಚು ನಿರೀಕ್ಷೆ ಶ್ರೀನಿವಾಸ ರಾಜು ಅವರ ಮೇಲಿದೆ. ಏಕೆಂದರೆ ಕತ್ತಲಲೋಕದ ಕಥೆಗಳನ್ನೇ ಹೇಳುತ್ತಿದ್ದ ಶ್ರೀನಿವಾಸ ರಾಜು, ಇದೇ ಮೊದಲ ಬಾರಿಗೆ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕಥೆ ಹೇಳ್ತಿದ್ದಾರೆ.
ವಿಯೆಟ್ನಾಂನಲ್ಲಿ ಎರಡು ಹಾಡುಗಳ ಚಿತ್ರೀಕರಣ ಹಾಗೂ ಟಾಕಿ ಪೋರ್ಷನ್ ಶೂಟಿಂಗ್ ಮುಗಿಯುತ್ತಿದ್ದಂತೆಯೇ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಆ ಮೂಲಕ ‘ಕೃಷ್ಣಂ ಪ್ರಣಯ ಸಖಿ’ ಚಿತ್ರತಂಡ ಕುಂಬಳಕಾಯಿ ಒಡೆದಿದೆ. ವಿಯೆಟ್ನಾಂಗೆ ಗಣೇಶ್, ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಹಾರಿದ್ದರು. ಸದ್ಯಕ್ಕೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ರೀರೆಕಾರ್ಡಿಂಗ್ ನಡೆಯುತ್ತಿದ್ದು, ಅತೀ ಶೀಘ್ರದಲ್ಲೇ ‘ಕೃಷ್ಣಂ ಪ್ರಣಯ ಸಖಿ’ ಚಿತ್ರ ತೆರೆಗೆ ಬರಲಿದೆ.



