ತಮ್ಮದೇ ಸಿನಿಮಾ ಹಾನಿಕರ.. ಹೃದಯಕ್ಕೆ ಹಾನಿಕರ.. ಆರೋಗ್ಯಕ್ಕೆ ಹಾನಿಕರ ಎಂದು ಸಿನಿಮಾ ನಟರೇ ಹೇಳೋದನ್ನು ನೋಡಿದ್ದೀರಾ.. ತಮ್ಮ ಸಿನಿಮಾ ಕಡ್ಡಾಯವಾಗಿ ಬುದ್ದಿವಂತರಿಗೆ ಮಾತ್ರ ಎಂಬ ಪ್ರಚಾರ ತಂತ್ರವನ್ನೂ ಮೀರಿದ ಪ್ರಚಾರ ತಂತ್ರವಿದು. ಅಂಥಾದ್ದೊಂದು ವಿಭಿನ್ನ ಹೆಜ್ಜೆ ಇಟ್ಟಿರುವುದು ಗೋಲ್ಡನ್ ಸ್ಟಾರ್ ಗಣೇಶ್ ( golden star ganesh ) ಹಾಗೂ ಅವರ ಅಭಿನಯದ ಬಾನದಾರಿಯಲ್ಲಿ.. ಸಿನಿಮಾ ತಂಡ.
ಸಿಗರೇಟು ಅಥವಾ ಧೂಮಪಾನ ಆರೋಗ್ಯಕ್ಕೆ ಹಾನಿಕರ. ಕ್ಯಾನ್ಸರ್ ಸಂಭವಿಸುತ್ತದೆ.. Smoking is injurious to health causes cancer
ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಮಾರಕ. Drinking alcohol is dangerous to health causes death
ಈ ರೀತಿಯ ಎಚ್ಚರಿಕೆಗಳನ್ನು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯಗಳು ಬಂದಾಗಲೆಲ್ಲ ಸ್ಕ್ರೀನ್ ಮೇಲೆ ಬರುತ್ತವೆ. ಆದರೆ ಸಿನಿಮಾ ನೋಡುವುದು ಹೃದಯಕ್ಕೆ ಹಾನಿಕಾರಕ ಅನ್ನೋ ಎಚ್ಚರಿಕೆ ಸಂದೇಶವನ್ನು ನೋಡಿದ್ದೀರಾ.. ನೋಡಿದ್ದರೆ ಅದು ಬಾನದಾರಿಯಲ್ಲಿ ಪ್ರಮೋಷನ್ನಲ್ಲಿ ನೋಡಿರುತ್ತೀರಿ.
ಹೌದು, ಉತ್ತಮ ಪ್ರದರ್ಶನ ಕಾಣುತ್ತಿರೋ ಬಾನದಾರಿಯಲ್ಲಿ ( bandadariyalli ) ಸತತ 2ನೇ ವಾರಕ್ಕೆ ಕಾಲಿಟ್ಟಿದೆ. ಬಿಡುಗಡೆಯಾದ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಶೇಷವೆಂದರೆ 2ನೇ ವಾರಕ್ಕೆ ಚಿತ್ರವನ್ನು ಪ್ರಮೋಟ್ ಮಾಡಿರುವ ಚಿತ್ರತಂಡ ಬರೆದಿರುವ ಪ್ರಚಾರದ ಲೈನ್ ಹೀಗಿದೆ. ಈ ಸಿನಿಮಾ ನೋಡುವುದು ಹೃದಯಕ್ಕೆ ಹಾನಿಕಾರಕ watching this movie is injurious to heart ಎನ್ನುವುದು.
ಹೌದು, ಈ ಲೈನ್ನ್ನು ಗಣೇಶ್ (golden star ganesh ), ರುಕ್ಮಿಣಿ ವಸಂತ್ (Rukmini vasanth ), ರೀಷ್ಮಾ ನಾಣಯ್ಯ (Reeshma nanaiah), ಪ್ರೀತಂ ಗುಬ್ಬಿ (Preetham gubbi) ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಪ್ರೀತಂ ಗುಬ್ಬಿ ಮತ್ತೊಮ್ಮೆ ಲವ್ ರೊಮ್ಯಾಂಟಿಕ್ ಕಥೆ ಹೇಳೊದ್ರಲ್ಲಿ ತಾವು ಎಕ್ಸ್ಪರ್ಟ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಶ್ರೀವಾರಿ ಟಾಕೀಸ್ ನಿರ್ಮಾಣದ ಬಾನದಾರಿಯಲ್ಲಿ ಬಾನದಾರಿಯಲ್ಲಿ ಗೆದ್ದಿದೆ. ಅಂದಹಾಗೆ ಇದು ಪ್ರೇಮಕಥೆ ಅಲ್ಲ, ಪ್ರೀತಿ ಪ್ರೇಮದ ಬಗ್ಗೆ ಇರುವ ಕಥೆ ಎನ್ನುವುದು ಮೊದಲ ಟ್ಯಾಗ್ಲೈನ್ ಆಗಿತ್ತು. ಈಗ ಎರಡನೇ ಟ್ಯಾಗ್ಲೈನ್ ಕೂಡಾ ಅಷ್ಟೇ ಸಖತ್ತಾಗಿದೆ.



