ರಾಜ್ಯ ಸರ್ಕಾರದ ಗ್ಯಾರಂಟಿ ಭಾಗ್ಯಗಳು (Guarantee Scheme) ಪರ ವಿರೋಧ ಚರ್ಚೆಗೆ ಒಳಗಾಗಿವೆ. ಆದರೇನಂತೆ.. ಶಕ್ತಿ (Shakthi Scheme) ಯೋಜನೆಯಲ್ಲಿ ಬಸ್`ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ. ಗೃಹಜ್ಯೋತಿಗೆ (Gruhajyothi) ವರ್ಷದ ಸರಾಸರಿ +ಶೇ.10ರಷ್ಟು ವಿದ್ಯುತ್ ಉಚಿತವಾಗಿ ಪಡೆಯುವುದಕ್ಕೆ ಅರ್ಜಿ ಹಾಕುತ್ತಿದ್ದಾರೆ. ಗೃಹಲಕ್ಷ್ಮಿ (GruhaLakshmi) ಯೋಜನೆ ಇನ್ನೇನು ಶುರುವಾಗಬೇಕಿದೆ. ಯುವನಿಧಿಯೂ (Yuvanidhi) ಆರಂಭವಾಗಬೇಕಿದೆ. ವಾರ್ಷಿಕ ಸರಿಸುಮಾರು 60 ಸಾವಿರ ಕೋಟಿ ಹಣ ಇದಕ್ಕೆ ವೆಚ್ಚವಾಗಲಿದೆ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ರಾಜ್ಯ ಬಜೆಟ್ಟಿನ ಶೇ.25ರಷ್ಟು ಹಣ ಗ್ಯಾರಂಟಿ ಯೋಜನೆಗಳಿಗೇ ವೆಚ್ಚವಾಗಲಿದೆ. ಇದರ ಜೊತೆಯಲ್ಲಿ ಈ ಮೊದಲು ಇದ್ದ ಉಚಿತಗಳು ಕೂಡಾ ಮುಂದುವರೆಯಲಿವೆ. ಆದರೆ ಇದು ಅಪಾಯಕಾರಿ ಎಂದಿದ್ದಾರೆ (Justice Santhosh Hegde) ನ್ಯಾ.ಸಂತೋಷ್ ಹೆಗ್ಡೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಉಚಿತ ಭಾಗ್ಯಗಳಿಂದ ಆರ್ಥಿಕ ಪರಿಸ್ಥಿತಿ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರಲಿದೆ. ಉಚಿತ ಭಾಗ್ಯಗಳ ಪರಿಣಾಮ ಮುಂದಿನ ಆರು ತಿಂಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ. . ಆರ್ಥಿಕ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಈಗಾಗಲೇ ವಿದ್ಯುತ್ ಬಿಲ್ಲನ್ನು ಹೆಚ್ಚಿಸಿದ್ದಾರೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಎಲ್ಲವನ್ನೂ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ ಎಂದಿದ್ದಾರೆ ಸಂತೋಷ್ ಹೆಗ್ಡೆ.
ಸರ್ಕಾರ ಉಚಿತವಾಗಿ ವಿದ್ಯೆ ಮತ್ತು ಆರೋಗ್ಯ ನೀಡಲಿ. ಆರೋಗ್ಯ ಮತ್ತು ಶಿಕ್ಷಣಕ್ಕೆ ಎಷ್ಟು ಹಣವನ್ನಾದರೂ ಖರ್ಚು ಮಾಡಲಿ. ಆದರೆ ಉಚಿತದ ಹೆಸರಲ್ಲಿ ಜನರಿಗೆ ಆಮಿಷ ನೀಡುವುದು ಸರಿಯಲ್ಲ. ಉಚಿತ ಭಾಗ್ಯಗಳ ಪರಿಣಾಮ ಮುಂದಿನ ಆರು ತಿಂಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ. ಇವುಗಳಿಂದ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ದುಡಿದು ಬದುಕುವುದನ್ನು ಕಲಿಸಬೇಕು. ಜನರನ್ನು ಸೋಮಾರಿಗಳನ್ನಾಗಿ ಮಾಡದೆ ಶ್ರಮಜೀವಿಗಳನ್ನಾಗಿ ಸ್ವಾವಲಂಬಿಗಳಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು. ಯಾವುದೇ ವ್ಯಕ್ತಿ ಶ್ರಮದಿಂದ ಹಣವನ್ನು ಪಡೆಯಬೇಕೇ ಹೊರತು ದಾನದಿಂದ ಅಲ್ಲ. ವತ್ತಿನ ರಾಜಕೀಯ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುವುದಿಲ್ಲ. ಇಂದಿನ ರಾಜಕಾರಣಿಗಳಲ್ಲಿ ಜನಸೇವೆ ಮಾಡಬೇಕೆಂಬ ಮನೋಭಾವವಿಲ್ಲ. ರಾಜಕೀಯ ಹುದ್ದೆಯನ್ನು ತಮ್ಮ ಲಾಭಕಷ್ಟೇ ಬಳಸುತ್ತಿದ್ದಾರೆ. ಅಧಿಕಾರ ಎನ್ನುವುದು ಜನಸೇವೆ ಮಾಡಲು ಇರುವ ಸಾಧನ ಎನ್ನುವುದು ರಾಜಕಾರಣಿಗಳ ಅರಿವಿಗೆ ಬರಬೇಕು. ಜಾತಿ ಧರ್ಮಗಳನ್ನು ಬಿಟ್ಟು ಜನ ಸೇವೆ ಮಾಡುವವರಿಗೆ ಮಾತ್ರ ಜನ ಮತ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.



