ಕಾಂಗ್ರೆಸ್ಸಿನವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಡಿದ್ದನ್ನೆಲ್ಲ ಟೀಕೆ ಮಾಡ್ತಾರೆ. ಹೊಸ ಸಂಸತ್ ಭವನ, ರಸ್ತೆ, ವಂದೇಭಾರತ್ ರೈಲು (Vande Bharath train) , ಆರ್ಟಿಕಲ್ 370 (Article 370) , ಆರ್ಥಿಕ ನೀತಿ.. ಪ್ರತಿಯೊಂದರಲ್ಲೂ ಟೀಕೆ ಮಾಡ್ತಾರೆ. ಇದೀಗ ದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೂ (G-20) ಅಷ್ಟೆ, ಎಲ್ಲ ರಾಜ್ಯಗಳ ಸಿಎಂ ಹೋಗ್ತಿದ್ದಾರೆ. ಮಮತಾ ಬ್ಯಾನಜಿ (Mamatha banarjiee), ನಿತೀಶ್ ಕುಮಾರ್ (Nitheesh Kumar) , ಕೇಜ್ರಿವಾಲ್ (Aravinda Kejrival) ಕೂಡಾ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ಸಿನ ನಾಲ್ವರು ಸಿಎಂಗಳಲ್ಲಿ ಒಬ್ಬರು ಮಾತ್ರ ಹೋಗುತ್ತಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ದೇಶದಲ್ಲಿ ಒಟ್ಟಾರೆ ಕಾಂಗ್ರೆಸ್ಸಿನ ನಾಲ್ವರು ಸಿಎಂಗಳಿದ್ದಾರೆ. ಅದರೆ ಸಿದ್ದರಾಮಯ್ಯ ಸೇರಿದಂತೆ ಮೂವರು ಸಿಎಂ ಹೋಗುತ್ತಿಲ್ಲ. ಅದೇ ಜಿ-20 ಸಮಾವೇಶದ ಬಗ್ಗೆ ಟೀಕೆಗಳ ಸುರಿಮಳೆಯಾಗುತ್ತಿದೆ. ಆದರೆ, ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (EX PM Manamohan singh), ಪ್ರಧಾನಿ ನರೇಂದ್ರ ಮೋದಿ ಅವರನ್ನ ಹೊಗಳಿರುವುದು ವಿಶೇಷ.
ಶಾಂತಿಗಾಗಿ ಪ್ರತಿಪಾದಿಸುವಾಗ ದೇಶವು ತನ್ನ ಸಾರ್ವಭೌಮ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಮೂಲಕ ಸರಿಯಾದ ಕೆಲಸವನ್ನು ಮಾಡಿದೆ. ಭಾರತವು ತನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡುವುದಕ್ಕಿಂತ ಹೆಚ್ಚಾಗಿ ಆಶಾವಾದಿಯಾಗಿದೆ. ಇದು ಮನಮೋಹನ್ ಸಿಂಗ್ ನೀಡಿರುವ ಹೇಳಿಕೆ. ಅದರಲ್ಲಿಯೂ ವಿಶೇಷವಾಗಿ ಉಕ್ರೇನ್ ಯುದ್ಧದ ನಂತರ ಭಾರತ ತೆಗೆದುಕೊಂಡ ನಿಲುವ ಹಾಗೂ ಅದನ್ನು ನಿಭಾಯಿಸಿದ ರೀತಿ ಮನಮೋಹನ್ ಸಿಂಗ್ ಅವರ ಮೆಚ್ಚುಗೆಗೆ ಪಾತ್ರವಾಗಿದೆ.
ಪಕ್ಷ ಅಥವಾ ವೈಯಕ್ತಿಕ ರಾಜಕೀಯಕ್ಕಾಗಿ ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿಯನ್ನು ಬಳಸುವಲ್ಲಿ ಸಂಯಮವನ್ನು ಪ್ರದರ್ಶಿಸುವುದು ಅಷ್ಟೇ ಮುಖ್ಯ . ವಿಶ್ವದಲ್ಲಿ ಭಾರತದ ಸ್ಥಾನಮಾನವು ದೇಶೀಯ ರಾಜಕೀಯ ಕಾಳಜಿಯ ವಿಷಯವಾಗಬೇಕು, ಆದರೆ ಅದನ್ನು ಪಕ್ಷಪಾತದ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಇದು ಆರ್ಥಿಕ ವ್ಯವಹಾರಗಳನ್ನು ನಿಭಾಯಿಸುವ ಬಹುಮುಖ್ಯ ಸಭೆ. ಹೀಗಾಗಿ ಭದ್ರತೆಯಂತಹ ವಿಷಯಗಳನ್ನು ಈ ಶೃಂಗದಲ್ಲಿ ಪ್ರಸ್ತಾಪ ಮಾಡುವುದು ಬೇಡ. ಭದ್ರತೆಗೆ ಸಂಬಂಧಿಸಿದ ಘರ್ಷಣೆಗಳನ್ನು ಇತ್ಯರ್ಥಗೊಳಿಸಲು ಭಾರತದ ಪ್ರಾದೇಶಿಕ ಮತ್ತು ಸಾರ್ವಭೌಮ ಸಮಗ್ರತೆಯನ್ನು ರಕ್ಷಿಸಲು ಮತ್ತು ದ್ವಿಪಕ್ಷೀಯ ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಆದರೆ ಅತ್ತ ರಾಹುಲ್ ಗಾಂಧಿ ಮಾತ್ರ ಎಂದಿನಂತೆ ವಿದೇಶದಲ್ಲಿ ಭಾರತವನ್ನು ಟೀಕಿಸುತ್ತಾ, ಚೀನಾವನ್ನು ಹೊಗಳುತ್ತಾ, ಭಾರತ ವಿರೋಧಿ ಹಾಗೂ ಪಾಕಿಸ್ತಾನದ ಪರ ನಿಲುವು ತೆಗೆದುಕೊಂಡವರ ಜೊತೆ ಮಾತನಾಡುತ್ತಾ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಎಲ್ಲದರ ಮಧ್ಯೆಯೂ ಉಕ್ರೇನ್ ಯುದ್ಧದ ವಿಷಯದಲ್ಲಿ ಮೋದಿ ತೆಗೆದುಕೊಂಡ ನಿಲುವು ಸರಿಯಾಗಿಯೇ ಇದೆ ಎಂದು ಶ್ಲಾಘಿಸಿದ್ದಾರೆ. ಆದರೆ ಅಲ್ಲೊಂದು ಗೊಂದಲವನ್ನೂ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಒಂದಷ್ಟು ಎಡವಟ್ಟುಗಳನ್ನೂ ಮಾಡಿದ್ದಾರೆ.
ಬೆಲ್ಜಿಯಂನಲ್ಲಿದ್ದ ರಾಹುಲ್ ಗಾಂಧಿ ಅಲ್ಲನ ಸಂಸದರೊಂದಿಗೆ ಮಾತನಾಡುತ್ತಾ ಮತ್ತೊಮ್ಮೆ ಮತ್ತೊಮ್ಮೆ ಭಾರತದಲ್ಲಿ ದಲಿತರ, ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಲ್ಲದೆ ಆರ್ಟಿಕಲ್ 370 ಬಗ್ಗೆ ಗೊಂದಲ ಸೃಷ್ಟಿ ಮಾಡುವ ಹೇಳಿಕೆ ನೀಡಿದ್ದಾರೆ. ಆದರೆ ಅದರಲ್ಲಿ ತಮಗೆ ಸ್ಪಷ್ಟತೆ ಇದೆ ಎಂದಿದ್ದಾರೆ.
ಚೀನಾ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ. ಆದರೆ ಭಾರತಕ್ಕೆ ಅಂತಹ ಪರ್ಯಾಯ ದೃಷ್ಟಿಕೋನ ಇಲ್ಲ ಎಂದು ಚೀನಾವನ್ನು ಹೊಗಳಿ, ಭಾರತವನ್ನು ಟೀಕಿಸಿದ್ದಾರೆ. ಅಲ್ಲದೆ ಯೂರೋಪ್ ಸಂಸದ ಫ್ಯಾಬಿಯೋ ಮ್ಯಾಸಿಮೋ ಜೊತೆ ಮಾತುಕತೆ ನಡೆಸಿ, ಫೋಟೋ ತೆಗೆಸಿಕೊಂಡಿದ್ದಾರೆ. ಈ ಫ್ಯಾಸಿಮೋ, ಈ ಹಿಂದೆ ಕಾಶ್ಮೀರ ವಿಷಯದಲ್ಲಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು. ಭಾರತಕ್ಕೆ ಅಲ್ಲ ಎಂದು ಬಹಿರಂಗವಾಗಿ ನಿಲುವು ಪ್ರತಿಪಾದಿಸಿದ್ದವರು. ಈಗ ರಾಹುಲ್ ಗಾಂಧಿ ಪಕ್ಷದ ನಿಲುವು ಏನು? ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೋ ಅಲ್ಲವೋ.. ಎಂದು ಪ್ರಶ್ನೆ ಕೇಳುತ್ತಿದೆ ಬಿಜೆಪಿ.



