2027ರ ನಂತರ ದರ್ಶನ್ʻಗೆ ಶನಿದೆಸೆ ಇದೆ. ಅವರಿಗೆ ಎಂಎಲ್‌ಎ, ಮಂತ್ರಿನೂ ಆಗೋ ಯೋಗ ಇದೆ. ಸ್ಟ್ರೋಕ್ ಕೂಡಾ ಹೊಡೀಬಹುದು. ಇದು ನಂಬರ್ ಸ್ವಾಮಿ ಅಂತಾನೇ ಫೇಮಸ್ ಆಗಿರೋ.. ನಂಬರ್ ಅಂದ್ರೆ ನಾನು.. ನಾನು ಅಂದ್ರೆ ನಂಬರ್.. ಅಂತೆಲ್ಲ ಹೇಳಿಕೊಳ್ಳೋ ನಂಬರ್ ಸ್ವಾಮೀಜಿ ಆರ್ಯವರ್ಧನ್ ಗುರೂಜಿ, ದರ್ಶನ್ ಅವರ ಬಗ್ಗೆ ಹೇಳಿರೋ ಭವಿಷ್ಯ. ಆದರೆ ಇದನ್ನ ಕಾಮಿಡಿಯಾಗಿ ತಗೋಬೇಕೋ.. ಸೀರಿಯಸ್ಸಾಗಿ ತಗೋಬೇಕೋ.. ಅನ್ನೋ ಗೊಂದದಲ್ಲಿದ್ದಾರೆ ಜನ. ಯಾಕಂದ್ರೆ ಈ ಮನುಷ್ಯನ ಪ್ರಕಾರ, ಆರ್ʻಸಿಬಿ ಈಗಾಗಲೇ ಮೂರ್ನಾಲ್ಕು ಬಾರಿ ಕಪ್ ಗೆಲ್ಲಬೇಕಿತ್ತು.
ಆರ್ಯವರ್ಧನ್ ಅವರ ಪ್ರಕಾರ ದರ್ಶನ್ ಅವರಿಗೆ ಈಗ ಶನಿ ಹೆಗಲೇರಿದ್ದಾನೆ. ಶನಿ ಬಿಟ್ಟು ಹೋಗುವಾಗ.. ಅದೇ ಕಷ್ಟಗಳೆಲ್ಲ ದೆಸೆಯಾಗಿ ಬದಲಾಗುತ್ತವೆ. ಹೀಗಾಗಿ 2027ರ ನಂತರ ದರ್ಶನ್ ಅವರಿಗೆ ರಾಜಯೋಗ ಬರುತ್ತದೆ ಎನ್ನುವುದು ಆರ್ಯವರ್ಧನ್ ಗುರೂಜಿ(?)ಯ ಮಾತು. ಆರ್ಯವರ್ಧನ್ ಗುರೂಜಿ ಪ್ರಕಾರ..
ದರ್ಶನ್ʻಗೆ ಹೆಣ್ಣೇ ಕಂಟಕ : ದರ್ಶನ್ ಜಾತಕದಲ್ಲಿ ಉಚ್ಛಸ್ಥಾನದಲ್ಲಿ ಶುಕ್ರನಿದ್ದಾನೆ. ಶುಕ್ರ ಗ್ರಹ ಉಚ್ಛ ಸ್ಥಾನದಲ್ಲಿದ್ದರೆ ಇದ್ದರೆ ಹೆಣ್ಮಕ್ಕಳ ತಲೆನೋವು ಜಾಸ್ತಿ ಇರುತ್ತೆ. ಹೆಣ್ಣಿಂದ ತುಂಬಾ ತೊಂದರೆ ಆಗುತ್ತದೆ. ಹೆಣ್ಣೇ ಶತ್ರು. ಗಂಡ – ಹೆಂಡತಿ ಚೆನ್ನಾಗಿರುತ್ತಾರೆ. ಆದರೆ, ಭಿನ್ನಭಿಪ್ರಾಯ ಬರುತ್ತಲೇ ಇರುತ್ತದೆ. ಕ್ಲ್ಯಾಶ್ ಆಗ್ತಾ ಇರುತ್ತೆ. ಮಧ್ಯದಲ್ಲಿ ಬೇರೆಯವರು ಬಂದು ಹೋಗ್ತಾರೆ. ಎಲ್ಲರೂ ಬಿಟ್ಟು ಇವರಿಬ್ಬರೇ ಹ್ಯಾಪಿ ಆಗಿರುವ ಕಾಲ ಮುಂದೆ ಬರುತ್ತೆ.
ಸ್ಟ್ರೋಕ್ ಹೊಡೆಯುವ ಸಂಭವ : ರಾಹು ಭುಕ್ತಿ ಇಂದಾಗಿ 2027ವರೆಗೂ ದರ್ಶನ್ ಅವರಿಗೆ ನೋವು ಕೊಡುತ್ತಾ ಹೋಗುತ್ತೆ. ಸಿನಿಮಾಗಳಲ್ಲಿ ಏರುಪೇರು ಆಗಬಹುದು. ಪರ್ಸನಲ್ ಲೈಫ್‌ನಲ್ಲೂ ಆಗಬಹುದು. ಅದಾದ್ಮೇಲೆ ಶನಿದೆಸೆ ಶುರುವಾಗುತ್ತೆ.ರಾಹು ಭುಕ್ತಿಯಲ್ಲಿ ಆರೋಗ್ಯ ಸಮಸ್ಯೆ ಆಗಬಹುದು. ಸ್ಟ್ರೋಕ್ ಆಗುವ ಸಾಧ್ಯತೆ ಇದೆ.
6 ಅಂದ್ರೇನೇ ಡೇಂಜರ್ : ದರ್ಶನ್ ಅವರು ಹುಟ್ಟಿರೋದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. 7 ಮತ್ತು 6 ಗುಡ್ ಕಾಂಬಿನೇಶನ್. ಆದರೆ ಈ ವರ್ಷ 16, 6, 8 ನಂಬರ್‌ಗಳು ಸರಿ ಇಲ್ಲ. ಈ ವರ್ಷದ 6ನೇ ತಿಂಗಳು ಡೇಂಜರ್’’ ಅಂತ ಆರ್ಯವರ್ಧನ್ ಗುರೂಜಿ ತಿಳಿಸಿದ್ದಾರೆ. ಅಸಲಿಗೆ, ದರ್ಶನ್ ಅರೆಸ್ಟ್ ಆಗಿರೋದು ಈ ವರ್ಷದ ಆರನೇ ತಿಂಗಳು ಜೂನ್ʻನಲ್ಲಿ.ರಾಜರಾಜೇಶ್ವರಿ ನಗರದ ವಾಸ್ತುವೇ ಸರಿ ಇಲ್ಲ. ಅಲ್ಲಿರೋ ಯಾರಿಗೂ ನೆಮ್ಮದಿ ಇಲ್ಲ.
ಎಲ್ಲ ಇರುತ್ತೆ. ಆದರೆ ನೆಮ್ಮದಿ ಇರಲ್ಲ : ದರ್ಶನ್ ಹೆಸರಿಗೆ 21 ನಂಬರ್ ಬರುತ್ತೆ. ಅವರ ಡೇಟ್ ಆಫ್ ಬರ್ತ್‌ಗೆ ಇದು ಆಪೋಸಿಟ್ ನಂಬರ್. ಆ ಹೆಸರು ಇರೋವರೆಗೂ ಜಗಳ ಇದ್ದೇ ಇರುತ್ತೆ. ಅವರಿಗೆ ಎಲ್ಲಾ ಇರುತ್ತೆ, ಆದರೆ ನೆಮ್ಮದಿ ಇರಲ್ಲ.
ಹೌದು, ದರ್ಶನ್ ಮೇಲೆ ಇರೋದು ಸಾಮಾನ್ಯ ಕೇಸ್ ಅಲ್ಲ. ಮರ್ಡರ್ ಕೇಸಿನಲ್ಲಿ ಬಿಡುಗಡೆ ಆಗೋದು ಅಷ್ಟು ಸುಲಭ ಅಲ್ಲ. ಸಾಂದರ್ಭಿಕ ಸಾಕ್ಷಿಗಳಷ್ಟೇ ಅಲ್ಲ, ವಿಡಿಯೋ ಸಾಕ್ಷಿಗಳೂ ಇವೆ. ಹೀಗಿರುವಾಗ ದರ್ಶನ್ ಹೊರಗೆ ಬಂದು, ಅದು ಹೇಗೆ ಶಾಸಕ, ಸಚಿವ ಆಗ್ತಾರೆ.. ಏನೋ ಬಿಡಿ.. ಸಾಯುವಾಗ ನೀಡಿರುವ ಹೇಳಿಕೆಗಳಲ್ಲೇ ಅಪರಾಧಿಗಳು ನಿರ್ದೋಷಿಗಳಾಗಿರುವ ಪ್ರಕರಣಗಳೂ ಇವೆ.



