ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ಕೊಡೋದ್ರಲ್ಲಿ ಹೆಸರುವಾಸಿ. ದೇಶದ ಸಂಪತ್ತನ್ನೆಲ್ಲ ಶ್ರೀಮಂತರಿಂದ ಪಡೆದು, ಬಡವರಿಗೆ ಹಂಚುತ್ತೇನೆ ಎಂದು ಹೇಳಿ.. ಆನಂತರ ನಾನು ಹೇಳಿದ್ದು ಹಾಗಲ್ಲ.. ಹೀಗೆ ಎಂದು ಸ್ಪಷ್ಟನೆ ಕೊಟ್ಟಿದ್ದರು. ದೇಶಾದ್ಯಂತ ಇರುವ ಮೀಸಲಾತಿ ನೀತಿಯನ್ನು ಬದಲಿಸುವ, ಶೇ.೫೦ರ ಮಿತಿ ತೆಗೆಯುವ ಹೇಳಿಕೆ ಕೊಟ್ಟಿದ್ದರು. ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆ, ಅವರು ಯಾವ ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತೆ ಎಂದಿದ್ದರು. ಹೀಗೆ ರಾಹುಲ್ ಗಾಂಧಿ ಹೇಳುವ ವಿವಾದಾತ್ಮಕ ಹೇಳಿಕೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದು. ಅಂತಹ ರಾಹುಲ್ ಈಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ಧಾರೆ.
ದೇಶದ ಉನ್ನತ ಹುದ್ದೆಗಳ ನೇಮಕಾತಿಯು ಅರ್ಹತೆಯ ಆಧಾರದ ಮೇಲೆ ನಡೆಯಬಾರದು ಎಂದು ಅವರು ಹೇಳಿದ್ದರು. ಪ್ರತಿಭಾವಂತರನ್ನು ಆಯ್ಕೆ ಮಾಡುವವರು ಯಾರು? ದಲಿತರು ಫೇಲ್ ಆಗುತ್ತಾರೆ ಏಕೆಂದರೆ ಪರೀಕ್ಷೆಯ ಪತ್ರಿಕೆಗಳನ್ನು ಮೇಲ್ಜಾತಿಯವರು ಹೊಂದಿಸುತ್ತಾರೆ. ವ್ಯವಸ್ಥೆಯನ್ನು ಈ ರೀತಿಯಲ್ಲಿಯೇ ಸ್ಥಾಪಿಸಲಾಗಿದೆ. ದಲಿತರನ್ನು ಉನ್ನತ ಸ್ಥಾನದಲ್ಲಿಟ್ಟರೆ ಎಲ್ಲ ಮೇಲ್ವರ್ಗದವರು ಫೇಲ್ ಆಗುತ್ತಾರೆ, ದಲಿತರು ಉತ್ತೀರ್ಣರಾಗುತ್ತಾರೆ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಂಚಿತ ವರ್ಗಗಳು, ಪರಿಶಿಷ್ಟ ವರ್ಗಗಳು ಮತ್ತು ಮುಂದುವರಿದ ಜಾತಿಗಳ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಮೇಲ್ವರ್ಗದ ಜನರು ಪರೀಕ್ಷೆಯಲ್ಲಿ ಪೇಪರ್ ಸೆಟ್ ಮಾಡುತ್ತಾರೆ, ಆದ್ದರಿಂದ ದಲಿತ ಜಾತಿಗಳ ಜನರು ಫೇಲ್ ಆಗುತ್ತಿದ್ದಾರೆ . ಅಮೆರಿಕದಲ್ಲಿ ಕರಿಯರು ಮತ್ತು ಬಿಳಿಯರ ನಡುವೆ ಬಹಳ ಹಿಂದಿನಿಂದಲೂ ಇರುವ ಇಂತಹ ತಾರತಮ್ಯವನ್ನು ರಾಹುಲ್ ಗಾಂಧಿ ಉದಾಹರಣೆ ನೀಡಿ ಸಾಮಾನ್ಯ ಜನರಿಗೆ ವಿವರಿಸುತ್ತಿದ್ದಾರೆ.
ಒಟ್ಟಿನಲ್ಲಿ ದಲಿತರು ಫೇಲ್ ಆಗುತ್ತಿರುವುದಕ್ಕೂ ಮೇಲ್ಜಾತಿಯವರೇ ಕಾರಣ ಎಂಬ ಹೇಳಿಕೆ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಂತೂ.. ರಾಹುಲ್ ಗಾಂಧಿ ವಿಡಿಯೋಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಹಾನಿಕಾರಕ ಎಂದು ಬಣ್ಣಿಸಿದ್ದರೆ.. ರಾಹುಲ್ ಗಾಂಧಿಯನ್ನು ಭಯೋತ್ಪಾದಕನಿಗಿಂತ ಹೆಚ್ಚು ಅಪಾಯಕಾರಿ ಎಂದಿದ್ದಾರೆ ಕೆಲವರು. ಇನ್ನೂ ಕೆಲವರು ರಾಹುಲ್ ಗಾಂಧಿ ಕೇವಲ ಹಿಂದೂಗಳನ್ನು ವಿಭಜಿಸುತ್ತಿಲ್ಲ, ಮುಸ್ಲಿಮರು ಮತ್ತು ದಲಿತರನ್ನು ಸಹ ವಿಭಜಿಸುತ್ತಿದ್ದಾರೆ ಎಂದಿದ್ದಾರೆ.
ರಾಹುಲ್ ಗಾಂಧಿಯವರ ಹೇಳಿಕೆಯನ್ನು ಬಗ್ಗೆ, ಮಾಜಿ ವಿಸಿ ಸೇರಿದಂತೆ 181 ಉಪಕುಲಪತಿಗಳು ಪತ್ರ ಬರೆದಿದ್ದು, ಹೇಳಿಕೆಯನ್ನು ಖಂಡಿಸಿದ್ದಾರೆ. ದೇಶವು ಇಂದು ಶೇಕಡಾ 80 ಕ್ಕಿಂತ ಹೆಚ್ಚು ಖಾಸಗಿ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಅಲ್ಲಿ ಸಂಘಟನೆ ಇಲ್ಲ. ಅರ್ಹತೆಯ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ರಾಹುಲ್ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸುವುದಾಗಿಯೂ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರ ಮತ್ತು ಎನ್‌ಡಿಎ ಮತ್ತು ಇಂಡಿಯಾ ಬಣದ ನಡುವೆ ಮೀಸಲಾತಿ ಕುರಿತು ಬಿಸಿಯಾದ ಚರ್ಚೆಯ ನಡುವೆ ರಾಹುಲ್ ಗಾಂಧಿ ಈ ಹೇಳಿಕೆಗಳನ್ನು ನೀಡಿದ್ದಾರೆ. “ನಿಮ್ಮ ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ, ನಿಮ್ಮ ಭೂಮಿ ಕಿತ್ತುಕೊಳ್ಳಲಾಗಿದೆ. ಆದರೆ ಮಾಧ್ಯಮಗಳು ಆ ಕುರಿತು ವರದಿ ಮಾಡುವುದಿಲ್ಲ. ಅದಕ್ಕೂ ಕಾರಣವಿದೆ. ಈ ಮಾಧ್ಯಮ ಕಂಪನಿಗಳಲ್ಲಿ ಆದಿವಾಸಿಗಳಿಲ್ಲ ಎಂದು ಹೇಳುವ ಮೂಲಕ, ಇಡೀ ದೇಶದ ಮಾಧ್ಯಮ ವ್ಯವಸ್ಥೆ ಆದಿವಾಸಿಗಳ ವಿರುದ್ಧ ನಿಂತಿದೆ ಎಂದು ಸಾರುತ್ತಿದ್ಧಾರೆ ರಾಹುಲ್ ಗಾಂಧಿ.



