ಗ್ರಹಣ ಮುಗಿದ ಬೆನ್ನಲ್ಲೇ ಭೂಕಂಪ ಸರಣಿ ಶುರುವಾಗಿದೆ. ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ರಾತ್ರಿ ಸಂಭವಿಸಿದ ಭೂಕಂಪಕ್ಕೆ 6ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನ್ಯಾಷನಲ್ ಸಿಸ್ಮಾಲಜಿಕಲ್ ಸೆಂಟರ್ ಪ್ರಕಾರ ನೇಪಾಳದ ಪಶ್ವಿಮ ಭಾಗದಲ್ಲಿ 3 ಬಾರಿ ಕಂಪನ ಸಂಭವಿಸಿದೆ. ನೇಪಾಳದ ಪಶ್ಚಿಮ ಭಾಗ ಎಂದರೆ ಭಾರತದ ಕಡೆ. ಮಂಗಳವಾರ ರಾತ್ರಿ 9.07 ನಿಮಿಷಕ್ಕೆ 5.7ರಷ್ಟು ತೀವ್ರತೆಯ ಭೂಕಂಪವಾಗಿದ್ದರೆ ಮಂಗಳವಾರ ರಾತ್ರಿ 9.56 ನಿಮಿಷಕ್ಕೆ 4.1 ಮ್ಯಾಗ್ನಿಟ್ಯೂಡ್ ಭೂಕಂಪವಾಗಿದೆ.
An Earthquake of Magnitude 6.3 with a depth of 10KM strikes Nepal at 1:57AM. Epicentre is at 205km SE of Joshimath, Uttarakhand:National Center for Seismology. #earthquake Tremors felt in various states. https://t.co/NzHpav6Cfc pic.twitter.com/zFNPUvaU30
— All India Radio News (@airnewsalerts) November 8, 2022
ಬುಧವಾರ ಮುಂಜಾನೆ 1 ಗಂಟೆ 57 ನಿಮಿಷಕ್ಕೆ 6.3ರಷ್ಟು ತೀವ್ರತೆಯ ಕಂಪನ ಸಂಭವಿಸಿದೆ. 81 ಕಿ.ಮೀ. ಉದ್ದದವರೆಗೂ ಸಂಭವಿಸಿದ ಕಂಪನ, ಭೂಮಿಯ 10 ಕಿ.ಮೀ. ಆಳದವರೆಗೂ ಕಂಪಿಸಿದೆ. ಮಧ್ಯರಾತ್ರಿ 2.12 ನಿಮಿಸಕ್ಕೆ 6.6 ತೀವ್ರತೆಯ ಮತ್ತೊಂದು ಕಂಪನ. ನೇಪಾಳದ ದೋತಿ ಜಿಲ್ಲೆಯ ಹಳ್ಳಿಗಳಲ್ಲಿ ಹೆಚ್ಚು ಕಂಪನ ಸಂಭವಿಸಿದ್ದು, ಸಾವಿನ ವರದಿ ಕೂಡಾ ಆಗಿರುವುದು ಆ ಪ್ರದೇಶಗಳಲ್ಲೇ. ಇದರ ತೀವ್ರತೆ ದೆಹಲಿಗೂ ವ್ಯಾಪಿಸಿದೆ.
ನೇಪಾಳಕ್ಕೆ ಹೊಂದಿಕೊಂಡೇ ಇರುವ ಉತ್ತರಾಖಂಡ್‍ನ ಪಿತೋರ್‍ಗಢ್, ಗುರುಗ್ರಾಮ, ಗಾಜಿಯಾಬಾದ್, ನೋಯ್ಡಾ, ಕಾನ್ಪುರ, ಮೀರತ್, ಲಖನೌಗಳಲ್ಲೂ ಭೂಮಿ ಕಂಪಿಸಿದೆ. ದೆಹಲಿಯಲ್ಲಿ ಮಧ್ಯರಾತ್ರಿ 1.57ಕ್ಕೆ ಕಂಪಿಸಿದ ಅನುಭವವಾಗಿದೆ.



