Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಮಠ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ : ವಿಪರೀತ ಸಾಲ.. ಸತತ ಸೋಲು.. ಅವಮಾನಗಳ ಸರಮಾಲೆ..!

SpeciallU by SpeciallU
November 3, 2024
in Cinema, News
0 0
0
ಮಠ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ : ವಿಪರೀತ ಸಾಲ.. ಸತತ ಸೋಲು.. ಅವಮಾನಗಳ ಸರಮಾಲೆ..!

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಮಠ, ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ಟಾಟಾ ನ್ಯೂ ಹೆವನ್‌ ಅಪಾರ್ಟ್‌ಮೆಂಟಿನಲ್ಲಿ ವಾಸವಿದ್ದರು. ಅದೇ ಅಪಾರ್ಟ್‌ಮೆಂಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೊದಲ ಪತ್ನಿ ಆರತಿ ಅವರಿಗೆ ಡಿವೋರ್ಸ್‌ ಕೊಟ್ಟಿದ್ದ ಗುರುಪ್ರಸಾದ್‌, ಸುಮಿತ್ರಾ ಎಂಬುವವರನ್ನು ಮದುವೆಯಾಗಿದ್ದರು. ಒಂದು ಪುಟ್ಟ ಮಗುವೂ ಇದೆ.
ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಚಿತ್ರರಂಗಕ್ಕೆ ಬಂದಿದ್ದು ೨೦೦೬ರಲ್ಲಿ. ಮಠ ಚಿತ್ರ ಗುರು ಅವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ಅದಾದ ನಂತರ ಬಂದ ಎದ್ದೇಳು ಮಂಜುನಾಥ ಚಿತ್ರವಂತೂ ಇನ್ನೂ ಒಂದು ಹಂತದ ದಾಖಲೆ ಬರೆಯಿತು. ಕಡಿಮೆ ಬಜೆಟ್‌ ಚಿತ್ರಗಳು, ಚುರುಕು ಮುಟ್ಟಿಸುವ ಸಂಭಾಷಣೆ ಜೊತೆಗೆ ಜಗ್ಗೇಶ್‌ ಅವರ ಮ್ಯಾನರಿಸಂನಿಂದಲೇ ಎರಡೂ ಚಿತ್ರಗಳು ಗೆದ್ದವು.
ಅದರೆ ಅದಾದ ನಂತರ ಜಗ್ಗೇಶ್‌ ಅವರಿಂದ ದೂರವಾದ ಗುರು ಪ್ರಸಾದ್‌, ಡಬಲ್‌ ಮೀನಿಂಗ್‌ ಸಂಭಾಷಣೆಗಳಿಗೇ ಜೋತು ಬಿದ್ದರು. ನಂತರದ ಅವರು ನಿರ್ದೇಶಿಸಿದ್ದ ಚಿತ್ರಗಳು ಕೇವಲ ೩. ಮೂರಕ್ಕೆ ಮೂರು ಚಿತ್ರಗಳೂ ಅಟ್ಟರ್‌ ಫ್ಲಾಪ್.‌ ಧನಂಜಯ ಅವರ ಡೈರೆಕ್ಟರ್‌ ಸ್ಪೆಷಲ್‌, ಎರಡನೇ ಸಲ ಚಿತ್ರಗಳಲ್ಲಿ ಪೋಲಿತನವೇ ಎದ್ದು ಕಂಡಿತ್ತು. ರಂಗನಾಯಕ ಚಿತ್ರದಲ್ಲಿ ಪೋಲಿತನ ಬಿಟ್ಟರೆ ಮತ್ತೇನೂ ಇರಲಿಲ್ಲ. ಹೀಗಾಗಿ ಮಠ ಗುರುಪ್ರಸಾದ್‌ ತಮ್ಮ ಚಿತ್ರಗಳ ಮೇಲಿನ ಹಿಡಿತ ಕಳೆದುಕೊಂಡರು.
ಮಠ, ಎದ್ದೇಳು ಮಂಜುನಾಥ ಖ್ಯಾತಿಯಷ್ಟೇ ಇತ್ತು. ಗುರುಪ್ರಸಾದ್‌ ಅವರಿಗೆ, ಅದಾದ ನಂತರ ಎದುರಾಗಿದ್ದು ನಿರಂತರ ಸೋಲುಗಳು. ಡೈರೆಕ್ಟರ್ ಸ್ಪೇಷಲ್, ಎರಡನೇ ಸಲ, ರಂಗನಾಯಕ ಚಿತ್ರಗಳಲ್ಲಿ ಸತತವಾಗಿ ಸೋತಿದ್ದ ಗುರುಪ್ರಸಾದ್‌, ಇತ್ತೀಚೆಗೆ ರಂಗನಾಯಕ ಚಿತ್ರದ ನಂತರ ಟೀಕೆಗೂ ಗುರಿಯಾಗಿದ್ದರು.
ಜೊತೆಗೆ ಮೈತುಂಬಾ ಸಾಲ, ಸೋಮಾರಿತನದಿಂದ ಇದ್ದ ಗುರುಪ್ರಸಾದ್‌ ಅವರಿಗೆ ಕುಡಿತದ ಚಟವೂ ಅಂಟಿಕೊಂಡಿತ್ತು. ಯಾವುದಾದರೂ ಚಿತ್ರ ಒಪ್ಪಿಕೊಂಡರೆ, ಅತ್ತ ಕೆಲಸ ಶುರು ಮಾಡುತ್ತಲೇ ಇರಲಿಲ್ಲ. ನಿರ್ಮಾಪಕರು ಎಷ್ಟೋ ಜನ ಅಡ್ವಾನ್ಸ್‌ ಕೊಟ್ಟು ರೋಸಿ ಹೋಗಿ ಗುರು ಪ್ರಸಾದ್‌ ಅವರ ಹತ್ತಿರ ಹೋಗುವುದನ್ನೇ ಬಿಟ್ಟಿದ್ದರು. ಯಾವಾಗ ಯಾರೂ ಹತ್ತಿರ ಬರುತ್ತಿಲ್ಲ ಎಂದಾಯಿತೋ.. ಸಾಲಕ್ಕೆ ಕೈಚಾಚಿದರು. ವಾಪಸ್‌ ಕೊಡುವುದಕ್ಕೆ ದುಡಿಮೆ ಇರಲಿಲ್ಲ.
ಜೊತೆಗೆ ಅವಮಾನಗಳೂ ಎದುರಾಗಿದ್ದವು. ಶ್ರೀನಿವಾಸ್‌ ಗೌಡ ಎಂಬ ಉದ್ಯಮಿಯೊಬ್ಬರು ೨೫ ಲಕ್ಷ ರೂ. ಸಾಲ ಕೊಟ್ಟದ್ದರು. ಸಾಲ  ವಾಪಸ್‌ ಮಾಡುವುದಕ್ಕೆ ಆಗಿರಲಿಲ್ಲ. ಹೀಗಾಗಿ ಗುರು ಪ್ರಸಾದ್‌ ವಿರುದ್ಧ ಕೋರ್ಟಿನಲ್ಲಿ ಕೇಸು ಹಾಕಿದ್ದರು. ಕಳೆದ ೨೪ನೇ ತಾರೀಕು ವಿಚಾರಣೆಯೂ ಇತ್ತು. ಆದರೆ ಮೆಡಿಕಲ್‌ ರಿಪೋರ್ಟ್‌ ಕೊಟ್ಟು, ವಿಚಾರಣೆಗೆ ಹೋಗಿರಲಿಲ್ಲ. ಗುರುಪ್ರಸಾದ್‌ ಅವರು ಇನ್ಸ್‌ಟಿಟ್ಯೂಟ್‌ ಆಫ್‌ ಸ್ಕ್ರಿಪ್ಟ್‌ ರೈಟಿಂಗ್‌ ಮತ್ತು ಡೈರೆಕ್ಷನ್‌ ಅನ್ನೋ ಸ್ಕೂಲ್‌ ಕೂಡಾ ನಡೆಸುತ್ತಿದ್ದರು.
ಇತ್ತೀಚೆಗೆ ಪುಸ್ತಕಗಳನ್ನು ಖರೀದಿಸಿ ಹಣ ಕೊಟ್ಟಿಲ್ಲ ಎಂದು ಪುಸ್ತಕ ಮಳಿಗೆಯವರೊಬ್ಬರು ಗುರು ಪ್ರಸಾದ್‌ ವಿರುದ್ಧ ದೂರು ಕೊಟ್ಟಿದ್ದರು. ಎಫ್‌ಐಆರ್‌ ಕೂಡಾ ದಾಖಲಾಗಿತ್ತು.
ಇವು ಬೆಳಕಿಗೆ ಬಂದ ಪ್ರಕರಣಗಳಾದರೆ, ಇನ್ನೂ ಹಲವರು ಸಾಲ ಕೊಟ್ಟು ವಾಪಸ್‌ ಬಾರದೆ ಇದ್ದ ಕಾರಣಕ್ಕೆ ಗುರುಪ್ರಸಾದ್‌ ಅವರನ್ನು ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿದ್ದರು.
ಕೈಲಿ ಹೊಸ ಚಿತ್ರಗಳಿಲ್ಲ. ಜೊತೆಗೆ ಗುರುಪ್ರಸಾದ್‌ ತಮಗೆ ಕೊಟ್ಟ ಕೆಲಸವನ್ನು ವಿಳಂಬ ಮಾಡುತ್ತಿದ್ದರು ಎನ್ನುವ ಆರೋಪವೂ ಇತ್ತು. ಒಂದು ಕಡೆ ಕೆಲಸ ಇಲ್ಲದೆ, ಇನ್ನೊಂದು ಕಡೆ ಸಾಲ ತೀರಿಸಲು ಸಾಧ್ಯವಾಗದೆ.. ಮತ್ತೊಂದು ಕಡೆ ಅವಮಾನ ಭರಿಸಲಾಗದೆ.. ನಿರಂತರ ಹಿಂಸೆ ಅನುಭವಿಸುತ್ತಿದ್ದ ಗುರು ಪ್ರಸಾದ್‌, ನೇಣು ಹಾಕಿಕೊಂಡಿದ್ದಾರೆ.
ವಿಶೇಷ ಅಂದ್ರೆ ನಿನ್ನೆ ಗುರು ಪ್ರಸಾದ್‌ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ದಿನ ಫೋನ್‌ ಮಾಡಿದ ಹಲವರಿಗೆ ಸ್ವಿಚ್‌ ಆಫ್‌ ಮೆಸೇಜ್‌ ಬಂದಿದೆ. ಸತ್ತು ಸುಮಾರು ೧೦ ದಿನಗಳೇ ಆಗಿವೆ. ಹೆಣ ವಾಸನೆ ಬರುವುದಕ್ಕೆ ಶುರುವಾಗಿದೆ.
ಆದರೆ ಆತ್ಮಹತ್ಯೆಗೆ ಇದೇ ಕಾರಣ ಎಂದು ಈಗಲೇ ಹೇಳುವುದು ಸಾಧ್ಯವಾಗುತ್ತಿಲ್ಲ. ಚಿತ್ರೋದ್ಯಮದ ಗಣ್ಯರು, ಗುರುಪ್ರಸಾದ್‌ ಜೊತೆ ಒಡನಾಡಿದ್ದವರೆಲ್ಲ ಇನ್ನೂ ದಿಗ್ಭ್ರಮೆಯಲ್ಲೇ ಇದ್ದಾರೆ.
ಮಠ ಗುರು ಪ್ರಸಾದ್‌ ಅವರ ಅಚ್ಚುಮೆಚ್ಚಿನ ನಟ ಡಾ.ರಾಜ್‌ ಕುಮಾರ್.‌ ಯಾವತ್ತೋ ರಾಜ್‌ ಕುಮಾರ್‌ ತಮ್ಮ ಗಡ್ಡ ಮುಟ್ಟಿದ್ದರು ಎಂಬ ಕಾರಣಕ್ಕೆ ಗಡ್ಡವನ್ನು ಶೇವ್‌ ಮಾಡುವುದನ್ನೇ ಬಿಟ್ಟಿದ್ದ ಗುರು ಪ್ರಸಾದ್‌, ಪುನೀತ್‌ ರಾಜ್‌ ಕುಮಾರ್‌ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಬರಹಗಾರರಾಗಿ ತೆರೆಯ ಹಿಂದೆಯೂ ಕೆಲಸ ಮಾಡಿದ್ದರು. ಹಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ನಟನೆಯೂ ಅಷ್ಟೇ, ಶಿಸ್ತು ಪಾಲನೆ ಮಾಡುತ್ತಿರಲಿಲ್ಲ ಎಂಬ ಆರೋಪಗಳೂ ಇದ್ದವು. ಒಟ್ಟಿನಲ್ಲಿ ಪ್ರತಿಭಾವಂತ ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ.

ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.