ದಿಗ್ವಿಜಯ ನ್ಯೂಸ್ ಚಾನೆಲ್`ನ್ನು (Digvijaya news) ಇಂಗ್ಲಿಷ್`ನ ರಿಪಬ್ಲಿಕ್ ಟಿವಿ (Republic TV) ಖರೀದಿ ಮಾಡಿದೆ. ಈ ಮೂಲಕ ಅರ್ನಾಬ್ ಗೋಸ್ವಾಮಿ (Arnob Goswamy) ಕನ್ನಡ ಸುದ್ದಿ ವಾಹಿನಿಗಳ (kannada news Channels ) ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಆರ್`ಎಲ್ (VRL Group) ಸಮೂಹದ ದಿಗ್ವಿಜಯ ನ್ಯೂಸ್(Digvijaya news) , ಈ ಮೂಲಕ ರಿಪಬ್ಲಿಕ್ ಟಿವಿ (Republic TV) ತೆಕ್ಕೆಗೆ ಸೇರಿದೆ.
2017ರಲ್ಲಿ ವಿಜಯ ಸಂಕೇಶ್ವರ್ (Vijaya Snankeshwar) ಅವರು ಆರಂಭಿಸಿದ್ದ ದಿಗ್ವಿಜಯ ನ್ಯೂಸ್(Digvijaya news), ರಾಜ್ಯದ ಪ್ರಮುಖ ವಾಹಿನಿಗಳಲ್ಲಿ ಒಂದಾಗಿತ್ತು. ಟಿಆರ್`ಪಿಯಲ್ಲಿ(TRP) ಹೇಳಿಕೊಳ್ಳುವಂತ ಸಾಧನೆ ಮಾಡದೇ ಇದ್ದರೂ, ನಂ.1.. 2.. ಅಥವಾ 3.. ಹೀಗೆ ರೇಸಿನಲ್ಲಿ ಇರದೇ ಇದ್ದರೂ, ಪ್ರಮುಖ ಸುದ್ದಿ ವಾಹಿನಿಯಂತೂ (news Channel) ಆಗಿತ್ತು. ಆದರೆ ಪದೇ ಪದೇ ಎಡಿಟರ್`ಗಳ ಬದಲಾವಣೆಯಿಂದಾಗಿ ಕುಸಿಯುತ್ತಾ ಹೋಗಿತ್ತು. ಈ ಐದಾರು ವರ್ಷಗಳಲ್ಲಿ ದಿಗ್ವಿಜಯ ನ್ಯೂಸ್ (Digvijaya news) ಹಲವಾರು ಎಡಿಟರ್‍ಗಳನ್ನು ಕಂಡಿದೆ. ಸದ್ಯಕ್ಕೆ ದಿಗ್ವಿಜಯ ನ್ಯೂಸ್ (Digvijaya news) ಚಾನೆಲ್`ನ ಸಂಪಾದಕರಾಗಿರುವುದು ಸಿದ್ದಪ್ಪ ಕಾಳೋಜಿ (Siddappa kaloji).
ಇನ್ನು ಇಂಗ್ಲಿಷ್ ಟಿವಿ ಚಾನೆಲ್ಲುಗಳಲ್ಲಿ ಅರ್ನಾಬ್ ಗೋಸ್ವಾಮಿ (Arnab Goswamy) ಸೆನ್ಸೇಷನ್ ಸೃಷ್ಟಿಸಿದವರು. ಟೈಮ್ಸ್ ನೌ (TIMES NOW) ಚಾನೆಲ್ಲಿಂದ ಹೊರಬಂದು ರಿಪಬ್ಲಿಕ್ ಟಿವಿ (Republic TV) ಸ್ಥಾಪಿಸಿದರು. ಆರಂಭವಾದ ಮೊದಲ ವಾರದಿಂದಲೇ ರಿಪಬ್ಲಿಕ್ ಟಿವಿ (Republic TV) ಟಿಆರ್`ಪಿಯಲ್ಲಿ (TRP) ನಂ.1 ಸ್ಥಾನಕ್ಕೇರಿತು. ಈ ಮಧ್ಯೆ ಟಿಆರ್`ಪಿ (TRP) ತಿರುಚಿದ ಆರೋಪವನ್ನೂ ಗೋಸ್ವಾಮಿ (Arnab Goswamy) ಎದುರಿಸಬೇಕಾಯ್ತು. ಸದ್ಯಕ್ಕೆ ಅವುಗಳಿಂದ ಮುಕ್ತರಾಗಿದ್ದಾರೆ. ರಿಪಬ್ಲಿಕ್ ಟಿವಿ (Republic TV) ಇಂಗ್ಲಿಷ್ ಅಷ್ಟೇ ಅಲ್ಲ, ಹಿಂದಿ, ಬೆಂಗಾಲಿ ಭಾಷೆಯಲ್ಲಿಯೂ ಆರಂಭಗೊಂಡಿದೆ. ಇಂದು ರಿಪಬ್ಲಿಕ್ ಟಿವಿಯ (Republic TV) ಅರ್ನಾಬ್ ಶೋ ಬೆಂಗಳೂರಿನ ದಿಗ್ವಿಜಯ ಸ್ಟುಡಿಯೋದಿಂದಲೇ ಪ್ರಸಾರವಾಗಲಿದೆ.



