ಶಿವಣ್ಣ (Shivanna) ಹೀರೋ. ಸ್ಟಾರ್. ಅಷ್ಟೆಲ್ಲ ಇದ್ರೂ ಸಿಂಪಲ್. ಯಾರಿಗೂ ಬೇಸರ ಮಾಡದೆ ಇರೋ ನಟನಂತೂ ಅಲ್ಲ, ಆದರೆ ತಮ್ಮ ಸಿಟ್ಟು, ಕೋಪವನ್ನೆಲ್ಲ ಎಷ್ಟೋ ಬಾರಿ ಒಳಗೇ ಅಡಗಿಸಿಕೊಂಡಿದ್ದೂ ಇದೆ. ಘೋಸ್ಟ್ (Ghost) ಚಿತ್ರದ ಪ್ರಚಾರದ ವೇಳೆ ಇದೇ ರೀತಿಯ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಶಿವಣ್ಣ ಬೇಸರ, ಕೋಪಗಳನ್ನೆಲ್ಲ ಅಡಗಿಸಿಕೊಂಡೇ ಉತ್ತರ ಕೊಟ್ಟಿದ್ದಾರೆ.
ಸಿನಿಮಾ ಮಾಡೋಕೆ ಹಣ ತಗೊಳ್ತೀವಿ. ಅದನ್ನು ಗೌರವಯುತವಾಗಿ ತೆಗೆದುಕೊಳ್ಳಬೇಕು. ತೆಗೆದುಕೊಂಡ ದುಡ್ಡಿಗೆ ನ್ಯಾಯ ಕೊಡಬೇಕು. ಬೇಕಾದರೆ ಕಮ್ಮಿ ತಗೊಳ್ಳೋಣ ಎನ್ನುವ ಮಾತು ಹೇಳಿದ್ದಾರೆ. ಶಿವಣ್ಣ ಆ ಮಾತು ಹೇಳಿರೋದು ಕಬ್ಜ ಚಿತ್ರದ ಬಗ್ಗೆ. ಹಾಗಂತ ಶಿವಣ್ಣ ಇಲ್ಲಿ ನಿರ್ದೇಶಕ ಆರ್. ಚಂದ್ರು ಅನ್ನು ದೂರುತ್ತಿಲ್ಲ. ಚಂದ್ರು ಬಗ್ಗೆ ಏನೂ ಹೇಳುತ್ತಿಲ್ಲ. ಅವರ ಬಗ್ಗೆ ಗೌರವವಿದೆ. ಅವರು ಆ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರನ್ನು ನಾವು ತುಂಬಾನೇ ಮಿಸ್ ಲೀಡ್ ಮಾಡಲು ಹೋಗಬಾರದು. ನಾನು ಕಠೋರವಾಗಿ ಹೇಳುತ್ತಿಲ್ಲ. ಇಂತಹದ್ದೊಂದು ವಿಚಾರವನ್ನು ಹೇಳುತ್ತಿದ್ದೇನೆ ಅಷ್ಟೇ ಎಂದಿದ್ದಾರೆ ಶಿವಣ್ಣ.
ಕಬ್ಜ ಚಿತ್ರವನ್ನು ಒಪ್ಪಿಕೊಂಡಿದ್ದಕ್ಕೆ ಕಾರಣವನ್ನೂ ಹೇಳಿರೋ ಶಿವಣ್ಣ ನನಗೂ ಗೊತ್ತಿಲ್ಲ. ಈ ಪಾತ್ರ ಹೀಗಿದೆ. ಇದು ಮುಂದಿನ ಪರ‍್ಟ್ಗೆ ಲೀಡ್ ಕೊಡುತ್ತೆ ಎಂದಿದ್ದರು. ನನಗೂ ಒಂದು ಥ್ರಿಲ್ ಇರುತ್ತೆ. ಉಪೇಂದ್ರ, ನಾನು ಸುದೀಪ್ ಮೂವರು ಅಂತ ನಾನು ಮಾಡಿದೆ ಅಷ್ಟೇ. ಸಿನಿಮಾ ರಿಲೀಸ್ ಆದಾಗ ಶೂಟಿಂಗ್ನಲ್ಲಿದ್ದೆ. ಆಗ ಬೆಂಗಳೂರಿಗೆ ಬರುವಾಗ ಅಲ್ಲಿ ಒಂದೇ ಒಂದು ಸೀನ್ ಸಾರ್. ತುಂಬಾನೇ ಎಕ್ಸ್ಪೆಕ್ಟೇಷನ್ ಇಟ್ಟುಕೊಂಡು ಹೋಗಿದ್ದೆ ಸಾರ್ ಎಂದರು. ಪರ‍್ಟ್ 2ನಲ್ಲಿ ಬರುತ್ತೆ ಎಂದೆ. ಇಲ್ಲಾ ಸರ್ ಕಟೌಟ್ ಅಂದರು. ಕಟೌಟ್ ಎಲ್ಲಾ ಹಾಕಿಬಿಟ್ಟಿದ್ದಾರೆ. ಆಗ ನಮಗೂ ಏನಯ್ಯ ಹಿಂಗೆ ಮಾಡಿದ್ರು ಅಂತ ಅನಿಸುತ್ತೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಕಬ್ಜ’ದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಆದರೂ, ಥಿಯೇಟರ್ ಮುಂದೆ ಕಟೌಟ್ ಅನ್ನು ಕಟ್ಟಲಾಗಿತ್ತು. ಇದು ಜನರನ್ನು ಮಿಸ್ ಲೀಡ್ ಮಾಡುತ್ತೆ ಎಂದು ಶಿವಣ್ಣ ಹೇಳಿದ್ದಾರೆ. ಅಂದ್ರೆ ಶಿವಣ್ಣ ಮಾತಿನ ಅರ್ಥ ಇಷ್ಟೆ, ತಾವು ಹೀರೋ ಆಗಿರೋ ಚಿತ್ರದಲ್ಲಿ ಕಟೌಟ್ ಹಾಕಿದ್ರೆ ಸಮಸ್ಯೆ ಇಲ್ಲ. ಆದರೆ ಅತಿಥಿ ನಟರಾಗಿ ನಟಿಸಿದಾಗ ಕಟೌಟ್ ಹಾಕಿ, ದೊಡ್ಡದಾಗಿ ಪ್ರಮೋಟ್ ಮಾಡಿದರೆ ಜನರಿಗೆ ಪ್ರೇಕ್ಷಕರಿಗೆ ತಪ್ಪು ಸಂದೇಶ ಕೊಟ್ಟಂತಾಗುತ್ತೆ ಅನ್ನೋದು ಶಿವಣ್ಣ ಮಾತಿನ ರ‍್ಥ. ಏಕೆಂದರೆ ಕಬ್ಜ ಚಿತ್ರದಲ್ಲಿ ಹೀರೋ ಉಪೇಂದ್ರ ಅವರೇ ಹೊರತು, ಶಿವಣ್ಣ ಅಥವಾ ಸುದೀಪ್ ಆಗಿರಲಿಲ್ಲ. ಇಬ್ಬರೂ ಬರೋದು ಕೆಲವೇ ನಿಮಿಷಗಳಷ್ಟೇ. ಇನ್ನು ಕಬ್ಜ ಚಿತ್ರದ ಇಂಪ್ಯಾಕ್ಟ್ ಹೇಗಿದೆ ಎಂದರೆ ಕಬ್ಜ ಚಿತ್ರದ ನಂತರ ಬೇರೆ ಭಾಷೆಯವರು ಕನ್ನಡ ಸಿನಿಮಾ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ.
ಹಾಗಾದರೆ ಗೆಸ್ಟ್ ರೋಲ್ ಹೇಗೆ ತೋರಿಸಬೇಕು ಅನ್ನೋದಕ್ಕೆ ಅವರು ಕೊಡುವ ಉತ್ತರ ಜೈಲರ್. ಅತಿಥಿ ಪಾತ್ರ ಅನ್ನೋದು ಜೈರ‍್ನಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಂದರೆ, ಎಲ್ಲೂ ವೈಭವೀಕರಿಸದೆ ಆ ಎಲಿಮೆಂಟ್ ಅನ್ನೇ ಚೆನ್ನಾಗಿ ತೋರಿಸಿದ್ರು. ಇಲ್ಲಿ ಏನು ಮಾಡಿದ್ರು ಇದನ್ನೇ ಫೋಕಸ್ ಮಾಡಿಕೊಂಡು ಹೋದರು. ಕಷ್ಟ ಆಗಿಬಿಡುತ್ತೆ ಎಂದು ಶಿವಣ್ಣ ಹೇಳಿದ್ದಾರೆ.



