ಕೋಡಿ ಮಠದ ಸ್ವಾಮಿಗಳ ಭವಿಷ್ಯವಾಣಿಗಳು ಅವು ಸೃಷ್ಟಿಸುವ ಆತಂಕಗಳ ವಿಚಾರ ಎಲ್ಲರಿಗೂ ಗೊತ್ತಿರುವಂತಹುದ್ದೇ. ಈಗ 2024 ಶುರುವಾದ ಮೇಲೆ ಮೊದಲ ಬಾರಿ ಭವಿಷ್ಯ ಹೇಳಿದ್ದಾರೆ.
ಕೋಡಿ ಶ್ರೀಗಳ ಭವಿಷ್ಯದ ಪ್ರಕಾರ : ಈ ವರ್ಷ ದೊಡ್ಡ ಅವಘಡಗಳು ಸಂಭವಿಸುತ್ತವೆ ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವವಿದೆ 2024 ಜಗತ್ತಿಗೆ ಕಂಟಕವಾಗಲಿದೆ.
ಗದಗ ಜಿಲ್ಲೆಯಲ್ಲಿ ಮಾತನಾಡಿದ ಕೋಡಿ ಮಠದ ಶ್ರೀಗಳು ಕಳೆದ ವರ್ಷಗಳಿಂದ ಆದ ಸಂಕಷ್ಟಕ್ಕೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದಿದ್ಧಾರೆ. , ಅಕಾಲಿಕ ಮಳೆಯಾಗಿ ಲಕ್ಷಾಂತರು ಜನರು ತೊಂದರೆಗೊಳಗಾಗುತ್ತಾರೆ. ಬಾಂಬ್ ಸಿಡಿದು ನೂರಾರು ಜನರು ಅಸುನೀಗುವ ಸಾಧ್ಯತೆಯಿದೆ. ಅಲ್ಲದೇ ಇದರೊಂದಿಗೆ ಪ್ರಕೃತಿ ಮುನಿದು ಭೂಕಂಪ, ಜಲಕಂಟಕ ಎದುರಾಗುತ್ತದೆ ಎಂದು ಮುಂಬರುವ ದಿನಗಳು ಭಯಾನಕವಾಗಿರಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಡಿ ಶ್ರೀಗಳ ಪ್ರಕಾರ 2024ರಲ್ಲಿ ಮತ್ತೊಮ್ಮೆ ಅಣುಬಾಂಬ್ ಸ್ಫೋಟಿಸಲಿದೆ. 2ನೇ ಮಹಾಯುದ್ಧದ ನಂತರ ಅಣುಬಾಂಬ್ ಬಗ್ಗೆ ಆಗಾಗ್ಗೆ ಪ್ರಸ್ತಾಪವಾಗುತ್ತಿರುವದರ ಹೊರತಾಗಿ, ಜನ ಮರೆತಿದ್ದಾರೆ. ಅಣುಬಾಂಬ್ ಸಂಖ್ಯೆ ಹಾಗೂ ದೇಶಗಳ ಹೆಚ್ಚಿರಬಹುದಾದರೂ ಅಣುಬಾಂಬ್ ಪ್ರಯೋಗಗಳಾಗಿಲ್ಲ. ಅಷ್ಟೇ ಅಲ್ಲ, 2024ರ ವರ್ಷ ಭಯಾನಕ ಅನುಭವನ್ನು ನೀಡಲಿದೆ. ಈ ವರ್ಷ ಜಗತ್ತಿನಾದ್ಯಂತ ಒಂದೆರಡು ಪ್ರಧಾನಿಗಳ ಸಾವಾಗುವ ಲಕ್ಷಣವಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ ಎಂದೂ ಹೇಳಿದ್ಧಾರೆ.
ಇಬ್ಬರು ಪ್ರಧಾನಿಗಳು ಸಾವಿಗೀಡಾಗುತ್ತಾರೆ ಎಂಬ ಮಾತೇ ತಲ್ಲಣ ಸೃಷ್ಟಿಸಿರುವುದು ಸುಳ್ಳಲ್ಲ. ಪ್ರಧಾನಿಗಳು, ಅದರಲ್ಲೂ ಅಧಿಕಾರದಲ್ಲಿರುವ ಪ್ರಧಾನಿಗಳು ವಯೋಸಹಜವಾಗಿ ಸತ್ತರೆ ಅಥವಾ ಆರೋಗ್ಯ ಸಮಸ್ಯೆಯಿಂದಾಗಿ ಸತ್ತರೆ ಪರಿಸ್ಥಿತಿ ಅಷ್ಟೇನೂ ಭೀಕರವಾಗಿರಲ್ಲ. ಆದರೆ ಏನಾದರೂ ಕುತಂತ್ರ, ಭಯೋತ್ಪಾದನೆ ದಾಳಿಯಂತಹವುಗಳಿಂದಾಗಿ ಸತ್ತರೆ.. ಆಗ ಜಗತ್ತಿಗೇ ವಿಷಕಾರಿಯಾಗುವ ಅಪಾಯವೂ ಇದೆ.
ದೇಶದಲ್ಲಿ ಅಸ್ಥಿರತೆ, ಯುದ್ಧ ಭೀತಿ, ಅಣುಬಾಂಬ್ ಸ್ಫೋಟಗೊಳ್ಳುವ ಅವಕಾಶವಿದೆ. ಇದರೊಂದಿಗೆ ಜಗತ್ತಿಗೆ ಮತ್ತೊಮ್ಮೆ ರೋಗ ಹರಡುವ ಸಾಧ್ಯತೆ ಜೊತೆಗೆ ದೊಡ್ಡ ಸುನಾಮಿಯೊಂದು ಎದ್ದು ಜಗತ್ತಿಗೆ ಅಪಾಯವಾಗಲಿದೆ. ದೈವ ನಂಬುವುದೊಂದೇ ಪರಿಹಾರ. ದೈವದ ಮೊರೆ ಹೋಗಬೇಕು ಎಂದು ಸಲಹೆ ನೀಡಿದ್ದಾರೆ. ಕೋಡಿ ಶ್ರೀಗಳು ಹೇಳುವ ಭವಿಷ್ಯವಾಣಿಗಳು ಜನರಲ್ಲಿ ಆತಂಕವನ್ನೇ ಹೆಚ್ಚಿಸುತ್ತವೆ ಎನ್ನುವುದು ಸುಳ್ಳಲ್ಲ.



