ರಚಿತಾ ರಾಮ್ ಮತ್ತು ದರ್ಶನ್ ನಡುವಿನ ಬಾಂಧವ್ಯ ಹಳೆಯದು. ರಚಿತಾ ಅವರಿಗೆ ದರ್ಶನ್ ಮೇಲೆ ವಿಪರೀತ ಗೌರವ. ತನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದೇ ದರ್ಶನ್ ಎನ್ನುವ ರಚಿತಾ ರಾಮ್, ಇತ್ತೀಚೆಗೆ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದಾಗಲೂ.. ಅವರ ಪರವೇ ನಿಂತಿದ್ದರು. ಯಾರು ಏನಂದ್ಕೊಳ್ತಾರೆ ಅನ್ನೋದು ಮುಖ್ಯ ಅಲ್ಲ, ನನ್ನ ಭಾವನೆ ಇದು ಎನ್ನುವಂತೆ ಮಾತನಾಡಿದ್ದ ರಚಿತಾ ರಾಮ್, ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗಿದ್ದರು.
ಅಂತಹ ರಚಿತಾ ರಾಮ್ ಅವರು ಚಿತ್ರರಂಗಕ್ಕೆ ಬಂದು 12 ವರ್ಷಗಳಾಗಿವೆ. ನಟಿಯೊಬ್ಬರು ನಾಯಕಿಯಾಗಿ ದಶಕಗಳ ಕಾಲ ಮಾರ್ಕೆಟ್ ಉಳಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಆ ನಿಟ್ಟಿನಲ್ಲಿ ರಚಿತಾ ರಾಮ್ ಅವರದ್ದು ಸಾಧನೆ ಎಂದೇ ಹೇಳಬಹುದು. ರಚಿತಾ ರಾಮ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ದರ್ಶನ್. ದರ್ಶನ್ ಅವರ ಜೊತೆ ಬುಲ್ ಬುಲ್ ಚಿತ್ರದ ಮೂಲಕವೇ ಹೀರೋಯಿನ್ ಆಗಿ ಎಂಟ್ರಿ ಕೊಟ್ಟ ರಚಿತಾ ರಾಮ್ ಅವರನ್ನು ಇವತ್ತಿಗೂ ಅಭಿಮಾನಿಗಳು ಬುಲ್ ಬುಲ್ ಅಂತಾನೇ ಕರೀತಾರೆ. ಅಂತಹ ರಚಿತಾ ರಾಮ್ ಅವರಿಗೆ ದರ್ಶನ್ ಒಂದು ಸರ್ ಪ್ರೈಸ್ ಕೊಟ್ಟಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜಡ್ಜ್ ಆಗಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷವಾಗಿದ್ದು, ʻಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಸಖತ್ ಗ್ರ್ಯಾಂಡ್ ಆಗಿ ಸೆಲಬ್ರೇಟ್ ಮಾಡಲಾಗಿದೆ. ಸಿಂಹಾಸನದಲ್ಲಿ ಕೂರಿಸಿ ಕಿರೀಟ ಧಾರಣೆ ಮಾಡಲಾಗಿದೆ. “ಇದು ಆರ್ಡಿನರಿ ಡಿಂಪಲ್ ಅಲ್ಲʼʼ ಎಂದು ಕನ್ನಡದ ಕ್ರೇಜಿ ಸ್ಟಾರ್ ಹೇಳಿದ್ದಾರೆ. ಇದೇ ವೇಳೆ ನಟ ದರ್ಶನ್ ಆಡಿಯೋ ಸಂದೇಶದ ಮೂಲಕ ರಚಿತಾ ರಾಮ್ ಅವರಿಗೆ ಸರ್ಪ್ರೈಸ್ ಆಗಿ ಶುಭಕೋರಿದ್ದಾರೆ. ದರ್ಶನ್ ಅವರ ಧ್ವನಿ ಕೇಳುತ್ತಿದ್ದಂತೆ ರಚಿತಾ ರಾಮ್ ಶಾಕ್ ಆಗಿದ್ದಾರೆ.
ನಟಿ ರಚಿತಾ ರಾಮ್ ʻಬೆಂಕಿಯಲ್ಲಿ ಅರಳಿದ ಹೂʼ ಹಾಗೂ ʻಅರಸಿʼ ಧಾರಾವಾಹಿಗಳಲ್ಲಿ ನಟಿಸಿದ್ದರು. ಆ ನಂತರ ದರ್ಶನ್ ಅವರ ʻಬುಲ್ ಬುಲ್ʼ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಮೊದಲ ಸಿನಿಮಾದಲ್ಲಿಯೇ ನಟಿಸಿ ಕಮಾಯಿ ಮಾಡಿದ್ದ ರಚಿತಾ ರಾಮ್, ಅದೇ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಜೊತೆಗೂ ತೆರೆ ಹಂಚಿಕೊಂಡಿದ್ದರು.
ಈ 12 ವರ್ಷಗಳಲ್ಲಿ ರಚಿತಾ ರಾಮ್ ದರ್ಶನ್, ಸುದೀಪ್, ಪುನೀತ್, ಧ್ರುವ ಸರ್ಜಾ, ಶ್ರೀಮುರಳಿ, ಉಪೇಂದ್ರ, ದುನಿಯಾ ವಿಜಯ್, ಗಣೇಶ್, ನೀನಾಸಂ ಸತೀಶ್, ಶಿವರಾಜ್ ಕುಮಾರ್, ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ಅಂಬರೀಷ್, ರಮೇಶ್ ಅರವಿಂದ್, ರಾಣಾ, ಪ್ರಜ್ವಲ್ ದೇವರಾಜ್, ಶ್ರೀನಗರ ಕಿಟ್ಟಿ.. ಹೀಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ.
ರಚಿತಾ ರಾಮ್ ಅವರ ಮೇಲೆ ದರ್ಶನ್ ಅವರಿಗೂ ವಿಶೇಷ ಪ್ರೀತಿ ಇದೆ. ನಮ್ಮ ಬುಲ್ ಬುಲ್ ಎಂದೇ ಕರೆಯೋ ದರ್ಶನ್ ಅವರ ಬಗ್ಗೆ, ರಚಿತಾ ಅವರ ಇಡೀ ಕುಟುಂಬದಲ್ಲಿ ಗೌರವ ಇದೆ.