ನಟ ದರ್ಶನ್‌ಗೆ ಹಿಂದಿನಿಂದಲೂ ಬೆಂಬಲವಾಗಿ ನಿಂತಿದ್ದವರು ಸುಮಲತಾ. ದರ್ಶನ್ ಇನ್ನೂ ಚಿತ್ರರಂಗದಲ್ಲಿ ಕಾಲೂರುತ್ತಿದ್ದಾಗಿನಿಂದಲೂ ಸುಮಲತಾನೇ ಬೆಂಬಲವಾಗಿ ನಿಂತಿದ್ದರು. ಈ ಹಿಂದೆ ಕೌಟುಂಬಿಕವಾಗಿ ಹಲವು ಸಮಸ್ಯೆಗಳಾದಾಗ ಮುಂದೆ ನಿಂತು ಬಗೆಹರಿಸಿದ್ದವರು ಸುಮಲತಾ. ಆದರೆ ಈಗ ಇದ್ದಕ್ಕಿದ್ದಂತೆ ಮಿಸ್ಸಿಂಗ್.
ನಟ ದರ್ಶನ್ ಅವರನ್ನು ತಮ್ಮ ದೊಡ್ಡ ಮಗ ಎಂದು ಬಾಯ್ತುಂಬಾ ಹೇಳುತ್ತಿದ್ದ ಸುಮಲತಾ ಅಂಬರೀಷ್ ಎಲ್ಲಿ ಹೋದರು? ಮಂಡ್ಯದಲ್ಲಿ ಸಂಸದೆಯೂ ಆಗಿದ್ದ ಸುಮಲತಾ ಅವರನ್ನು ದರ್ಶನ್ ಕೂಡಾ ಅಮ್ಮ ಎಂದೇ ಕರೆಯುತ್ತಿದ್ದರು. ಅಮ್ಮ ಹೇಳಿದ್ರೆ ಏನ್ ಬೇಕಾದ್ರೂ ಮಾಡ್ತೇನೆ ಎನ್ನುತ್ತಿದ್ದರು ದರ್ಶನ್. ಅಭಿಷೇಕ್ ಅವರನ್ನು ತಮ್ಮ ಎಂದೇ ಕರೆಯುತ್ತಿದ್ದರು. ಆದರೆ, ಕೊಲೆ ಕೇಸಿನಲ್ಲಿ ಅರೆಸ್ಟ್ ಆದ ದಿನದಿಂದ ಸುಮಲತಾ ಅಂಬರೀಷ್ ಹೊರಗೆಲ್ಲೂ ಕಾಣುತ್ತಿಲ್ಲ.
ದರ್ಶನ್ ಅವರು ಹಾಗೆ ಮಾಡಿಲ್ಲ ಅಥವಾ ಮಾಡುವ ವ್ಯಕ್ತಿ ಅಲ್ಲ ಎಂದೂ ಹೇಳುತ್ತಿಲ್ಲ. ದರ್ಶನ್ ಅವರು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಕಾನೂನು ಕ್ರಮ ಎದುರಿಸಲಿ ಎಂದು ಕೂಡಾ ಹೇಳ್ತಿಲ್ಲ. ತಮ್ಮನ್ನು ಎಂಪಿ ಮಾಡಿದ್ದೇ ದರ್ಶನ್ ಎನ್ನುತ್ತಿದ್ದ ಸುಮಲತಾ ಅಂಬರೀಷ್ ಮಾಧ್ಯಮಗಳ ಎದುರೂ ಬರುತ್ತಿಲ್ಲ. ಅಭಿಷೇಕ್ ಅಂಬರೀಷ್ ಕೂಡಾ ಬರುತ್ತಿಲ್ಲ.
ಅತ್ತ ಹೆತ್ತ ತಾಯಿ ಮೀನಾ ತೂಗುದೀಪ್ ಶ್ರೀನಿವಾಸ್ ಅವರಾಗಲೀ, ತಮ್ಮ ದಿನಕರ್ ತೂಗುದೀಪ್ ಅವರಾಗಲೀ, ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಾಗಲೀ.. ಯಾರೂ ಕೂಡಾ ಜೊತೆಯಲ್ಲಿಲ್ಲ.
ಒಟ್ಟಿನಲ್ಲಿ ಬಚಾವ್ ಆಗಬಹುದಾದ ತಪ್ಪುಗಳಾದಾಗ ದರ್ಶನ್ ಅವರನ್ನು ತಿದ್ದಿದ್ದರೆ, ಬುದ್ದಿ ಹೇಳಿದ್ದರೆ.. ದರ್ಶನ್ ಬದಲಾಗುತ್ತಿದ್ದರೇನೋ.. ಆದರೆ.. ಕಾಲ ಮಿಂಚಿದೆ. ದರ್ಶನ್ ಅವರು ಜೈಲಿನಿಂದ ಹೊರಬರುವುದು ಅಷ್ಟು ಸುಲಭವಲ್ಲ.



