ದರ್ಶನ್ ಅವರ ಮನೆಯ ಒಳಗಿನ ಜಗಳ ಮನೆಯೊಳಗಿನ ಜಗಳವಾಗಿ ಉಳಿದಿಲ್ಲ. ಆಗಾಗ್ಗೆ ಬೀದಿಗೆ ಬರುತ್ತಲೇ ಇರುತ್ತೆ. ಒಂದಷ್ಟು ದಿನ ಸುದ್ದಿ ಆಗಿಲ್ಲ ಎಂದರೆ, ಗಲಾಟೆ ನಡೆದಿಲ್ಲ ಎಂದರ್ಥವೇ ಹೊರತು, ಎಲ್ಲವೂ ಬಗೆಹರಿದಿದೆ ಎಂದಲ್ಲ. ನಟ ದರ್ಶನ್ ಅವರ ಕುಟುಂಬ ಮತ್ತೊಮ್ಮೆ ಕುಟುಂಬ ಜಗಳಕ್ಕೆ ಸಾಕ್ಷಿಯಾಗುತ್ತಿದೆ. ಅದು ಶುರುವಾಗಿರುವುದು ಒಂದು ಫೋಟೋದಿಂದ.
ನಟಿ ಪವಿತ್ರ ಗೌಡ ಅವರು ದರ್ಶನ್ ಅವರ ಜೊತೆ ಆತ್ಮೀಯವಾಗಿರುವ ಫೋಟೋ ಹಾಕಿಕೊಂಡಿದ್ದಾರೆ. ಆ ಫೋಟೋಗಳನ್ನೆಲ್ಲ ಸೇರಿಸಿ ಒಂದು ಚೆಂದದ ಹಾಡಿನ ಹಿನ್ನೆಲೆಯನ್ನೂ ಕೊಟ್ಟು, ನಮ್ಮ ಸಂಬಂಧಕ್ಕೀಗ 10 ವರ್ಷ ಎಂದು ಬರೆದುಕೊಂಡಿದ್ದಾರೆ. ಫೋಟೋಗಳಲ್ಲಿ ದರ್ಶನ್, ಪವಿತ್ರಾ ಗೌಡ ಮತ್ತು ಪವಿತ್ರಾ ಗೌಡರ ಮಗಳು ಇದ್ಧಾರೆ.
ಪವಿತ್ರಾ ಗೌಡ ಅವರ ಪೋಸ್ಟ್ ಹೊರಬೀಳುತ್ತಿದ್ದಂತೆಯೇ ವಿಜಯಲಕ್ಷ್ಮೀ ದರ್ಶನ್ ಆಕ್ರೋಶ ಹೊರಹಾಕಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಪವಿತ್ರಾ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಾಕಿಕೊಂಡು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ, ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ. ಈ ಚಿತ್ರಗಳಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯುವ ಮೂಲಕ ಸಂಜಯ್ ಸಿಂಗ್, ಖುಷಿ ಗೌಡ, ಶಾನ್ವಿ ಸಂಸೂರಿ ಹಾಗೂ ಪವಿತ್ರಾ ಗೌಡ ಅಕೌಂಟ್ಗೆ ಟ್ಯಾಗ್ ಮಾಡಿದ್ದಾರೆ.
ಈ ರೀತಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಪವಿತ್ರಾ ಗೌಡ ಅವರ ಮಗಳು ಖುಷಿ ಹುಟ್ಟುಹಬ್ಬದಲ್ಲಿ ದರ್ಶನ್ ಭಾಗಿಯಾಗಿದ್ದರು. ಒಟ್ಟಿಗೆ ಎರಡು ಕೇಕ್‌ಗಳನ್ನು ಕಟ್ ಮಾಡಿ ಸಂಭ್ರಮಿಸಿದ್ದರು.
ಪವಿತ್ರಾ ಗೌಡ ಅವರೂ ನಟಿಯೇ. ಚತ್ರಿಗಳು ಸಾರ್ ಚತ್ರಿಗಳು, ಆಗಮ್ಯ, ಸಾಗುವ ದಾರಿಯಲ್ಲಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ 54321 ಚಿತ್ರದಲ್ಲೂ ನಟಿಸಿದ್ಧಾರೆ. ರೆಡ್ ಕಾರ್ಪೆಟ್ ಸ್ಟುಡಿಯೋ ಮೂಲಕ ಫ್ಯಾಷನ್ ಡಿಸೈನಿಂಗ್ʻನಲ್ಲಿ ಸಕ್ರಿಯರಾಗಿದ್ಧಾರೆ.



