ದರ್ಶನ್ ಅವರು ಹೆಣ್ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡ್ತಾರೆ ಎಂದು ಹಲವರು ದೂರುತ್ತಿದ್ದರೂ.. ಅವರಿಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ಏನೂ ಕಮ್ಮಿ ಆಗಿಲ್ಲ.
ದರ್ಶನ್ ಅವರ ಅಭಿಮಾನಿಗಳ ಬಳಗ ದೊಡ್ಡದು. ಮಹಿಳಾ ಅಭಿಮಾನಿಗಳ ಬಳಗ ಇನ್ನೂ ದೊಡ್ಡದರು. ಹೀಗಾಗಿಯೇ ಅಭಿಮಾನಿಗಳನ್ನು ಸೆಲಬ್ರಿಟೀಸ್ ಎಂದು ಕರೆಯೋ ದರ್ಶನ್ ನ್ನ ಪ್ರೀತಿ ಸೆಲೆಬ್ರಿಟೀಸ್’ ಎಂದು ಎದೆ ಮೇಲೆ ಟ್ಯಾಟೂ ಕೂಡಾ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳೂ ಅಷ್ಟೆ, ಸಾವಿರಾರು ಅಭಿಮಾನಿಗಳ ಎದೆ ಮೇಲೆ ದರ್ಶನ್ ಟ್ಯಾಟೂ ಇದೆ. ಎದೆ ಮೇಲೆ, ಕೈಯ ಮೇಲೆ, ಬೆನ್ನ ಮೇಲೆ ದರ್ಶನ್ ಅವರ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ಧಾರೆ.
ಆದರೆ ಇಲ್ಲೊಬ್ಬರು ಮಹಿಳೆ ಎದೆ ಮೇಲೆ ದರ್ಶನ್ ಫೋಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮಮತಾ ಎಂಬ ದರ್ಶನ್ ಅಭಿಮಾನಿ ಮಹಿಳೆಯೊಬ್ಬರು ತಮ್ಮ ಎದೆ ಮೇಲೆ ದರ್ಶನ್ ಅವರ ಫೋಟೋ ಜೊತೆಗೆ ಡಿ ಬಾಸ್ ಎಂದು ಹಚ್ಚೆ ಹಾಕಿಸಿಕೊಂಡಿದ್ಧಾರೆ. ಇಷ್ಟು ಮಾತ್ರವಲ್ಲ ಕೈಯಲ್ಲೂ ದರ್ಶನ್ ಫೋಟೋ ಹಚ್ಚೆ ಹಾಕಿಸಿಕೊಂಡಿದ್ದಾರೆ. ಸದ್ಯ ಇನ್ಸ್ಟಾಗ್ರಾಂನಲ್ಲಿ ಇವರ ಟ್ಯಾಟೂ ವಿಡಿಯೋ ವೈರಲ್ ಆಗುತ್ತಿದೆ.
ದರ್ಶನ್ ಅವರು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ತಾರೆ, ಬೈತಾರೆ, ಹೆಂಡತಿಯನ್ನೇ ಬಾಯಿಗೆ ಬಂದಂತೆ ಬೈತಾರೆ, ದರ್ಶನ್ ಅವರಿಗೆ ಹೆಣ್ಮಕ್ಕಳ ಬಗ್ಗೆ ಗೌರವ ಇಲ್ಲ ಎನ್ನುವವರೆಲ್ಲ ಇಂತಹ ಮಹಿಳಾ ಅಭಿಮಾನಿಯನ್ನು ನೋಡಬೇಕು ಎನ್ನುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಅಲ್ಲಲ್ಲ.. ದರ್ಶನ್ ಸೆಲೆಬ್ರಿಟೀಸ್.



