ಇತ್ತೀಚೆಗೆ ಮತಾಂತರ ಮದುವೆ ಪ್ರಕರಣಗಳು ಹೆಚ್ಚುತ್ತಿವೆ. ಹಲವು ಚಿತ್ರ ನಟ/ನಟಿಯರು ತಮ್ಮ ಧರ್ಮ ಬದಲಿಸಿ ಮದುವೆಯಾಗಿದ್ದಾರೆ. ಕೆಲವರು ಖುಷಿಯಾಗಿದ್ದಾರೆ. ಕೆಲವರ ಸಂಸಾರ ಹಾಳಾಗಿದೆ. ಇದರ ಮಧ್ಯೆ ಲವ್ ಜಿಹಾದ್ ಕೇಸುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಿರುವಾಗಲೇ ಖ್ಯಾತ ನಟಿ ರಾಖಿ ಸಾವಂತ್, ತಮಗೆ ಮೈಸೂರಿನ ಆದಿಲ್ ಎಂಬ ಉದ್ಯಮಿ ಮತಾಂತರ ಮಾಡಿ, ನಿಖಾ ಆಗಿ ಮೋಸ ಮಾಡಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.

ಬಾಲಿವುಡ್‍ನ ರಾಖಿ ಸಾವಂತ್ ಸಿನಿಮಾಗಳಿಗಿಂತ, ನಟನೆಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಖ್ಯಾತರಾದವರು. ಮತ್ತೊಂದು ವಿವಾದದ ಮೂಲಕವೇ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ರಾಖಿ ಸಾವಂತ್, ಮೈಸೂರಿನ ಹುಡುಗ ಆದಿಲ್ ಎಂಬುವವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈಗ ಅದೇ ಆದಿಲ್ ಜೊತೆ ರಾಖಿ ಸಾವಂತ್ ಮದುವೆಯಾಗಿದ್ದಾರಂತೆ. 2022ರ ಜುಲೈನಲ್ಲಿ ಗುಟ್ಟಾಗಿ ನಡೆದ ನಿಖಾದಲ್ಲಿ ರಾಖಿ ಸಾವಂತ್ ಮತಾಂತರವಾಗಿದ್ದಾರಂತೆ. ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದರಂತೆ. ಆದರೆ ಈಗ ಆದಿಲ್ ತಮ್ಮಿಬ್ಬರ ಮದುವೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ ರಾಖಿ ಸಾವಂತ್.
2022ರಲ್ಲಿ ನಾವಿಬ್ಬರೂ ಮದುವೆಯಾದೆವು. ನಿಖಾಗಾಗಿ ಇಸ್ಲಾಂಗೆ ಮತಾಂತರವಾದೆ. ಫಾತಿಮಾ ಎಂದು ಹೆಸರು ಬದಲಿಸಿಕೊಂಡೆ. ಜುಲೈನಲ್ಲೇ ಮದುವೆಯಾಯಿತು. ಈ ಮದುವೆ ಬಗ್ಗೆ ತಿಳಿದರೆ ನನ್ನ ತಂಗಿಗೆ ಗಂಡು ಸಿಕ್ಕಲ್ಲ ಎಂದು ಹೇಳಿದರು. ಈಗ ನೋಡಿದರೆ ಮದುವೆಯೇ ಆಗಿಲ್ಲ. ರಾಖಿ ಸಾವಂತ್ ನನ್ನ ಪತ್ನಿಯೇ ಅಲ್ಲ ಎನ್ನುತ್ತಿದ್ದಾನೆ ಎಂದಿರೋ ರಾಖಿ ಸಾವಂತ್, ಮದುವೆ ನೋಂದಣಿ ಪತ್ರ ಹಾಗೂ ಇಬ್ಬರೂ ಹಾರ ಬದಲಿಸಿಕೊಂಡಿರೋ ಫೋಟೋ ಬಹಿರಂಗ ಪಡಿಸಿದ್ದಾರೆ. ಆದರೆ ಆದಿಲ್, ತಾವು ರಾಖಿ ಸಾವಂತ್ ಅವರನ್ನು ಮದುವೆಯಾಗಿಲ್ಲ ಎಂದಿದ್ದಾರೆ.





