ಆತ ಮೊದ ಮೊದಲ ದಿನಗಳಲ್ಲಿ ಸೈಕಲ್ ಮೇಲೆ ಬೀದಿ ಬೀದಿ ಸುತ್ತಿ ಉಂಗುರಗಳು, ತಾಯತಗಳನ್ನು ಮಾರ್ತಿದ್ನಂತೆ. ಈಗ ನೋಡಿದರೆ.. ಆತನ ಬಳಿ 160 ಕೋಟಿಯ ಆಸ್ತಿ ಇದೆ. ಕಾರಣ ಮತಾಂತರ ಮಾಫಿಯಾ. ಧಾರ್ಮಿಕ ಮತಾಂತರ ಗ್ಯಾಂಗ್‌ನ ಮಾಸ್ಟರ್ ಮೈಂಡ್ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಚಂಗೂರ್ ಬಾಬಾ ಮತ್ತು ಆತನ ಸಹ ಆರೋಪಿ ನೀತು ಅಲಿಯಾಸ್ ನಸ್ರೀನ್ ಬಲರಾಂಪುರ ಜಿಲ್ಲೆಯ ಮಾಧ್‌ಪುರ ನಿವಾಸಿಗಳು,ಜಲಾಲುದ್ದೀನ್ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಅತ್ತ ಪೊಲೀಸರು ಆತನ ಬಂಧನಕ್ಕೆ 50,000 ರೂಪಾಯಿ ನಗದು ಬಹುಮಾನ ಘೋಷಿಸಿದ್ದರು. ಇದೀಗ ಆತನನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಕಾರ್ಯಾಚರಣೆಯ ಅಡ್ಡೆಯ ಮೇಲೆ ಯೋಗಿ ಸರ್ಕಾರ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿ ಕೆಡವಿ ಹಾಕಿದೆ.ಆತನ ಜೊತೆಗೆ ಮುಂಬೈ ಮೂಲದ ನವೀನ್ ಮತ್ತು ನೀತು ರೋಹ್ರಾ ದಂಪತಿಗಳನ್ನು ಕೂಡ ಅಧಿಕಾರಿಗಳು ಬಂಧಿಸಿದ್ದಾರೆ.
ಚಂಗೂರ್ ಬಾಬಾ ಮನೆಯನ್ನು ಧ್ವಂಸ ಮಾಡುವ ವೇಳೆ ಕಾರ್ಯಾಚರಣೆಯಲ್ಲಿ ಬಂಗಲೆಯ ಒಳಗಡೆ ಶೋಧ ಮಾಡಲಾಯ್ತು. ಈ ವೇಳೆ ಆತನ ರೂಮ್ನಲ್ಲಿದ್ದ ವಸ್ತುಗಳನ್ನು ಕಂಡು ಖುದ್ದು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಔಷಧಗಳು, ವಿದೇಶಿ ಎಣ್ಣೆ, ಶಾಂಪೂ, ಸೋಪ್, ನೆಲದ ಕ್ಲೀನರ್, ಅಸ್ವಿ ಬೂಟೀಕ್‌ನ ಬಿಲ್ ಪುಸ್ತಕ, ಧಾರ್ಮಿಕ ಪುಸ್ತಕಗಳ ರಹಸ್ಯ ಕೊಠಡಿ ಮತ್ತು ವಿದ್ಯುತ್ ಪ್ರವಾಹದ ಮುಳ್ಳುತಂತಿಗಳ ಗೋಡೆಗಳು ಬಯಲಾಗಿವೆ. ಈ ಆಘಾತಕಾರಿ ಬೆಳವಣಿಗೆಗಳು ಚಂಗೂರ್ ಬಾಬಾ ನಡೆಸುತ್ತಿದ್ದ ಸಂಘಟಿತ ಅಕ್ರಮ ಮತಾಂತರ ಜಾಲ ಮತ್ತು ವಿದೇಶಿ ದೇಣಿಗೆ ದಾಖಲೆಗಳು ಲಭ್ಯವಾಗಿವೆ.
ಎಂಟು ಬುಲ್ಡೋಜರ್‌ಗಳನ್ನು ಬಳಸಿಕೊಂಡು, ಗ್ರಾಮ ಸಭೆಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕೋಟೆಯ 40 ಕೊಠಡಿಗಳನ್ನು ಕೆಡವಲಾಗುತ್ತಿದೆ. ಒಟ್ಟು 70 ಕೊಠಡಿಗಳಿರುವ ಈ ಬೃಹತ್ ಕೋಟೆಯನ್ನು ಮೂರು ಬಿಘಾ ಭೂಮಿಯಲ್ಲಿ ನಿರ್ಮಿಸಲಾಗಿತ್ತು.ಕೋಠಿಯ ಎತ್ತರದ ಗೋಡೆಗಳ ಮೇಲಿನ ವಿದ್ಯುತ್ ಪ್ರವಾಹದ ಮುಳ್ಳುತಂತಿಗಳು ಮತ್ತು ರಹಸ್ಯ ಕೊಠಡಿಯ ಧಾರ್ಮಿಕ ಪುಸ್ತಕಗಳು ಅಕ್ರಮ ಚಟುವಟಿಕೆಗಳಿಗೆ ಸಾಕ್ಷಿಯಾಗಿವೆ.
ಚಂಗೂರ್ ಬಾಬಾ ಬಳಿ ಒಟ್ಟು 40 ಬ್ಯಾಂಕ್ ಅಕೌಂಟ್‌ಗಳಿದ್ದು, ಬಹುತೇಕ ಹಣವು ಮಧ್ಯಪ್ರಾಚ್ಯದಿಂದ ಬರುತ್ತಿದೆ.ಚಂಗೂರ್ ಬಾಬಾ ನೇತೃತ್ವದ ಗ್ಯಾಂಗ್‌ಗೆ ಯಾವುದೇ ಭಯೋತ್ಪಾದಕ ಸಂಬಂಧಗಳಿವೆಯೇ ಎಂದು ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತನಿಖೆ ನಡೆಸುತ್ತಿದೆ. ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕೂಡ, ಈ ಕುರಿತುತನಿಖೆ ಮಾಡುತ್ತಿದೆ.ಪೀರ್ ಬಾಬಾ ಎಂದೂ ಕರೆಯಲ್ಪಡುವ ಚಂಗೂರ್ ಬಾಬಾನ ಇತರೆ ಗಳಿಕೆಯನ್ನು ತನಿಖೆ ಮಾಡಲು, ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರತೇಕ ಪ್ರಕರಣ ದಾಖಲಿಸಿದೆ.
ಈತನ 40 ಅಕೌಂಟುಳಲ್ಲಿ 160 ಕೋಟಿಗೂ ಹೆಚ್ಚು ಹಣ ಇದ್ದು, ಆ ಎಲ್ಲ ಹಣವನ್ನೂ ಮತಾಂತರಕ್ಕೆ ಬಳಸುತ್ತಿದ್ದ ಎನ್ನಲಾಗಿದೆ.ಬಲರಾಂಪುರ ಕಟ್ಟಡದ ಹೊರತಾಗಿ, ಚಂಗೂರ್ ಬಾಬಾ ಹಲವಾರು ಇತರ ಸ್ಥಳಗಳಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದಾನೆ. ಒಂದೊಂಂದು ಬಂಗಲೆಯ ಮೌಲ್ಯ 16 ಕೋಟಿಗೂ ಹೆಚ್ಚು.



