ನೇಹಾ ಹಿರೇಮಠ. ಹುಬ್ಬಳ್ಳಿಯಲ್ಲಿ ಕೊಲೆಯಾದ ಯುವತಿ. ಮೂಲತಃ ಬೆಳಗಾವಿಯ ಹುಡುಗಿ. ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ʻನಲ್ಲಿ ಎಂಸಿಎ ಓದುತ್ತಿದ್ದರು. ಈ ಹುಡುಗಿಯ ತಂದೆ ನಿರಂಜನ ಹಿರೇಮಠ ಮೂಲತಃ ಕಾಂಗ್ರೆಸ್ಸಿಗರು. ಕಾರ್ಪೊರೇಟರ್ ಆಗಿದ್ದ ನಿರಂಜನ ಹಿರೇಮಠ ಅವರಿಗೆ ಮಗಳು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅಪ್ಪನ ನಿರೀಕ್ಷೆಗೆ ತಕ್ಕಂತೆಯೇ ಕೈತುಂಬಾ ಮಾರ್ಕು ತೆಗೆದುಕೊಳ್ಳುತ್ತಿದ್ದಳು ನೇಹಾ ಹಿರೇಮಠ.
ಆ ಹುಡುಗಿಯ ಮೇಲೆ ಕಣ್ಣುಹಾಕಿದವರು ಫಯಾಜ್. ಇವನೂ ಮೂಲತಃ ಬೆಳಗಾವಿಯವನೇ. ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ. ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ದುರಂತವೆಂದರೆ.. ಮೇಷ್ಟ್ರ ಮಗ.. ಕೊಲೆ ಮಾಡಿ ಜೈಲು ಸೇರಿದ್ಧಾನೆ.
ಮೇಷ್ಟ್ರ ಮಗನಾದರೂ ವಿದ್ಯೆ ತಲೆಗೆ ಹತ್ತಿರಲಿಲ್ಲ. ಕಳೆದ ಆರು ತಿಂಗಳಿಂದ ಫೇಲ್ ಆಗಿ ಕಾಲೇಜ್ ಬಿಟ್ಟಿದ್ದ ಫಯಾಜ್ ನೇಹಾ ಓದುತ್ತಿದ್ದ ಕಾಲೇಜಿನಲ್ಲೇ ಬಿಸಿಎ ಓದುತ್ತಿದ್ದ. ಬಿಸಿಎ ಕಲಿಯುವಾಗ ನೇಹಾಳ ಸಹಪಾಠಿಯಾಗಿದ್ದ ಫೇಲ್ ಆದ ಮೇಲೆ ಡ್ರಾಪ್ ಔಟ್ ಆಗಿದ್ದ.
ನೇಹಾ ಹಿರೇಮಠ್ ಮೇಲೆ ಕಣ್ಣು ಹಾಕಿದ್ದ ಫಯಾಜ್, ಹಲವು ಬಾರಿ ಪ್ರೀತ್ಸೆ ಪ್ರೀತ್ಸೆ ಎಂದು ಬೆನ್ನು ಬಿದ್ದಿದ್ದ. ನೇಹಾ ನಿರಾಕರಿಸಿದ್ದಳು. ಫಯಾಜ್ ನೇಹಾ ಹಿರೇಮಠ ಕೊಲೆ ಮಾಡಲೆಂದೇ ಕಾಲೇಜ್ ಗೆ ಚಾಕು ಸಮೇತ ಬಂದು ಕೊಂದು ಹಾಕಿದ್ಧಾನೆ. ಹಾಡಹಗಲಲ್ಲೇ ವಿದ್ಯಾರ್ಥಿಗಳ ಎದುರಲ್ಲೇ ಕ್ಯಾಂಪಸ್ಸಿನಲ್ಲೇ ನೇಹಾ ಕುತ್ತಿಗೆಗೆ ಒಂಭತ್ತು ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾನೆ.
ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ.. ೯ರಿಂದ ೧೦ ಕಡೆ ತೀವ್ರವಾಗಿ ರಕ್ತ ಸೋರಿ ಸೋರಿ ನೇಹಾ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ. ಪ್ರಕರಣಕ್ಕೆ ಈಗ ರಾಜಕೀಯ ಸ್ವರೂಪವೂ ಸಿಕ್ಕಿದೆ. ಜಕೀಯ ಮಾತ್ರವಲ್ಲದೇ ಹಿಂದೂ-ಮುಸ್ಲಿಂ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇದಕ್ಕೆ ಪೂರಕವೆಂಬತೆ ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ.
ಬಿಜೆಪಿ ಪ್ರಶ್ನೆ:
ಅರಾಜಕತೆಯೇ ಆಡಳಿತದ ಧ್ಯೇಯ – ಕಾನೂನು ಸುವ್ಯವಸ್ಥೆ ಮಂಗಮಾಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರ. ಸಿಎಂ ಸಿದ್ದರಾಮಯ್ಯನವರೇ ಇದು ಅರಾಜಕತೆಯ ಹಾಗೂ ಓಲೈಕೆ ಆಡಳಿತದ ಪ್ರತಿಫಲವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಮೇಲೆ ಫಯಾಜ್ ಚಾಕು ಇರಿದು ಸಾಯಿಸಿದ್ದಾನೆ. ನಿಮ್ಮ ತುಷ್ಟೀಕರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕ ಹಿಂದೂಗಳನ್ನು ಬಲಿ ಹಾಕುತ್ತೀರಿ.
ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ ಧಾರವಾಡ ಸಂಸದ
ನೇಹಾ ಯುವತಿಯ ಕೊಲೆ ಹಿಂದೆ ಲವ್ ಜಿಹಾದ್ ಇದ್ದು ಕೂಡಲೇ ಕೊಲೆಗಾರನಿಗೆ ಗಲದಲುಯ ಶಿಕ್ಷೆ ಆಗಲಿ. ಹಾಡಹಗಲೇ ಹತ್ಯೆ ಆಗಿರೋದು ನೋಡಿದ್ರೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಮೊನ್ನೆ ತಾನೇ ಐದು ಜನ ಯುವಕರು ಬೈಕ್ ಮೇಲೆ ಹೊಗೋವಾಗ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡೋ ಹೇಯ ಕೃತ್ಯ ನಡೆದಿತ್ತು. ಇಂಥ ಘಟನೆಗಳಿಗೆ ಸರ್ಕಾರದ ತುಷ್ಟೀಕರಣ ನೀತಿಯೇ ಕಾರಣ. ಸಮಾಜಘಾತಕರಿಗೆ ಭಯ ಇಲ್ಲದಂತಾಗಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಘಟನೆ ಸಂಬಂಧ ಯಾರೊಬ್ಬರೂ ಉದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಲೀ ಅಥವಾ ಸಮಾಜದ ಶಾಂತಿ ಕದಡುವ ಪ್ರಯತ್ನಕ್ಕೆ ಮುಂದಾಗಬಾರದು. ಯುವತಿಯ ಸಾವಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಕ್ತಿಮೀರಿ ಶ್ರಮಿಸಲಿದೆ. ಘಟನೆ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಕಟ್ಟುನಿಟ್ಟಿನ ತನಿಖೆ ನಡೆಸಿ, ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ಕ್ರಮವಹಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ.
ಪೊಲೀಸರ ಪ್ರಕಾರ..
ಘಟನೆ ನಡೆದ ಒಂದು ಗಂಟೆಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದೇವೆ. ಬಿವಿಬಿ ಕಾಲೇಜ್ ಗೆ ನುಗ್ಗಿ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಪರಾರಿಯಾಗಲು ಯತ್ನಿಸಿದ್ದವನನ್ನು ಹಿಡಿದು ಬಂಧಿಸಿದ್ದೇವೆ. ಆರೋಪಿ ಫಯಾಜ್ ಪ್ರಕಾರ ನೇಹಾ ಇತ್ತೀಚಿಗೆ ಫಯಾಜ್ ನನ್ನ ಅವೈಡ್ ಮಾಡಿದ್ದಳು. ಮೊದಲು ಇಬ್ಬರು ಪರಿಚಯದಿಂದಲೇ ಇದ್ದರು. ಇತ್ತೀಚೆಗೆ ಅವೈಡ್ ಮಾಡಿರುವ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಇದು ಆರೋಪಿ ವರ್ಷನ್ ಅಗಿದೆ. ನಾವು ತಂದೆ ತಾಯಿ ಬಳಿಯೂ ಮಾಹಿತಿ ಪಡೆಯುತ್ತೇವೆ.



