ವಯಸ್ಸು ಕೇವಲ 30 ವರ್ಷ. ಬಾಡಿ ಬಿಲ್ಡರ್ಸ್ ಲೋಕದಲ್ಲಿ ದೊಡ್ಡ ಸ್ಟಾರ್. ಈತ ಕನ್ನಡಿಗರಿಗೆ ಪರಿಚಿತನಾಗಿದ್ದು ಪೊಗರು ಚಿತ್ರದ ಮೂಲಕ. ಜರ್ಮನಿಯ ಬಾಡಿ ಬಿಲ್ಡರ್ ಇದ್ದಕ್ಕಿದ್ದಂತೆ ಹಠಾತ್ತನೆ ನಿಧನರಾಗಿದ್ದಾರೆ. ಪೊಗರು (Pogaru) ಚಿತ್ರದ ಕ್ಲೈಮಾಕ್ಸ್ನಲ್ಲಿ ಅಮೆರಿಕದ ಖ್ಯಾತ ಬಾಡಿ ಬಿಲ್ಡರ್ ಕಾಯ್ ಗ್ರೀನ್ (Coy Green), ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರೋ ಜಾನ್ ಲುಕಾಸ್ (John Lukas) ಹಾಗೂ ಜರ್ಮನಿಯ ಫಿಟ್ನೆಸ್ ಸೆನ್ಸೇಷನ್ ಹಾಗೂ ಬಾಡಿ ಬಿಲ್ಡರ್ ಜೋ ಲಿಂಡ್ನೆರ್ (Joe Lindner) ಕ್ಲೈಮ್ಯಾಕ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಮೂವರ ಎಂಟ್ರಿ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿತ್ತು. ತಮ್ಮ ದೇಹದಾರ್ಢ್ಯತೆಯಿಂದಲೇ ವಿಶ್ವದಾದ್ಯಂತ ಜನಪ್ರಿಯರಾಗಿದ್ದ ಬಾಡಿ ಬಿಲ್ಡರ್ಗಳಿದ್ದ ಕಾರಣಕ್ಕೇ ಪೊಗರು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಬಾಡಿ ಬಿಲ್ಡರ್ ಜೊತೆ ಧ್ರುವ ಸರ್ಜಾ (Dhruva Sarja) ಆಕ್ಷನ್ ಸೀನ್ಗಳು ಆಕ್ಷನ್ ಪ್ರಿಯರನ್ನು ರೊಚ್ಚಿಗೆಬ್ಬಿಸಿದ್ದವು. ಅವರಲ್ಲಿ ಒಬ್ಬನಾಗಿದ್ದ, ಕಿರಿಯನೂ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಕೊನೆಯುಸಿರೆಳೆದಿದ್ದಾರೆ. ಜರ್ಮನಿ ಮೂಲದವರಾದರೂ ಜೋ ಲಿಂಡ್ನರ್ ಹಲವು ವರ್ಷಗಳಿಂದ ಥಾಯ್ಲೆಂಡ್ನಲ್ಲಿ ನೆಲೆಸಿದ್ದರು. ಇಷ್ಟೊಂದು ಫಿಟ್ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಸಾವನ್ನಪ್ಪಿದ್ದಾರೆ. ಈ ಹಠಾತ್ ಸಾವು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ.
ಲಿಂಡ್ನೆರ್ ಬಾಯ್ಪ್ರೆಂಡ್ ನಿಚಾ ನಿಧನದ ಬಗ್ಗೆ ಹೇಳಿಕೊಂಡಿದ್ದಾರೆ. ಜೊ ರಕ್ತನಾಳ ಸಮಸ್ಯೆಯಿಂದ ನಿಧನಹೊಂದಿದರು. ನಾನು ಅವರ ಜೊತೆ ರೂಮಿನಲ್ಲೇ ಇದ್ದೆ. ಅವನು ನನಗಾಗಿ ಮಾಡಿದ್ದ ನೆಕ್ಲೆಸ್ ಅನ್ನು ನನ್ನ ಕುತ್ತಿಗೆಗೆ ಹಾಕಿದರು. ನಾವು ಮುದ್ದಾಡಿದೆವು. ಸಾಯುವುದಕ್ಕಿಂತ ಮೂರು ದಿನಗಳ ಮುಂಚೆ ತನ್ನ ಕುತ್ತಿಗೆ ನೋವಾಗುತ್ತಿದೆ ಎಂದು ಹೇಳಿದ್ದನು. ನಾವು ನಿಜಕ್ಕೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಸಮಯ ಮೀರುವವರೆಗೂ ಅರ್ಥವಾಗಿಲ್ಲ ಜೋ ಲಿಂಡ್ನರ್ ಗರ್ಲ್ಫ್ರೆಂಡ್ ಇನ್ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.



