ಗ್ಯಾರಂಟಿ ಗಲಾಟೆ ಜೋರಾಗಿದೆ. ಮೊದಲ ಕ್ಯಾಬಿನೆಟ್ಟಿನಲ್ಲಿ ಇಡೀ ಯೋಜನೆ ಯಾವುದೂ ಜಾರಿಯಾಗಿಲ್ಲ. ಇನ್ನೂ ಸರ್ಕಾರವೇನೋ ಅಧಿಕಾರಿಗಳಿಗೆ, ಆಯಾ ಇಲಾಖೆಗಳಿಗೆ ಅಂದಾಜು ವೆಚ್ಚ ತಯಾರಿಸಿ ಎಂದು ಹೇಳಿದೆ. ಇಲಾಖೆಗಳು ಅಂದಾಜು ವೆಚ್ಚ ತಯಾರಿಸಬೇಕು. ವರ್ಷಕ್ಕೆ ಸುಮಾರು 50 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರಾದರೂ, ಒಂದು ಸಮಗ್ರ ಲೆಕ್ಕ ಮಾಡಲಿಕ್ಕೆ ಸಮಯ ತೆಗೆದುಕೊಳ್ಳಲಿದೆ. ಕಂಡೀಷನ್ಸ್ ಇರಬೇಕು. ಷರತ್ತುಗಳೊಂದಿಗೇ ಎಲ್ಲ ಯೋಜನೆಗಳೂ ಜಾರಿಯಾಗಲಿವೆ. ಕಾಯಬೇಕಷ್ಟೆ.



