ಮೊಬೈಲ್ ಇದ್ದವರು ಸೇಫ್ ಅಲ್ಲ. ಅದರಲ್ಲೂ ಸಿಕ್ಕ ಸಿಕ್ಕ ಲಿಂಕ್ ಮೇಲೆ ಕ್ಲಿಕ್ ಮಾಡುವವರು ಅಪಾಯವನ್ನು ಆಹ್ವಾನಿಸುತ್ತಲೇ ಇರುತ್ತಾರೆ. ಅದರಲ್ಲೂ ಬೆತ್ತಲೆ ವಿಡಿಯೋಗಳಿಗೆ ಅಡಿಕ್ಟ್ ಆಗಿರುವವರನ್ನು ಸೈಬರ್ ಕ್ರಿಮಿನಲ್ʻಗಳು ಸುಲಭವಾಗಿ ಬಲೆಗೆ ಕೆಡವಿಕೊಳ್ತಾರೆ. ಈಗಿನ ಜಗತ್ತಿನಲ್ಲಿ ಅತಿ ಹೆಚ್ಚು ಬೆಲೆ ಬಾಳುವುದು ಏನಾದರೂ ಇದ್ದರೆ.. ಅದು ಡೇಟಾ. ಯಾರ ಬಳಿ ಹೆಚ್ಚು ಹೆಚ್ಚು ವ್ಯಕ್ತಿಗಳ ಪರ್ಸನಲ್ ಡೇಟಾ ಇದೆಯೋ.. ಅವರಿಗೆ ಅಷ್ಟು ದೊಡ್ಡ ಡಿಮ್ಯಾಂಡ್ ಸಿಗುತ್ತದೆ. ಆ ಡೇಟಾ ಇಟ್ಕೊಂಡು ಏನ್ ಮಾಡ್ತಾರೆ ಅನ್ನೋ ಪ್ರಶ್ನೆಯೂ ಇರುತ್ತದೆ.
ಸಿಂಪಲ್ಲಾಗ್ ಹೇಳ್ಬೇಕಂದ್ರೆ.. ಯಾವುದೇ ಮೊಬೈಲ್ ಇಲ್ಲದ ಕಾಲದಲ್ಲಿ ಕಳ್ಳರು, ದಾಳಿಕೋರರು ಊರು ಅಥವಾ ರಾಜ್ಯದ ಮಾಹಿತಿ ನೀಡುವವರಿಗೆ ದುಡ್ಡು ಕೊಡುತ್ತಿದ್ದರಲ್ಲ.. ಅದೇ ರೀತಿ ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ ಡೇಟಾ ನೀಡುವವರಿಗೇ ಡಿಮ್ಯಾಂಡ್ ಇದೆ.
ಕೇಂದ್ರ ಸರ್ಕಾರವು ಇತ್ತಿಚೇಗೆ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಅಷ್ಟಕ್ಕೂ ಭಾರತ ಸರ್ಕಾರ ನೀಡಿದ ಎಚ್ಚರಿಕೆ ಏನು? ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಫೋನ್‌ನಲ್ಲಿ ಅನಿಯಂತ್ರಿತ ಕೋಡ್ಗಳನ್ನು ತರುವ ಮೂಲಕ ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಡೇಟಾಗಳನ್ನು ಪಡೆಯಲು ಹೊಸ ಯಂತ್ರವನ್ನು ಹುಡುಕ್ಕಿದ್ದಾರೆ.
CERT-In ನಿಂದ ನೀಡಿದ ಭದ್ರತಾ ಬುಲೆಟಿನ್ ಪ್ರಕಾರ, ಸೈಬರ್ ಕಳ್ಳರು ಫ್ರೇಮ್‌ವರ್ಕ್, ಸಿಸ್ಟಮ್, Google Play ಸಿಸ್ಟಮ್, RM ಘಟಕಗಳು, MediaTek ಘಟಕಗಳು, ಇಮ್ಯಾಜಿನೇಶನ್ ಘಟಕಗಳು, Qualcomm ಕಾಂಪೊನೆಂಟ್‌ಗಳು ಮತ್ತು Qualcomm ಕ್ಲೋಸ್-ಸೋರ್ಸ್ಡ್ ಕಾಂಪೊನೆಂಟ್‌ಗಳಲ್ಲಿ ಇದನ್ನು ಅಳವಡಿಸಿದ್ದಾರೆ. ಇದು Android ಆವೃತ್ತಿ 12, 12L, 13, ಮತ್ತು 14 ರ ಮೇಲೆ ಪರಿಣಾಮ ಬೀರುತ್ತವೆ.
ಇನ್ನು ನಮ್ಮ ಭಾರತದಲ್ಲಿ ಈ ಆವೃತ್ತಿ ಫೋನ್ಗಳನ್ನು ಬಳಕೆ ಮಾಡುವವರ ಸಂಖ್ಯೆ 10 ಮಿಲಿಯನ್‌ಗಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ. Samsung, Realme, OnePlus, Xiaomi ಮತ್ತು Vivo ನಂತಹ ಬ್ರ್ಯಾಂಡ್‌ಗಳು ಈ ಸಮಸ್ಯೆ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಒಂದು ವೇಳೆ ಇಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚರಿಕೆಯನ್ನು ವಹಿಸಿ ಎಂದು ಕೇಂದ್ರ ಎಚ್ಚರಿಕೆ ನೀಡಿದೆ.
ಕಂಪನಿಗಳು ಹ್ಯಾಕಿಂಗ್ ತಡೆಯಲು ಸೆಕ್ಯುರಿಟಿ ಪ್ಯಾಚ್‌ಗಳ ಬಿಡುಗಡೆ ಆರಂಭಿಸಿವೆ. ಈಗಾಗಲೇ ಕೆಲವು ಮೊಬೈಲ್‌ಗಳಿಗೆ ಈ ಪ್ಯಾಚ್‌ಗಳು ಬರುತ್ತಿದ್ದು, ಮುಂಬರುವ ವಾರಗಳಲ್ಲಿ ಉಳಿದ ಮೊಬೈಲ್ ಫೋನ್‌ಗಳಿಗೂ ಬರಲಿವೆ. ಸೆಕ್ಯುರಿಟಿ ಪ್ಯಾಚ್‌ಗಾಗಿ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್ ಹೋಗಿ, ಸಿಸ್ಟಮ್ ಅಪ್‌ಡೇಟ್ ಕ್ಲಿಕ್ ಮಾಡಿ, ಸಾಫ್ಟ್‌ವೇರ್ ಮೇಲೆ ಒತ್ತುವ ಮೂಲಕ ಭದ್ರತಾ ಪ್ಯಾಚ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಲ್ಲಿವರೆಗೂ ಅಪಾಯಕಾರಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದು ಅಥವಾ ಗೊತ್ತಿಲ್ಲದವರಿಂದ ಬರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ಮಾಡಬಾರದು ಎಂದು ಸೈಬರ್ ತಂತ್ರಜ್ಞರು ಸಲಹೆ ಮಾಡಿದ್ದಾರೆ.
ಮೊಬೈಲ್ ಸಿಸ್ಟಮ್(mobile system), ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್(Google play system update)ಗಳು, ಆರ್ಮ್ ಕಾಂಪೋನೆಂಟ್‌ಗಳು, ಮೀಡಿಯಾ ಟೆಕ್, ಇಮಾಜಿನೇಷನ್, ಕ್ವಾಲ್‌ಕಾಂ ಕಾಂಪೋಂನೆಂಟ್‌ಗಳಲ್ಲಿ ಕೆಲವೊಂದು ಲೋಪದೋಷಗಳು ಪತ್ತೆಯಾಗಿವೆ. ಇದರಿಂದಾಗಿ ಆ್ಯಂಡ್ರಾಯ್ಡ್ 12, 12ಎಲ್, 13 ಹಾಗೂ 14ನೇ ಆವೃತ್ತಿಯನ್ನು ಬಳಸುತ್ತಿರುವ ಗ್ರಾಹಕರ ಮೊಬೈಲ್‌ಗಳು ಅಪಾಯಕ್ಕೆ ತುತ್ತಾಗಬಹುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಇಂತಹ ಸೈಬರ್ ಕಳ್ಳಾಟದಿಂದ ಕಾಪಾಡಲು ಈಗಾಗಲೇ ಭದ್ರತಾ ಪ್ಯಾಚ್ ಬಿಡುಗಡೆ ಮಾಡಲಾಗಿದೆ. ಇದು ಇಂತಹ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಇದರ ಜತೆಗೆ ಹೆಚ್ಚಿನ ಫೋನ್ ಬ್ರ್ಯಾಂಡ್‌ಗಳಿಗೆ ಈ ಸಮಸ್ಯೆಗಳ ಕುರಿತು ಸೂಚನೆ ನೀಡುತ್ತದೆ. ಈ ತಂತ್ರದ ಬಗ್ಗೆ ಸೆಟ್ಟಿಂಗ್‌ಗಳು, ಸಿಸ್ಟಮ್ ಅಪ್‌ಡೇಟ್, ಸಾಫ್ಟ್ವೇರ್ಗಳಲ್ಲಿ ನವೀಕರಣ ಮಾಡಲಾಗಿದೆ. ಈ ಬಗ್ಗೆ ನೀವು ಒಮ್ಮೆ ಪರಿಶೀಲನೆ ಮಾಡಬಹುದು. ಹಾಗೂ ಈ ಭದ್ರತಾ ಪ್ಯಾಚ್ ಅಕ್ರಮ ವೆಬ್‌ಸೈಟ್, ಲಿಂಕ್ಗಳನ್ನು ಓಪನ್ ಮಾಡದಂತೆ ಎಚ್ಚರಿಕೆಯನ್ನು ನೀಡುತ್ತದೆ.



