ಸೈಕ್ಲೋನ್ ಹೊಸದಲ್ಲ. ಆದರೆ ಈ ಸೈಕ್ಲೋನ್ ಅಪರೂಪಕ್ಕೆ ಆಗುವಂತಹದ್ದು. ಭಾರತಕ್ಕಿಂತ 7 ಪಟ್ಟು ದೊಡ್ಡ ಭೂಪ್ರದೇಶ ಹೊಂದಿರುವ ಅಮೆರಿಕವನ್ನು ನಡುಗಿಸುತ್ತಿರುವುದು ಬಾಂಬ್ ಸೈಕ್ಲೋನ್. ಅಮೆರಿಕದ ಎಲ್ಲ 51 ರಾಜ್ಯಗಳಲ್ಲೂ ಬಾಂಬ್ ಭಯ. ಬಾಂಬ್ ಸೈಕ್ಲೋನ್ ಭಯ. ಈ ಚಂಡಮಾರುತದ ಎಫೆಕ್ಟ್ ಹೇಗಿದೆಯೆಂದರೆ.. 5 ಸಾವಿರಕ್ಕೂ ಹೆಚ್ಚು ವಿಮಾನಗಳು ಕ್ಯಾನ್ಸಲ್ ಆಗಿವೆ. 25 ಸಾವಿರಕ್ಕೂ ಹೆಚ್ಚು ವಿಮಾನಗಳ ಸಮಯ, ಹಾರಾಟ ಏರುಪೇರಾಗಿದೆ. ಚಳಿ, ಹಿಮಗಾಳಿಯ ತೀವ್ರತೆ ಹೇಗಿದೆಯೆಂದರೆ ಮನೆಯಿಂದ ಹೊರಬಂದರೆ ಐದೇ ಐದು ನಿಮಿಷಕ್ಕೆ ಪ್ರಾಸ್ಟ್ ಬೈಟ್ ಆಗುತ್ತಿವೆ. ಪ್ರಾಸ್ಟ್ ಬೈಟ್ ಎಂದರೆ ಚಳಿಯಿಂದ ಚರ್ಮ ಒಡೆದು ಗಾಯವಾಗುವುದು. ಜಸ್ಟ್ 5 ನಿಮಿಷದಲ್ಲಿ ಚಂಡಮಾರುತದ ಗಾಳಿಗೆ ಮೈಯ್ಯೊಡ್ಡಿದರೆ ಚರ್ಮಕ್ಕೆ ಗಾಯ ಫಿಕ್ಸ್. ಅಷ್ಟು ಭಯಾನಕವಾಗಿದೆ ಈ ಬಾಂಬ್ ಸೈಕ್ಲೋನ್.

ಅಮೆರಿಕದ ಕೆಲವು ಪ್ರಾಂತ್ಯಗಳಲ್ಲಿ ಉಷ್ಣಾಂಶ ಏಕ್‍ಧಮ್ 30ರಿಂದ 37 ಡಿಗ್ರಿಗಳಷ್ಟು ಇಳಿಕೆಯಾಗಿದೆ. ಕೆಲವೆಡೆ ಮೈನಸ್ 20 ಡಿಗ್ರಿಗಳಷ್ಟು ಕುಸಿತ ಕಂಡಿದೆ. ಡೆನ್ವೆರ್‍ನಲ್ಲಿ ಜಸ್ಟ್ ಒಂದು ಗಂಟೆ ಅವಧಿಯಲ್ಲಿ ಉಷ್ಣಾಂಶ 37 ಡಿಗ್ರಿಯಷ್ಟು ಇಳಿಕೆಯಾಗಿದೆ. ವಿಂಡ್ ಚಿಲ್ ಎನ್ನುತ್ತಾರಲ್ಲಾ.. ಆ ಪರಿಸ್ಥಿತಿ ಉದ್ಭವಿಸಬಹುದು ಎಚ್ಚರಿಕೆ ಎಂದಿದೆ ಹವಾಮಾನ ಇಲಾಖೆ. ಉಷ್ಣಾಂಶ ಮೈನಸ್ 60 ಡಿಗ್ರಿಗೂ ಇಳಿಯುವ ಸಾಧ್ಯತೆ ಇದೆ ಎನ್ನುವುದು ಹವಾಮಾನ ಇಲಾಖೆಯ ಆತಂಕ. ಮಂಗಳ ಗ್ರಹದಲ್ಲಿ ಮೈನಸ್ 81 ಡಿಗ್ರಿ ಉಷ್ಣಾಂಶ ಇರುತ್ತದೆ. ಆ ಮಟ್ಟಕ್ಕೆ ಇಳಿದರೆ.. ಅಮೆರಿಕದ ಸ್ಥಿತಿ ಕ್ಷಣ ಕ್ಷಣವೂ ನರಕವಾಗಲಿದೆ. ಆರ್ಕಿಕ್ಟ್ ತೀರದಿಂದ ಬೀಸುತ್ತಿರುವ ಭಾರೀ ಚಳಿಗಾಳಿಯು ಚಂಡಮಾರುತದ ಸ್ವರೂಪ ಪಡೆದುಕೊಂಡು ಅಮೆರಿಕದ ಹಲವು ರಾಜ್ಯಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ 20 ಸೆಂ.ಮೀಗಿಂತ ಹಿಮಪಾತವಾಗಿದೆ. ಚಂಡಮಾರುತಕ್ಕೆ ತುತ್ತಾದ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಏನಿದು ಬಾಂಬ್ ಸೈಕ್ಲೋನ್..?
ಚಂಡಮಾರುತದ ಗಾಳಿಯೇ ವಿಭಿನ್ನ. ಗಾಳಿಯಲ್ಲೂ ವಿವಿಧ ಮಾದರಿಗಳಿವೆ. ಒಣ ಗಾಳಿ, ಬಿಸಿ ಗಾಳಿ.. ಹೀಗೆ.. ಗಾಳಿಯಲ್ಲಿರುವ ಉಷ್ಣಾಂಶವನ್ನಾಧರಿಸಿ ಅವುಗನ್ನು ವಿಭಾಗ ಮಾಡುತ್ತಾರೆ. ಅಂತಹ ಬೇರೆ ಬೇರೆ ಗಾಳಿಯು ಒಂದಾದ ವೇಳೆ ಸೈಕ್ಲೋನ್ ಬಾಂಬ್ ಸೃಷ್ಟಿಯಾಗುತ್ತದೆ. ತಣ್ಣನೆಯ ಗಾಳಿ ಮತ್ತು ಬಿಸಿ ಗಾಳಿ ಒಂದಾಗುತ್ತವಲ್ಲ.. ಆಗ ಹಗುರವಾಗಿರುವ ಬಿಸಿ ಗಾಳಿ ಮೇಲೆ ಏರುತ್ತದೆ. ಹಾಗೆ ಮೇಲೆ ಹೋಗುವ ಬಿಸಿ ಗಾಳಿ ಮೋಡವನ್ನು ಸೃಷ್ಟಿಸುತ್ತಿದೆ. ಹಾಗೆ ಸೃಷ್ಟಿಯಾದ ಮೋಡಗಳಿಂದ ವಾಯುಭಾರ ಕುಸಿತವಾಗುತ್ತದೆ. ವಾಯುಭಾರ ಕುಸಿದಾಗ ಕೆಳಗಿನ ಭಾಗದಲ್ಲಿ ತಣ್ಣನೆಯ ಗಾಳಿ ಇರುತ್ತದಲ್ಲ.. ಅದು ಸುರುಳಿಯಾಕಾರದಲ್ಲಿ ತಿರುಗತೊಡಗುತ್ತದೆ. ಅದೂ ಆಂಟಿಕ್ಲಾಕ್ ದಿಕ್ಕಿನಲ್ಲಿ ಸುತ್ತಲು ಶುರುವಾದಾಗ ಉದ್ಭವವಾಗುವ ಚಂಡಮಾರುತವನ್ನೇ ಬಾಂಬ್ ಸೈಕ್ಲೋನ್ ಎನ್ನುತ್ತಾರೆ.
ಗಾಳಿಯ ಒತ್ತಡವನ್ನು ಮಿಲಿಬಾರ್‍ಗಳಲ್ಲಿ ಅಳೆಯುತ್ತಾರೆ. ಈ ಮಿಲಿಬಾರ್‍ಗಳು 1000ದಿಂದ ಒಂದು ಸಾವಿರದ ಐವತ್ತು (1050) ವರೆಗೂ ಇರುವುದು ಸಾಮಾನ್ಯ. ಆದರೆ ಅಮೆರಿಕದ ಬಹುತೇಕ ಪ್ರಾಂತ್ಯಗಳಲ್ಲಿ ಈ ಮಿಲಿಬಾರ್ 960ಕ್ಕೆ ಇಳಿದಿದೆ. ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿ. ಒಂದು ದಿನದಲ್ಲಿ 24 ಮಿಲಿಬಾರ್ ಕಡಿಮೆಯಾದರೆ ಚಂಡಮಾರುತ ಸೃಷ್ಟಿಯಾಗುತ್ತದೆ. ಸದ್ಯಕ್ಕೆ ಈ ಮಿಲಿಬಾರ್ ಇನ್ನಷ್ಟು ಕಡಿಮೆಯಾಗುವ ಅತಂಕವಿದೆ. ಹೀಗಾದರೆ ಏಕಕಾಲಕ್ಕೆ ಹಿಮಪಾತ, ಗಾಳಿ, ಭಾರಿ ಮಳೆ, ಪ್ರವಾಹ ಎಲ್ಲವೂ ಸಂಭವಿಸಬಹುದು. ಡೇಂಜರ್..



